ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

April 28, 2024
9:24 PM

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು ಸಂಗ್ರಹಕ್ಕೆ ಮೊದಲ ಭೇಟಿ ಮಾವು ಮಾಂತ್ರಿಕ ಮಾಫಲತೋಟ ಸುಬ್ರಾಯ ಭಟ್ಟರಲ್ಲಿಗೆ. ಅವರಿಂದ ಕಸಿಕಡ್ಡಿ(Transplant stick) ತರುವುದು ನಮಗೆ ಹೆಮ್ಮೆಯೂ ಹೌದು, ನಾವು ಅವರಿಗೆ ಕೊಡುವ ಗೌರವವೂ ಹೌದು. ಮೊಬೈಲ್, ವಾಹನ ಸಂಪರ್ಕ ಇಲ್ಲದ ಕಾಲದಲ್ಲೇ ಸುಮೂರು 200 ಕ್ಕೂ ಮಿಕ್ಕಿ ಮಾವು-ಹಲಸು ತಳಿಗಳ ಸಂರಕ್ಷಣೆ ಆಯ್ತೆಂದರೆ ವಿಸ್ಮಯವೇ ಸರಿ.

Advertisement
Advertisement

ಮೊದಲೇ ದಿನ ನಿಗದಿ ಪಡಿಸಿ ಅವರಲ್ಲಿ ಹೋದಾಗ ನಮಗೆ ಅಚ್ಚರಿಯ ಮೇಲೆ ಅಚ್ಚರಿಗಳು. ಇನ್ನೂರಷ್ಟು ತಳಿಗಳಿದ್ದರೂ ನಿಮಗೆ ಇಷ್ಟು ಸಾಕು ಎಂದು 24 ತಳಿಗಳ ಪಟ್ಟಿ ಮೊದಲೇ ಸಿದ್ಧಪಡಿಸಿದ್ದರು ಮಾತ್ರವಲ್ಲ, ಕಡ್ಡಿ ತೆಗೆಯಲು ಕಷ್ಟವಾಗಬಹುದು, ಸಮಯ ಜಾಸ್ತಿ ಬೇಕು ಎಂಬ ಕಾರಣಕ್ಕೆ ಕೆಲವು ಮರಗಳ ಕಸಿಕಡ್ಡಿಗಳನ್ನು ಸಹಾಯಕರ ಮೂಲಕ ತೆಗೆದಿರಿಸಿದ್ದರು. ಪ್ರತೀ ಮರದ ಜಾತಕ, ಜಾಗದ ಚಿತ್ರ (Map) ಎಷ್ಟು ಕರಾರುವಕ್ಕು ಎಂದರೆ ಪುಸ್ತಕದಲ್ಲಿರುವುದೆಲ್ಲವೂ ಮಸ್ತಕದಲ್ಲಿತ್ತು.

ಮೊದಲ (ಒಂದನೇ ನಂಬರ್) ಕಸಿ ಕಡ್ಡಿ ತೆಗೆದದ್ದು ಕೇರಳ ಅಪ್ಪೆ ಸಾಸಿವೆ ಎಂಬ ತಳಿ ಮರದ್ದು. ಅದರ ಬಗ್ಗೆ ಹೇಳುವಾಗ ಇದು ನಂಬರ್ ಒನ್ ಅವರು ಹೇಳಿದ್ದರೂ ನಮಗೆ ಸಮಯಕ್ಕೆ ಗ್ರಹಿಸಲು ಕಷ್ಟವಾಗಿತ್ತು. ಕಾರಣ ಅವರ 2-3 ದಶಕಗಳ ಅನುಭವಗಳನ್ನು ಜಲಪಾತದಿಂದ ಭೋರ್ಗರೆಯುವ ನೀರಿನಂತೆ ಲಭ್ಯವಿರುವ 2-3ಗಂಟೆಯಲ್ಲಿ ನಾವು ಒಳಗೆ ಎಳೆದು ಕೊಳ್ಳಬೇಕಿತ್ತು. (ವಿಡಿಯೋ ತುಣುಕು ಇಲ್ಲಿದೆ). ಆ ಕಸಿಕಡ್ಡಿಗಳ ಸಂಗ್ರಹ ಮುಳಿಯ ವೆಂಕಟಕೃಷ್ಣ ಶರ್ಮರ ನಿರ್ದೇಶನದಲ್ಲಿ ನಡೆಯಿತು. ಚಿಗುರು ನರ್ಸರಿಯ ಸರ್ವೇಶ ರಾಯರು ಕಸಿಗಿಡ ಮಾಡಿ ನಮಗೆಲ್ಲ ದೊರೆತದ್ದು ಹಳೆಯಕತೆ.

ಮರು ವರ್ಷ ಅಂದರೆ ಈ 2023 ಜುಲೈ ನಂತರವೇ ಆ ಗಿಡಗಳನ್ನು ಕೆಲವರು ನಾಟಿಮಾಡಿದರು. ನಮ್ಮಲ್ಲಿ ಆ ತಳಿಯ ಕಸಿಗಿಡ ನೆಟ್ಟದ್ದು ನವೆಂಬರ್ 2023ರಲ್ಲಿ. ಅದೇನು ಚೋದ್ಯವೋ ಏನೋ, ಆ ನಂಬರ್ ಒನ್ ಹೆಸರಿನ ಕೇರಳ ಅಪ್ಪೆ ಸಾಸಿವೆ ತಳಿ 3 ಬೇರೆ ಬೇರೆ ಮಣ್ಣಿನ ವಾತಾವರಣದಲ್ಲಿ ನೆಟ್ಟ ಒಂದು ವರ್ಷದ ಮೊದಲೇ ಫಲ ಬಿಟ್ಟಿತು. ನಾಡಮಾವಿನ ಕಸಿಗಿಡ ಹೀಗೆ ಶೀಘ್ರವಾಗಿ ಫಲಬಿಡುವುದು ಅಪರೂಪದ ವಿಚಾರ. ಮೊದಲ ಫಲ ಪೆರ್ಲ ಸಮೀಪ ವರ್ಮುಡಿ ಶಿವಪ್ರಸಾದರ ಮಾವಿನ ತೋಪಿನಲ್ಲಿ. ಎರಡನೆಯ ಗಿಡ ಕಲ್ಲಡ್ಕ ಸಮೀಪದ ನಾಡಮಾವಿನ ತೋಪು ಹೊಂದಿರುವ ಇಂಜಿನಿಯರ್ ರಘುರಾಜ್ ರಲ್ಲಿ. 3ನೆಯ ಗಿಡದ ಫಲ ನಮ್ಮ ಜೀನ್ ಬ್ಯಾಂಕ್ ಮಾವು ಮಂಟಪದಲ್ಲಿ.

ಸುಬ್ರಾಯ ಭಟ್ಟರ ಸಂಗ್ರಹದ ನಂಬರ್ ಒನ್ ತಳಿಯು ಫಲಕೊಡುವುದರಲ್ಲಿಯೂ ನಂಬರ್ ಒನ್ ಆಗಿ ಒದಗಿದ್ದು ನಮಗದು ವಿಶೇಷ. ಮಾವು ಮಂತ್ರಿಕನಿಗೆ ಗೌರವ ಸೂಚಕವಾಗಿ ಈ ಬರಹ.

Advertisement

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ
July 29, 2025
8:46 PM
by: The Rural Mirror ಸುದ್ದಿಜಾಲ
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ
July 29, 2025
8:34 PM
by: The Rural Mirror ಸುದ್ದಿಜಾಲ
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ
July 29, 2025
8:25 PM
by: The Rural Mirror ಸುದ್ದಿಜಾಲ
ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ
July 29, 2025
8:19 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group