ಆತ್ಮನಿರ್ಭರ ಭಾರತ | ಮನ್‌ ಕೀ ಬಾತ್‌ ಮೂಲಕ ಬಾಳೆ ಕಾಯಿ ಹುಡಿ (ಬಾಕಾಹು) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

July 25, 2021
2:41 PM
ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆ ಹಾಗೂ ಮಲೆನಾಡಿನಲ್ಲಿ ಬಾಳೆ ಕಾಯಿ ಹುಡಿ (ಬಾಕಾಹು) ಬಗ್ಗೆ ರೈತರ ನಡುವೆ ಚರ್ಚೆ ಆರಂಭವಾಗಿತ್ತು. ಬಾಳೆಗೊನೆಗೆ ಧಾರಣೆ ಇಲ್ಲ ಎನ್ನುವ ಸಂದರ್ಭದಲ್ಲಿ ರೈತರೇ ಹೊಸದೊಂದು ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ಅದಕ್ಕೆ ಅಡಿಕೆ ಬೆಳೆಗಾರರ ಪತ್ರಿಕೆಯಾದ ಅಡಿಕೆ ಪತ್ರಿಕೆ ಬೆನ್ನೆಲುಬಾಗಿ ನಿಂತು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಕಾರಣವಾಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ  ಬಾಳೆ ಕಾಯಿ ಹುಡಿ ಹಾಗೂ ಉದ್ಯಮದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

Advertisement

 

ಆತ್ಮ ನಿರ್ಭರ ಭಾರತದ ಕನಸಿನ ಬಗ್ಗೆ ಉಲ್ಲೇಖ ಮಾಡಿದ ಪ್ರಧಾನಿಗಳು  ನೀವು ಕೈಮಗ್ಗದ ಬಟ್ಟೆ ಖರೀದಿ ಮಾಡಿದರೆ ದೇಶದ ಬಡ ಜನರಿಗೆ ನೆರವಾಗಲಿದೆ. ಖಾದಿ ಮಳಿಗೆಯಲ್ಲಿ ಒಂದು ದಿನದಲ್ಲಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬುದು ಸಾಬೀತಾಗಿದೆ ಎಂದ ಪ್ರಧಾನಿಗಳು ನಾವು ದೇಶದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತೇವೆ. ಇಲ್ಲಿ ಹೊಸ ಹೊಸ ಉದ್ಯಮದ ಐಡಿಯಾಗಳು ಸಿಗುತ್ತವೆ. ಯುವಕರು ಈ ಮೂಲಕ ಪ್ರೇರಿತರಾಗಿ ಕಾರ್ಯನಿರ್ವಹಣೆ ಮಾಡಲು ಅನುಕೂಲವಾಗಿದೆ. ನಾವು ಹೊಸದನ್ನು ಕಲಿಯಬೇಕಾದರೆ ಪ್ರಯೋಗಳನ್ನು ಮಾಡಬೇಕು. ರೈತರು, ಯುವಕರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅದರಲ್ಲಿ ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದರು. ಬಾಳೆ ಮರದ ನಾರಿನಿಂದ ಇಂದು ಹ್ಯಾಂಡ್ ಬ್ಯಾಗ್ ತಯಾರು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಸಿಕ್ಕಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಗುಲಾಬ್‌ ಜಾಮೂನು, ದೋಸೆ ಮೊದಲಾದ ಉತ್ಪನ್ನಗಳನ್ನು  ಮಹಿಳೆಯರು ಮಾಡುತ್ತಿದ್ದಾರೆ.ಇಲ್ಲಿ ಹೊಸ ಆವಿಷ್ಕಾರ ಮಹಿಳೆಯರಿಂದಲೇ ಆಗಿದೆ ಎಂದು ಉಲ್ಲೇಖಿಸಿದರು.

 

ಚಿತ್ರ : ಶ್ರೀಪಡ್ರೆ

ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ  ವೇಗವಾಗಿ ಬಾ ಕಾ ಹು ಬಗ್ಗೆ ಪ್ರಚಾರ ಪಡೆಯಲು ಅಡಿಕೆ ಪತ್ರಿಕೆ ಹಾಗೂ ಅ ಪ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಅವರು ಕಾರಣರಾಗಿದ್ದಾರೆ. ಬೆಳಗಾವಿಯ‌ ನಯನಾ ಆನಂದ್ ಎಂಬ ಮಹಿಳೆಯ ಕರೆಯ ನಂತರ ಬಾಕಾಹು ಹಿಂದೆ ಬಿದ್ದ ಅಡಿಕೆ ಪತ್ರಿಕೆ ಬಳಗಕ್ಕೆ ಅಜ್ಜಪ್ಪ ಎನ್ನುವ ರೈತರು ಈ ಆವಿಷ್ಕಾರದಲ್ಲಿ  ಮುಂದಿರುವುದು  ತಿಳಿಯಿತು. ಆ ಬಳಿಕ ಕೆಲವೇ ದಿನದಲ್ಲಿ  ಬಾಳೆಕಾಯಿ ಹುಡಿಯ ಬಹುದೊಡ್ಡ ಆಂದೋಲನವೇ ನಡೆದಿದೆ. ಇದೀಗ ಪ್ರಧಾನಿಗಳ ಗಮನವೂ ಸೆಳೆದಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ
ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ
April 29, 2025
8:00 AM
by: ದ ರೂರಲ್ ಮಿರರ್.ಕಾಂ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group