ಕೋಲಾರದಲ್ಲಿ ಮಾವು ಬೆಳೆಗೆ ಬೆಲೆ ಇಲ್ಲದೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಕೂಡಲೇ ಪ್ರತಿಟನ್‌ಗೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಇಂದಿನಿಂದಲೇ ಹೋರಾಟ ನಡೆಸಲಾಗುವುದು ಎಂದು ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಮಾವು ಬೆಳೆಗಾರರ ಸಮಸ್ಯೆಗೆ ಆಸಕ್ತಿ ತೋರಿಲ್ಲ ಎಂದು ದೂರಿದ್ದಾರೆ. ಆಂಧ್ರ ಪ್ರದೇಶದಲ್ಲಿ ತಕ್ಷಣ ಬೆಂಬಲ ಬೆಲೆ ಘೋಷಣೆಯಾಗಿದೆ. ಕೂಡಲೇ ಆಂಧ್ರ ಪ್ರದೇಶ ಸರಕಾರದ ಮಾದರಿ ಮಾವು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಘೋಷಿಸುವ ಮೂಲಕ ರಾಜ್ಯ ಸರಕಾರ ರೈತರ ಪರವಾಗಿ ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.
ಸಾವಯವ ಕೃಷಿ ಇಂದಿನ ಅವಶ್ಯಕತೆ ಎಂದು ‘ಭಾರತದ ಗ್ರೀನ್ ಹೀರೋ’ ಆರ್.ಕೆ. ನಾಯರ್…
ಬ್ರಹ್ಮಾವರ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ…
ಪಿಎಂ ಕುಸುಮ್ ಯೋಜನೆಯಿಂದ ರೈತರ ನೀರಾವರಿ ವೆಚ್ಚ ಕಡಿತ, ಸೌರ ಪಂಪ್ ಬಳಕೆ…
ಅಡಿಕೆ ಸಂಗ್ರಹಣೆಯಲ್ಲಿ ಹುಳು, ಫಂಗಸ್ ಮತ್ತು ಗುಣಮಟ್ಟ ನಷ್ಟ ತಗ್ಗಿಸಲು ವಿಕಿರಣ ತಂತ್ರಜ್ಞಾನ…
ಕರ್ನಾಟಕದಲ್ಲಿ ಶೀತ ಅಲೆ ತೀವ್ರಗೊಂಡಿದ್ದು 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ. ಬೀದರ್‌ನಲ್ಲಿ…
ಡಾರ್ಜಿಲಿಂಗ್–ಸಿಕ್ಕಿಂ ಹಿಮಾಲಯಗಳಲ್ಲಿ ಮಾರುಕಟ್ಟೆ ಸಂಪರ್ಕದ ಕೊರತೆಯಿಂದ ಕೃಷಿ ಆದಾಯ ಕುಸಿತವಾಗಿದೆ. ಕಳಪೆ ರಸ್ತೆ,…