ಮಂಗಳೂರು-ಬೆಂಗಳೂರು ಚತುಪ್ಷಥ ರಸ್ತೆ ಕಾಮಗಾರಿ | ಭೂಸ್ವಾಧೀನ ಕಗ್ಗಂಟು – ಎಷ್ಟು ಅಗಲ ?

December 20, 2021
10:30 AM

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆ ನೆಲ್ಯಾಡಿ ಪೇಟೆಯ ಎರಡು ಬದಿಯಲ್ಲಿ ಮತ್ತೆ ಹೆಚ್ಚುವರಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್‍ ಅವರನ್ನು ಭೇಟಿ ಮಾಡಿ ಮತ್ತೆ ಭೂಸ್ವಾಧೀನ ಮಾಡದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ನೆಲ್ಯಾಡಿಯಲ್ಲಿ ನಡೆದ ವರ್ತಕರ ಹಾಗೂ ಕಟ್ಟಡ ಮಾಲಕರ ಸಭೆಯಲ್ಲಿ ನಿರ್ಣಯಿಸಲಾಗಿದೆ.

Advertisement
Advertisement
Advertisement

ವರ್ಷದ ಹಿಂದೆ ಈ ಪ್ರದೇಶದಲ್ಲಿ 45 ಮೀ. ಭೂಸ್ವಾಧೀನ ಮಾಡಿಕೊಳ್ಳಲು ರಾ.ಹೆ.ಪ್ರಾಧಿಕಾರ ನಿರ್ಧರಿಸಿತ್ತು. ಈ ಸಂಬಂಧ ಸಂಬಂದಪಟ್ಟವರಿಗೆ ನೋಟಿಸು ನೀಡಿ ಭೂಸ್ವಾಧೀನ ಮಾಡಿಕೊಂಡಿತು. ಆದರೆ ಕಾರಾಣಾಂತರಗಳಿಂದ ರಸ್ತೆ ಕಾಮಗಾರಿ ಆರಂಭಗೊಳ್ಳಲಿಲ್ಲ. ಇದೀಗ ಅಡ್ಡ ಹೊಳೆಯಿಂದ ಬಿಸಿರೋಡು ತನಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಈಗ ಮತ್ತೆ ಮಂಗಳವಾರದಂದು ಪ್ರಾಧಿಕಾರದಿಂದ ಇನ್ನೂ ಹೆಚ್ಚುವರಿ 7ಮೀ. ನಷ್ಟು ಭೂಸ್ವಾಧೀನಕ್ಕೆ ಗುರುತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಗುರುತಿಸಿದ ರೀತಿಯಲ್ಲಿ ಭೂಸ್ವಾಧೀನ ನಡೆದ್ದದ್ದೇ ಆದಲ್ಲಿ ಇಲ್ಲಿನ ಕಟ್ಟಡಗಳಿಗೆ ಹಾನಿಯಾಗಲಿದ್ದು, ನೆಲ್ಯಾಡಿ ಪೇಟೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಇಲ್ಲಿನ ಕಟ್ಟಡ ಮಾಲಕ ಹಾಗೂ ವರ್ತಕರ ವಾದ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ರಾ.ಹೆ.ಪ್ರಾಧಿಕಾರದ ಇಂಜಿನಿಯರ್, ನೆಲ್ಯಾಡಿ ಪೇಟೆಯಲ್ಲಿ ಯಾವುದೇ ರೀತಿ ಭೂಸ್ವಾಧಿನಕ್ಕೆ ನಾವು ಅಪೇಕ್ಷಿಸಿಲ್ಲ. ಈ ಹಿಂದೆ 45ಮೀ.ನಷ್ಟು ವಿಸ್ತರಿಸಿದ್ದೇವೆ. ಅದೇ ಅಂತಿಮವಾಗಿರುತ್ತದೆ. ಗುಡ್ಡ ಪ್ರದೇಶಗಳಲ್ಲಿ ಮಾತ್ರ ಹೆಚ್ಚುವರಿ 7ಮೀ ಭೂಸ್ವಾಧಿನಕ್ಕೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ 3 ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿದೆ. ಆ ಪ್ರಕಾರ ಅಳತೆ ಮಾಡಿ ಗುರುತು ಮಾಡಲಾಗುತ್ತಿದೆ ಎಂದರು.‌

2 ವರ್ಷಗಳ ಹಿಂದೆಯೇ ನಾವು 45ಮೀ ಜಾಗವನ್ನು ಚತುಪ್ಷಥ ರಸ್ತೆ ಕಾಮಗಾರಿಗೆ ಬಿಟ್ಟು ಕೊಟ್ಟಿದ್ದೇವೆ. ಆದರೆ ಇನ್ನು ಹೆಚ್ಚುವರಿಯಾಗಿ ನಮಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಪೀಕ್‌.

Advertisement

ನ್ಯೂಸ್‌ & ಮಿರರ್ ವ್ಯೂವ್ಸ್‌ :

ನ್ಯೂಸ್‌ &‌ ಮಿರರ್ ವ್ಯೂವ್ಸ್
ಹೆದ್ದಾರಿ ಕಾಮಗಾರಿ ಆರಂಭಗೊಂಡು ವರ್ಷಗಳು ಹಲವು ಉರುಳಿದವು. ಕಾಮಗಾರಿ ವಿಳಂಬವೇ ಇಂತಹ ಗೊಂದಲಗಳಿಗೆ ಕಾರಣವಾಗಿದೆ. ಯಾವುದೇ ಯೋಜನೆ ರೂಪುಗೊಳ್ಳುವ ಮೊದಲೇ ರಸ್ತೆ ಅಗಲೀಕರಣ, ಭೂಸ್ವಾಧೀನ, ಪರಿಹಾರ ಮೊತ್ತಗಳ ಬಗ್ಗೆ ಅಂದಾಜು ಮಾಡಬೇಕಾದ್ದು ಇಲಾಖೆಗಳು ಹಾಗೂ ಜನರನ್ನು ಒಂದು ಮಾಡಬೇಕಾದ್ದು ಜನಪ್ರತಿನಿಧಿಗಳು. ಯೋಜನೆಯ ಮೊದಲು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡೇಕಾದ್ದೂ ಇಲಾಖೆಗಳು ಹಾಗೂ ಜನಪ್ರತಿನಿಧಿಗಳ ಕರ್ತವ್ಯವೂ ಹೌದು. ಮನವರಿಕೆ ಮಾಡದೆ, ವಿಳಂಬ ಕಾಮಗಾರಿಗಳು ಇಂತಹ ಗೊಂದಲಗಳಿಗೆ ಕಾರಣವಾಗುತ್ತದೆ. ಇದಕ್ಕೆ ಇಲಾಖೆಗಳು ಹಾಗೂ ಜನಪ್ರತಿನಿಧಿಗಳೇ ಹೊಣೆಯಾಗಿದ್ದಾರೆ

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror