ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು. ಸೆ.26 ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ.
ನವರಾತ್ರಿ ಮೊದಲನೇ ದಿನ ಬೆಳಿಗ್ಗೆ ಗಣಹೋಮ, ರಾತ್ರಿ ಗಂಟೆ 8 ರಿಂದ 9 ರ ತನಕ ಎಂಟು ದಿನ ಪೂಜೆ ನಡೆಯಲಿದೆ. ಒಂಬತ್ತನೇ ದಿನ ರಾತ್ರಿ ಗಂಟೆ 8 ಕ್ಕೆ ಶ್ರೀ ಮಹಾದೇವಿಯ ದೊಂದಿ ಸೇವೆ ಕಾರ್ಯಕ್ರಮ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂದಿರದ ಪ್ರಧಾನ ಅರ್ಚಕರು ಬಾಲಕೃಷ್ಣ ಮಡಿವಾಳಮೂಲೆ, ಪ್ರಧಾನ ದೇವಿ ಪಾತ್ರಿ ಕುಶಲ ಮಡಿವಾಳಮೂಲೆ, ಆಡಳಿತ ಸಮಿತಿ ಗೌರವಧ್ಯಕ್ಷರು ಪೊಡಿಯ ಮಡಿವಾಳಮೂಲೆ, ಅಧ್ಯಕ್ಷರು ಸುನಿಲ್ ಶಿವಾಜಿನಗರ, ಕಾರ್ಯದರ್ಶಿ ಪ್ರಶಾಂತ್ ಮಡಿವಾಳಮೂಲೆ, ಕೋಶಾಧಿಕಾರಿ ಹರಿಶ್ಚಂದ್ರ ಮಡಿವಾಳಮೂಲೆ, ವಸಂತ, ಚರಣ್ ಕುಮಾರ್, ಸುಂದರ, ವಿಶ್ವನಾಥ, ರಮೇಶ್, ಉತ್ತಯ್ಯ, ಕಮಲಾಕ್ಷ, ಅನಿಲ್, ಮಿಥುನ್, ಹರೀಶ, ಬಾಲಕೃಷ್ಣ, ಶಂಕರ, ದಿನೇಶ್, ಅಶೋಕ್, ಸಂಜೀವ, ಚಂದ್ರಶೇಖರ, ಪ್ರದೀಪ್,ಅಶ್ವಥ್, ಸುರೇಶ್, ಜಯಾನಂದ,ಆನಂದ ಕೆ, ಶುಭಶ್ಚಂದ್ರ, ಸಂದೇಶ್, ಸಂದೀಪ್ ಸಭೆಯಲ್ಲಿ ಉಪಸ್ಥಿತರಿದ್ದರು.
ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…
ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…
ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…
ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…