ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇದರಲ್ಲಿ ಕೋಲಾರ ಜಿಲ್ಲೆಯಲ್ಲಿ 54 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಶ್ರೀನಿವಾಸಪುರ ತಾಲೂಕಿನಲ್ಲೇ 48 ಸಾವಿರ ಹೆಕ್ಟೇರ್ ನಲ್ಲಿ ಮಾವು ಕೃಷಿ ನಡೆಯುತ್ತದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು ಜಲಕ್ಷಾಮ ಎದುರಾಗಿದ್ದರೂ ರೈತರು ಮಾವು ಬೆಳೆದು ಯಶಸ್ವಿಯಾಗಿದ್ದರು.ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಮಾವು ಬೆಳೆಯ ಧಾರಣೆ ತೀವ್ರ ಕುಸಿದಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಮಾವು ಬೆಳೆಗೆ ಮಾವು ಬೆಳೆಗೆ ಬೆಂಬಲ ಬೆಲೆಗೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಬಾರಿ ಉತ್ತಮ ಪಸಲು ಇದ್ದರೂ ಸರಿಯಾದ ಬೆಲೆ ಇಲ್ಲದ ಕಾರಣ ಸಂಕಷ್ಟ ಎದುರಾಗಿದೆ. ಸೂಕ್ತ ಬೆಲೆ ಇಲ್ಲದಿರುವುದರಿಂದ ಮಾವು ಕೊಯ್ಲು ನಿಲ್ಲಿಸಿದ್ದೇವೆ ಎಂದು ಮಾವು ಬೆಳೆಗಾರ ಹೇಮಂತ್ ಹೇಳುತ್ತಾರೆ. ಮಾವು ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸಿ ಕೇಂದ್ರ ಸರ್ಕಾರ ರೈತರ ಪರವಾಗಿ ನಿಂತಿರುವುದು ಈ ಸಂಕಷ್ಟದ ಸಮಯದಲ್ಲಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ರೈತ ರೈತ ರಾಮಚಂದ್ರಗೌಡ.
ಇದೇ ವೇಳೆ ಈ ಬಾರಿ ಮಾವಿನ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಉತ್ತಮ ಬೆಲೆ ಸಿಗದೆ ಬೆಳೆಗಾರರು ಮಾವು ಕೊಯ್ಲು ನಿಲ್ಲಿಸಿದ್ದಾರೆ. ಇದರಿಂದ ಕೂಲಿ ಕೆಲಸ ಸಿಗದೆ ತೊಂದರೆಯಾಗಿದೆ ಎನ್ನುತ್ತಾರೆ ಕಾರ್ಮಿಕ ರಮೇಶ್.
ಈ ಎಲ್ಲಾ ಸಂಕಷ್ಟದ ನಡುವೆ, ಕೇಂದ್ರ ಸರ್ಕಾರ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ – ಎಂಐಎಸ್ ಅಡಿಯಲ್ಲಿ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿದೆ. 2025-26ನೇ ಮಾರುಕಟ್ಟೆ ವರ್ಷಕ್ಕೆ ಕ್ವಿಂಟಲ್ ಗೆ 1 ಸಾವಿರದ ಆರು ನೂರ ಹದಿನಾರು ರೂಪಾಯಿಗಳ ಬೆಂಬಲ ಬೆಲೆಯಲ್ಲಿ ಗರಿಷ್ಠ 2,50.000 ಮೆಟ್ರಿಕ್ ಟನ್ಗಳಷ್ಟು ಮಾವು ಖರೀದಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.