ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗರ್ತಲಾದಿಂದ ಬಂದ ಅಡಿಕೆ…! |

January 23, 2024
4:11 PM
ಅಡಿಕೆ ಆಮದು ಬಗ್ಗೆ ಚರ್ಚೆ ಆಗುತ್ತಿರುವಾಗಲೇ, ಅಡಿಕೆ ಬೆಳೆಯುವ ಪ್ರದೇಶಕ್ಕೆ ಅಗರ್ತಲಾದಿಂದ ಕೆಂಪಡಿಕೆ ಬಂದಿರುವ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಡಿಕೆ ಮಂಗಳೂರಿಗೆ ಬಂದಿರುವ ಬಗ್ಗೆ ಪ್ರಕಟಣೆ ನೀಡಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗರ್ತಲಾದಿಂದ ಕೆಂಪಡಿಕೆ ಬಂದಿದೆ. 1519 ಕೆಜಿ ತೂಕದ ಕೆಂಪಡಿಕೆ  ಅಗರ್ತಲಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಶಿವಮೊಗ್ಗಕ್ಕೆ ರಸ್ತೆಯ ಮೂಲಕ ಸಾಗಿದೆ. ದೇಶೀಯ ಸರಕು ಕಾರ್ಯಾಚರಣೆಯನ್ನು ವಿಮಾನ ಯಾನದ ಮೂಲಕ ಪ್ರಾರಂಭಿಸಿದ ನಂತರ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ನಿರ್ವಹಿಸಿದ ಬೆಳೆಗಳ ಅತ್ಯಧಿಕ ಪ್ರಮಾಣ ಸಾಗಾಟ ಇದಾಗಿದೆ.ಮುಂದೆ ಓದಿ

ಕರಾವಳಿ ಹಾಗೂ ಮಲೆನಾಡು ಅಡಿಕೆ ಬೆಳೆಯುವ ಪ್ರದೇಶ. ಅಡಿಕೆ ಇಲ್ಲಿಂದಲೇ ರವಾನೆಯಾಗುವುದು ಬಹುಪಾಲು ನಡೆದುಕೊಂಡು ಬಂದಿರುವುದು. ಈಗ ಅಗರ್ತಲಾದಿಂದ ಅಡಿಕೆ ಬಂದಿರುವ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. ಶಿವಮೊಗ್ಗ ಮೂಲದ ಅಡಿಕೆ ಟ್ರೇಡಿಂಗ್ ಕಂಪನಿಯಾದ ಶ್ರೀನಿವಾಸ ಸುಪಾರಿ ಟ್ರೇಡರ್ಸ್ ಈ ಅಡಿಕೆ ಸಾಗಾಟ ಮಾಡಿದೆ. ಇದುವರೆಗೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಸಾಗಾಟ ಇದ್ದರೂ ಇಷ್ಟು ದೊಡ್ಡ ಸರಕನ್ನು ಮೊದಲ ಬಾರಿಗೆ ಸಾಗಾಟ ಮಾಡಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಕಟಣೆ ತಿಳಿಸಿದೆ. ಅಲ್ಲದೆ, ಸರಕುಗಳನ್ನು ಸ್ವೀಕರಿಸಿದ ಕಂಪನಿಯ ಪ್ರತಿನಿಧಿಗಳು ನಂತರ ಹೆಚ್ಚಿನ ಸಂಸ್ಕರಣೆಗಾಗಿ ಬೆಳೆಯನ್ನು ಶಿವಮೊಗ್ಗಕ್ಕೆ ರಸ್ತೆ ಮೂಲಕ ಸಾಗಿಸಿದರು ಎಂದೂ ಹೇಳಿದೆ.ಮುಂದೆ ಓದಿ

ಅಗರ್ತಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನಿಯಮಿತವಾಗಿ ಅಡಿಕೆಯನ್ನು ರಸ್ತೆಯ ಮೂಲಕ ಪಡೆಯುವ ಕಂಪನಿಗೆ ಅಡಿಕೆಯನ್ನು ಏರ್‌ಲಿಫ್ಟಿಂಗ್ ಮಾಡುವುದು ಮೊದಲನೆಯದು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Mangaluru International Airport (MIA) facilitated the inbound handling of areca nut (areca catechu), a tropical crop at its integrated cargo terminal (ICT) earlier in January 2024. The red variety of areca nut weighing 1519 kgs in 60 bags was ferried as belly air cargo from Agartala to this coastal city.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ
April 7, 2026
11:25 AM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror