ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕಾಗಿದೆ. ಮಂಗಳೂರಿನಲ್ಲಿ ಮಳೆಯ ಕಾರಣದಿಂದ ನಗರದ ಹಲವೆಡೆ ಮಳೆ ನೀರು ಹರಿದಿದೆ. ಪಂಪ್ ವೆಲ್ ಬಳಿ ಜಲಾವೃತಗೊಂಡು ವಾಹನ ಚಾಲಕರು, ಪಾದಚಾರಿಗಳು ಪರದಾಟ ನಡೆಸಿದರು.
ಸೋಮವಾರ ಸುರಿದ ಮಳೆಗೆ ಮಂಗಳೂರು ಪಂಪ್ ವೆಲ್ ಫ್ಲೈಓವರ್ ನ ಅಂಡರ್ ಪಾಸ್ ಸಹಿತ ಸುತ್ತಮುತ್ತಲಿನ ಜಾಗಗಳಲ್ಲೆಲ್ಲಾ ನೀರು ತುಂಬಿತು. ಕೆಲವು ವಾಹನಗಳು ಓಡಾಟ ನಡೆಸಿ ನೀರಿನಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ತೀರಾ ಗ್ರಾಮೀಣ ಭಾಗದಲ್ಲಿ ಹೊಳೆ ದಾಟಿದ ಅನುಭವ ಹಲವರಿಗೆ ಆಗಿದೆ…!.
ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಗ್ರಾಮೀಣ ಭಾಗಗಳಲ್ಲಿ ಸಮಸ್ಯೆಗಳು ಒಂದೊಂದಾಗಿ ಆರಂಭವಾಗಲು ಶುರುವಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel