ಕಾಳುಮೆಣಸು ಕೃಷಿಯತ್ತ ಲಕ್ಷ್ಯ ಇದ್ದರೆ, ಕಾಳುಮೆಣಸು ಬೆಳೆಸಿ ಕೋಟಿ ಗಳಿಸಿ…! |

March 8, 2024
12:35 PM

ಕಾಳುಮೆಣಸು ಕೃಷಿಯತ್ತ ಲಕ್ಷ್ಯ ಹರಿಸಿದರೆ, ಕೃಷಿಕರಿಗೆ ಯಶಸ್ಸು ಇರುವುದು ಖಚಿತ. ಬೆಲೆ ಇರುವ ಕೃಷಿಯತ್ತ ವಾಲುವ ಬದಲಾಗಿ ಬೆಲೆ ಉಳಿಸಿಕೊಳ್ಳುವ ಕೃಷಿಯತ್ತ ರೈತರು ಆಸಕ್ತರಾಗಬೇಕು ಎಂದು  ಐಸಿಎಆರ್ ಅಪ್ಪಂಗಳದ ಹಿರಿಯ ವಿಜ್ಞಾನಿ ಡಾ.ಅಂಕೇ ಗೌಡ ಹೇಳಿದರು.

ಅವರು ಸುಳ್ಯದ ಎಪಿಎಂಸಿ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಐಸಿಎಆರ್‌ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ, ಹಾಗೂ ಸುಳ್ಯ ರೈತ ಉತ್ಪಾದಕ ಕಂಪನಿ ಆಶ್ರಯದಲ್ಲಿ ನಡೆದ ಕಾಳುಮೆಣಸು ಕೃಷಿಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಳುಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಮುಂದುವರಿಯಬೇಕಿದೆ. ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಬಹುಪಾಲು ಕಡೆ ಕಾಳುಮೆಣಸು ಕೃಷಿಯನ್ನು ಮಾಡಲು ಸಾಧ್ಯ ಇದೆ. ಏಕ ಬೆಳೆಯ ಬದಲು ಮಿಶ್ರ ಬೆಳೆಯು ರೈತರನ್ನು ಸುದೃಢಗೊಳಿಸುತ್ತದೆ. ಅದಕ್ಕಾಗಿ ಅಡಿಕೆಯ ಜೊತೆಗೆ ಕಾಳುಮೆಣಸು ಕೃಷಿಯ ಕಡೆಗೂ ಕೃಷಿಕರು ಆಸಕ್ತರಾಗಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಮಾತನಾಡಿ, ಅಡಿಕೆಯ ಜೊತೆಗೆ ಕಾಳುಮೆಣಸು ಕೃಷಿಯನ್ನೂ ರೈತರು ಬೆಳೆಸಬೇಕಿದೆ. ಈ ಮೂಲಕ ಯಶಸ್ವಿ ಕೃಷಿಕರಾಗಲು ಸಾಧ್ಯ ಎಂದರು.

ಸಭೆಯಲ್ಲಿ ಸುಳ್ಯ ತೋಟಗಾರಿಕಾ ಹಿರಿಯ ನಿರ್ದೇಶಕರಾರ ಸುಹಾನ ಪಿ, ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್‌, ವಿಜ್ಞಾನಿ ಡಾ.ಪೈಜಲ್‌ ಉಪಸ್ಥಿತರಿದ್ದರು.ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಜಯರಾಮ ಮುಂಡೋಳಿಮೂಲೆ ಸ್ವಾಗತಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ
March 7, 2026
11:36 AM
by: ಮಿರರ್‌ ಡೆಸ್ಕ್
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್
ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ
March 7, 2026
7:23 AM
by: ಮಿರರ್‌ ಡೆಸ್ಕ್
ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror