ಮಂಗಳೂರು ಮತ್ಸ್ಯೋತ್ಸವ | ಇಲ್ಲಿ ಸಮುದ್ರ ಮೀನಗಿಂತ ಕೆರೆ ಮೀನಿಗೆ ಡಿಮ್ಯಾಂಡ್‌ | ಕೆರೆ ಮೀನಿಗಾಗಿ ಮುಗಿಬಿದ್ದ ಮತ್ಸ್ಯಪ್ರಿಯರು

July 24, 2024
4:34 PM

ಇತ್ತೀಚಿನ ದಿನಗಳಲ್ಲಿ ಸಮುದ್ರ ಮೀನು(sea Fish) ಬೆಲೆ ಗಗನಕ್ಕೇರಿದ(Price hike) ಹಿನ್ನೆಲೆ ಮತ್ಸ್ಯ ಪ್ರಿಯರು ಕೆರೆ ಮೀನುಗಳ(Lake Fish) ಮೊರೆ ಹೋಗುತ್ತಿದ್ದಾರೆ. ಹಾಗೆ ಮೀನು ಸಾಕಾಣಿಕೆ ಕೂಡ ಉದ್ಯಮವಾಗಿ(Business) ಬೆಳೆಯುತ್ತಿದೆ. ಅನೇಕ ರೈತರು ಮೀನು ಸಾಕಾಣಿಕೆಯನ್ನು(Fishery) ಉಪ ಕಸುಬನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ಕಡೆಗಳನ್ನು ಕೆರೆ ಮೀನು ಮಾರಾಟ ನಡೆಯುತ್ತದೆ. ಅಲ್ಲದೆ ಸಮುದ್ರ ಮೀನುಗಾರಿಕೆಗೆ ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಬಿಡುವ ನೀಡುವ ಕಾರಣ ತಾಜಾ ಮೀನು ಸಿಗುವುದಿಲ್ಲ. ಹಾಗಾಗಿ ಹೆಚ್ಚಿನ ಜನತೆ ಕೆರೆ ಮೀನು ಕಡೆ ಒಲವು ತೋರುತ್ತಾರೆ. ಅದರಲ್ಲೂ ಜೀವಂತವಿರುವ  ಮೀನುಗಳಿಗೆ ಸ್ವಲ್ಪ ಹೆಚ್ಚೇ ಡಿಮ್ಯಾಂಡ್‌ . ಮಳೆಗಾಲದಲ್ಲಿ ಹೀಗೆ ತಾಜಾ ಮೀನುಗಳು (Fresh Fish) ಸಿಗೋದೆ ಖುಷಿ. ಮಂಗಳೂರಿನ ಸರಕಾರಿ ಪ್ರಾಯೋಜಿತ ಮೀನು ಮಾರಾಟ ಉತ್ಸವದಲ್ಲಿ ತಾಜಾ ಮೀನುಗಳ ಭರ್ಜರಿ ಮಾರಾಟ ನಡೆಯಿತು. 

Advertisement
Advertisement
Advertisement

ಮತ್ಸ್ಯ ಬೇಟೆ : ಮಂಗಳೂರಿನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆಯಿತು. ಹಿಡಿದ ತಾಜಾ ಮೀನುಗಳನ್ನು ಅಲ್ಲಿಯೇ ಮಾರಾಟ ಮಾಡಲಾಯಿತು. ರೋಹ್, ಕಾಟ್ಲ, ತಿಲೇಪಿಯಾ, ಮುಗುಡು ಹಾಗೂ ಗೌರಿ ಮೀನುಗಳು ಇಲ್ಲಿ ಲಭ್ಯವಿತ್ತು. ಕೆಜಿಗೆ 150ರೂಪಾಯಿನಂತೆ ಮೀನುಗಳ ಮಾರಾಟವಾದವು. ಖರೀದಿಸಿರುವ ಮೀನುಗಳನ್ನು ತುಂಡರಿಸಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪಿಲಿಕುಳದ ಐದು ಎಕರೆಯಷ್ಟು ವಿಸ್ತಾರವಿರುವ ಈ ಲೇಕ್ ಗಾರ್ಡನ್ ಕೆರೆಗೆ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಪ್ರತೀ ವರ್ಷ ಮೀನುಮರಿಗಳನ್ನು ಬಿಡಲಾಗುತ್ತದೆ. ಹಾಗೆಯೇ ವರ್ಷಂಪ್ರತಿ ಜುಲೈ ವೇಳೆಗೆ ಮತ್ಸ್ಯೋತ್ಸವ ನಡೆಸಲಾಗುತ್ತದೆ. ಈ ಬಾರಿ 2 ಟನ್‌ಗಳಷ್ಟು ಮೀನುಗಳು ಸಿಕ್ಕಿದೆ. ಜೊತೆಗೆ ಮೀನುಪ್ರಿಯರಿಗೆ ಅಲ್ಲೇ ಮೀನಿನ ಖಾದ್ಯವನ್ನು ತಯಾರಿಸುವ ವ್ಯವಸ್ಥೆಯನ್ನೂ ಮೀನುಗಾರಿಕೆ ಇಲಾಖೆ ಮಾಡಿತ್ತು. ಒಟ್ಟಿನಲ್ಲಿ ಮಳೆಗಾಲದಲ್ಲಿ ಪಿಲಿಕುಳದಲ್ಲಿ ನಡೆದ ಮತ್ಸ್ಯೋತ್ಸವಕ್ಕೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಯಿತು.

Advertisement
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror