ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆ ನೆಲ್ಯಾಡಿ ಪೇಟೆಯ ಎರಡು ಬದಿಯಲ್ಲಿ ಮತ್ತೆ ಹೆಚ್ಚುವರಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮತ್ತೆ ಭೂಸ್ವಾಧೀನ ಮಾಡದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ನೆಲ್ಯಾಡಿಯಲ್ಲಿ ನಡೆದ ವರ್ತಕರ ಹಾಗೂ ಕಟ್ಟಡ ಮಾಲಕರ ಸಭೆಯಲ್ಲಿ ನಿರ್ಣಯಿಸಲಾಗಿದೆ.
ವರ್ಷದ ಹಿಂದೆ ಈ ಪ್ರದೇಶದಲ್ಲಿ 45 ಮೀ. ಭೂಸ್ವಾಧೀನ ಮಾಡಿಕೊಳ್ಳಲು ರಾ.ಹೆ.ಪ್ರಾಧಿಕಾರ ನಿರ್ಧರಿಸಿತ್ತು. ಈ ಸಂಬಂಧ ಸಂಬಂದಪಟ್ಟವರಿಗೆ ನೋಟಿಸು ನೀಡಿ ಭೂಸ್ವಾಧೀನ ಮಾಡಿಕೊಂಡಿತು. ಆದರೆ ಕಾರಾಣಾಂತರಗಳಿಂದ ರಸ್ತೆ ಕಾಮಗಾರಿ ಆರಂಭಗೊಳ್ಳಲಿಲ್ಲ. ಇದೀಗ ಅಡ್ಡ ಹೊಳೆಯಿಂದ ಬಿಸಿರೋಡು ತನಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಈಗ ಮತ್ತೆ ಮಂಗಳವಾರದಂದು ಪ್ರಾಧಿಕಾರದಿಂದ ಇನ್ನೂ ಹೆಚ್ಚುವರಿ 7ಮೀ. ನಷ್ಟು ಭೂಸ್ವಾಧೀನಕ್ಕೆ ಗುರುತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಗುರುತಿಸಿದ ರೀತಿಯಲ್ಲಿ ಭೂಸ್ವಾಧೀನ ನಡೆದ್ದದ್ದೇ ಆದಲ್ಲಿ ಇಲ್ಲಿನ ಕಟ್ಟಡಗಳಿಗೆ ಹಾನಿಯಾಗಲಿದ್ದು, ನೆಲ್ಯಾಡಿ ಪೇಟೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಇಲ್ಲಿನ ಕಟ್ಟಡ ಮಾಲಕ ಹಾಗೂ ವರ್ತಕರ ವಾದ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾ.ಹೆ.ಪ್ರಾಧಿಕಾರದ ಇಂಜಿನಿಯರ್, ನೆಲ್ಯಾಡಿ ಪೇಟೆಯಲ್ಲಿ ಯಾವುದೇ ರೀತಿ ಭೂಸ್ವಾಧಿನಕ್ಕೆ ನಾವು ಅಪೇಕ್ಷಿಸಿಲ್ಲ. ಈ ಹಿಂದೆ 45ಮೀ.ನಷ್ಟು ವಿಸ್ತರಿಸಿದ್ದೇವೆ. ಅದೇ ಅಂತಿಮವಾಗಿರುತ್ತದೆ. ಗುಡ್ಡ ಪ್ರದೇಶಗಳಲ್ಲಿ ಮಾತ್ರ ಹೆಚ್ಚುವರಿ 7ಮೀ ಭೂಸ್ವಾಧಿನಕ್ಕೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ 3 ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿದೆ. ಆ ಪ್ರಕಾರ ಅಳತೆ ಮಾಡಿ ಗುರುತು ಮಾಡಲಾಗುತ್ತಿದೆ ಎಂದರು.
2 ವರ್ಷಗಳ ಹಿಂದೆಯೇ ನಾವು 45ಮೀ ಜಾಗವನ್ನು ಚತುಪ್ಷಥ ರಸ್ತೆ ಕಾಮಗಾರಿಗೆ ಬಿಟ್ಟು ಕೊಟ್ಟಿದ್ದೇವೆ. ಆದರೆ ಇನ್ನು ಹೆಚ್ಚುವರಿಯಾಗಿ ನಮಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಪೀಕ್.
ನ್ಯೂಸ್ & ಮಿರರ್ ವ್ಯೂವ್ಸ್ :
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…