ಉದ್ಯೋಗಾವಕಾಶ ನಿರೀಕ್ಷಿಸುತ್ತಿರುವ ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮಂಗಳೂರು ಫೋರ್ಸ್ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 31 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.
ಮಂಗಳೂರು, ಬೈಕಂಪಾಡಿ, ಪಂಜಿಮೊಗರು, ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಉಡುಪಿ, ಕಾರ್ಕಳ, ಕುಮಟಾ ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಸಂದರ್ಶನ ನಡೆಯಲಿದೆ.
ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ? : ಸರ್ವಿಸ್ ಫ್ಲೋರ್ ಇನ್‌ಚಾರ್ಜ್, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಸೇಲ್ಸ್ ಮ್ಯಾನೇಜರ್, ಪಾರ್ಟ್ಸ್/ಬಿಲ್ಲಿಂಗ್ ಅಸಿಸ್ಟೆಂಟ್, ಸರ್ವಿಸ್ ಅಡ್ವೈಸರ್, ಸಿಆರ್‌ಇ ಸರ್ವಿಸ್ ಸೆಕ್ಷನ್ ಸಿಬ್ಬಂದಿ, ಆಟೊಮೊಬೈಲ್ ಟೆಕ್ನಿಷಿಯನ್, ಆಟೊಮೊಬೈಲ್ ಎಲೆಕ್ಟ್ರಿಷಿಯನ್, ವೆಹಿಕಲ್ ಪೇಂಟರ್, ಟಿಂಕರ್, ಟ್ರೈನೀ ಟೆಕ್ನಿಷಿಯನ್ ಮತ್ತು ಎಲೆಕ್ಟ್ರಿಷಿಯನ್ ಹಾಗೂ ವೆಹಿಕಲ್ ವಾಷರ್ ಹುದ್ದೆಗಳಿಗೆ ಅವಕಾಶವಿದೆ.
ಸಿಆರ್‌ಇ ಸರ್ವಿಸ್ ವಿಭಾಗದ ಹುದ್ದೆಗಳಿಗೆ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಸಂದರ್ಶನದ ವಿವರ
- ದಿನಾಂಕ: ಅಕ್ಟೋಬರ್ 31, 2026, ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
- ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಕಟ್ಟಡ, ಪಡೀಲ್, ಮಂಗಳೂರು
- ಅರ್ಹತೆ: ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು
- ತರಬೇಕಾದ ದಾಖಲೆ: ಸ್ವವಿವರವುಳ್ಳ ಬಯೋಡೇಟಾ
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Mangalore Force will conduct a direct recruitment interview on October 31, 2026, from 10 a.m. to 1 p.m. at the District Employment Exchange Office in the District Administration Building, Padil, Mangaluru. Vacancies include service floor in-charge, electric three-wheeler sales manager, parts/billing assistant, service advisor, automobile technician, automobile electrician, vehicle painter, tinker, trainee technician and electrician, and vehicle washer. Candidates with ITI or diploma qualifications can attend with their biodata. For further details, candidates may contact the District Employment Exchange Centre, Mangaluru.


