ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧ ವಿಚಾರವಾಗಿ ಅವರು ಕಾಂಗರೂ ನಾಡಿಗೆ ತೆರಳಿದ್ದಾರೆ. ಈ ಹಿಂದೆ ರಿಷಬ್ ಶೆಟ್ಟಿ ಅವರ ಭೇಟಿ ವೇಳೆ ಪ್ರಧಾನಿ ಮೋದಿ ʼಕಾಂತಾರʼ ಸಿನೆಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಷ್ಟೇ ಅಲ್ಲದೇ, ಕಾಂತಾರ ಸಿನೆಮಾದ ವರಾಹರೂಪಂ ಹಾಡಿಗೂ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ʼಕಾಂತಾರʼ ಹಾಡಿಗೆ ನೃತ್ಯ ನೋಡುವ ಹಾಗೂ ತುಳು ಸಂಸ್ಕೃತಿಯ ಕಣ್ತುಂಬಿಕೊಳ್ಳುವಂತಹ ಅವಕಾಶ ಒದಗಿ ಬಂದಿದೆ.
ಕಾಂಗರೂ ನಾಡಿನಲ್ಲಿ ʼಕಾಂತಾರʼ ವೈಭವ
ಮೇ 23ರ ಬುಧವಾರ ಸಿಡ್ನಿಯಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ʼನಾಟ್ಯೋಕ್ತಿʼ ತಂಡವು ಗ್ರೂಪ್ ಡ್ಯಾನ್ಸ್ ಮೂಲಕ ಆಸ್ಟ್ರೇಲಿಯಾ ದಲ್ಲಿ ಪ್ರಧಾನಿ ಮೋದಿಯವರ ಮನರಂಜಿಸಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel