ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಕನಸು ತೆರೆದಿರಿಸಿದ ಮಂಗಳೂರು ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ | ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ |

March 20, 2024
1:37 PM
ಸುಳ್ಯ ಕ್ಷೇತ್ರದಾದ್ಯಂತ ಪ್ರವಾಸ ನಡೆಸುತ್ತಿರುವ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ತಮ್ಮ ಕನಸನ್ನು ತೆರೆದಿರಿಸಿದ್ದಾರೆ.

ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಕ್ಯಾ.ಬ್ರಿಜೇಶ್‌ ಚೌಟ ಅವರು ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಓಡಾಟ ಆರಂಭಿಸಿದ್ದಾರೆ. ಈ ಸಂದರ್ಭ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಕನಸನ್ನು ತೆರೆದಿರಿಸಿದ್ದಾರೆ.

Advertisement

ಸುಳ್ಯ ಕ್ಷೇತ್ರದ ಪ್ರವಾಸದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ, ದ ಕ ಜಿಲ್ಲೆಯು ಕೃಷಿ ಆಧಾರಿತವಾದ ಜಿಲ್ಲೆ, ಕೃಷಿಯೂ ಇಲ್ಲಿ ಪ್ರಮುಖ ಕ್ಷೇತ್ರವಾಗಿದೆ. ಸುಳ್ಯದಲ್ಲಿ ಅಡಿಕೆ ಹಾಗೂ ರಬ್ಬರ್‌ ಬೆಳೆಗಾರರು ಹೆಚ್ಚಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಡಿಕೆ ಹಳದಿ ಎಲೆರೋಗವು ಸಾಮಾಜಿಕ ಸಮಸ್ಯೆಯಾಗಿದೆ. ಈ ರೋಗದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಅದಕ್ಕೆ ಸಂಪೂರ್ಣ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗುವುದು. ಸಮಸ್ಯೆ ಸ್ಪಂದಿಸುವುದು ಒಂದು ಭಾಗವಾದರೆ, ಶಾಶ್ವತ ಪರಿಹಾರ ಇನ್ನೊಂದು ಭಾಗ.  ಇದಕ್ಕಾಗಿ ಅಧ್ಯಯನ ಕೇಂದ್ರ ಸ್ಥಾಪನೆ ಹಾಗೂ ಸೂಕ್ತ ಅನುದಾನ ಒದಗಿಸುವುದು ಕೂಡಾ ಇನ್ನೊಂದು ಭಾಗವಾಗಿದೆ ಎಂದರು.

ದಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಇದೊಂದು ವಿಶೇಷವಾದ ಜಿಲ್ಲೆಯಾಗಿದ್ದು ಜನರ ಆಕಾಂಕ್ಷೆಗೆ ಅನುಗುಣವಾಗಿ ಸಮಗ್ರ ಅಭಿವೃದ್ಧಿಯ ಚಿಂತನೆ ಇದೆ. ವಿಕಸಿತ ಭಾರತವಾಗಲು ಏನೆಲ್ಲಾ ಅಗತ್ಯ ಇದೆ, ಅದೆಲ್ಲಾ ಮಾಡಲಾಗುವುದು ಎಂದ  ಬ್ರಿಜೇಶ್‌ ಚೌಟ, ಸುಳ್ಯ ತಾಲೂಕು ಮೂಲಭೂತಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳ ಬಗ್ಗೆ ಶಾಸಕರ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Mangalore Constituency BJP candidate Brijesh Chowta has started campain across Sullia Assembly Constituency. On this occasion, he has opened the dream of agriculture and rural development.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ
ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group