ಸಂಶೋಧಕರಿಂದ ಮನುಷ್ಯಕುಲವೇ ಬೆಚ್ಚಿ ಬೀಳುವಂತ ಸಂಶೋಧನೆ | 1 ಲೀ. ಬಾಟಲಿ ನೀರಲ್ಲಿ 2.40 ಲಕ್ಷ ಪ್ಲಾಸ್ಟಿಕ್ ಕಣ..! | ದೇಹಕ್ಕೆ ತೀವ್ರ ಹಾನಿಕಾರಕ |

January 10, 2024
1:54 PM
ಒಂದು ಲೀಟರ್ ನೀರಿನ ಬಾಟಲಿಯಲ್ಲಿ 2,40,000 ಸಣ್ಣ ಪ್ಲಾಸ್ಟಿಕ್ ಚೂರುಗಳು ಅಡಗಿರುವುದು ಪತ್ತೆಯಾಗಿದೆ.

ಒಂದು ಲೀಟರ್ ನೀರಿನ ಬಾಟಲಿಯಲ್ಲಿ 2,40,000 ಸಣ್ಣ ಪ್ಲಾಸ್ಟಿಕ್ ಚೂರುಗಳು ಅಡಗಿರುವುದು ಪತ್ತೆಯಾಗಿದೆ.
ಒಂದು ಹೊಸ ಅಧ್ಯಯನವು, ಮೊದಲ ಬಾರಿಗೆ, ಒಂದು ಪ್ಲಾಸ್ಟಿಕ್ ಬಾಟಲಿ, ಸಾಮಾನ್ಯವಾಗಿ 1 ಲೀಟರ್, 2,40,000 ಸಣ್ಣ ನ್ಯಾನೊಪ್ಲಾಸ್ಟಿಕ್ ತುಣುಕುಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

Advertisement

ಹೊರಗಡೆ ಅದೇನೆ ಆಹಾರ(Food) ತೆಗೆದುಕೊಂಡರು ಅದು ಸಿಗುವುದು ಪ್ಲಾಸ್ಟಿಕ್‌ ಡಬ್ಬ, ಬಾಟಲಿ ಅಥವಾ ಕವರ್‌ ನಲ್ಲಿ(Plastic). ಅದರಲ್ಲೂ ನೀರಂತೂ ಪ್ಲಾಸ್ಟಿಕ್‌ ಬಾಟಲಿಯಲ್ಲೇ.. ಇದಕ್ಕೆ ಬೇರೆ ಬದಲಿ ವ್ಯವಸ್ಥೆಯೇ ಇಲ್ಲವೇನನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಇದೀಗ ವಿಜ್ಞಾನಿಗಳು ಪ್ಲಾಸ್ಟಿಕ್‌ ಬಾಟಲಿ ನೀರು ಕುಡಿದರೆ ಏನಾಗುತ್ತೆ ಅನ್ನುವ ಬಗ್ಗೆ ಅಚ್ಚರಿಯ ಮಾಹಿತಿಯೊಂದನ್ನು ನೀಡಿದ್ದಾರೆ. ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿನ(plastic bottled water) ನೀರಿನಲ್ಲಿ 2,40,000 ಅತೀಸೂಕ್ಷ್ಮಪ್ಲಾಸ್ಟಿಕ್ (Nano plastic)) ಕಣಗಳಿರುತ್ತವೆ(Particles). ಹೀಗೆಂದು ಅಮೆರಿಕದ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್(America’s National Academy of Sciences) ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಸಂಶೋಧಕರು ತಿಳಿಸಿದ್ದಾರೆ.

ಈ ಹಿಂದೆ ಪ್ಲಾಸ್ಟಿಕ್ ಬಾಟಲಿಯಲ್ಲಿ” ಇರುತ್ತವೆ ಎಂದು ಅಂದಾಜಿಸಿದ್ದ ಸೂಕ್ಷ್ಮ ಕಣಗಳಿಗಿಂತ, 100 ಪಟ್ಟು ಹೆಚ್ಚು ಅಪಾಯಕಾರಿ ಕಣಗಳು ಒಂದು ಲೀ. ಬಾಟಲಿ ಯಲ್ಲಿ ಇರುವುದನ್ನು ವಿಜ್ಞಾನಿಗಳು ಈಗ ಪತ್ತೆಹಚ್ಚಿದ್ದಾರೆ. ಈ ನ್ಯಾನೋಪ್ಲಾಸ್ಟಿಕ್‌ಗಳು ಮನುಷ್ಯನ ಜೀವಕೋಶಗಳು, ರಕ್ತದಲ್ಲಿ ನುಗ್ಗಿ ಗಂಭೀರ ಅನಾರೋಗ್ಯಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಮಾತ್ರವಲ್ಲ ಇನ್ನೂ ಗರ್ಭದಲ್ಲೇ ಇರುವ ಮಗುವಿನ ದೇಹದೊಳಕ್ಕೂ ಈ ಸೂಕ್ಷ್ಮಕಣಗಳು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುವ ಶಕ್ತಿ ಹೊಂದಿವೆ. ಈ ಹಿಂದೆಮೈಕ್ರೋಮೀಟರ್ ಗಾತ್ರದ ಪ್ಲಾಸ್ಟಿಕ್ ಕಣಗಳಿರುವುದನ್ನು ವಿಜ್ಞಾನಿಗಳು ತಿಳಿಸಿದ್ದರು. ఇದೀಗ ಅದಕ್ಕೂ ಸೂಕ್ಷ್ಮವಾದ ನ್ಯಾನೋ ಪ್ಲಾಸ್ಟಿಕ್ ಕಣಗಳನ್ನು ಪತ್ತೆಹಚ್ಚಿದ್ದಾರೆ.

There are 2,40,000 ultrafine plastic (nanoplastic)) particles (particles) in water in a liter plastic bottle (plastic bottled water). Thus researchers in an article published in the journal of the American National Academy of Sciences.

Source : newscientist

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group