ಅಪ್ಪಾ ಒಮ್ಮೆ ಬನ್ನಿ…… ಹುತಾತ್ಮ ಯೋಧ ಕರ್ನಲ್‌ ಮನ್‌ಪ್ರೀತ್ ಸಿಂಗ್ ಪುತ್ರ ಈಗಲೂ ವಾಯ್ಸ್‌ ಮೆಸೇಜ್‌ ಮಾಡುತ್ತಿದ್ದಾರೆ…. | ಮತ್ತೆ ನೆನಪಾದ ಕರ್ನಲ್‌ ಮನ್‌ಪ್ರೀತ್ ಸಿಂಗ್ |

June 18, 2024
10:19 PM
"ಅಪ್ಪಾ, ದಯವಿಟ್ಟು ಒಮ್ಮೆ ಬನ್ನಿ,  ನಂತರ ನೀವು ಹೋಗಿ ಮತ್ತೆ ಕರ್ತವ್ಯ ಮಾಡಬಹುದು"  ಹೀಗೆ ಸದಾ ವಾಯ್ಸ್‌ ಮೆಸೇಜ್‌ ಮಾಡುತ್ತಲೇ ಇದ್ದಾನೆ ಬಾಲಕ ಕಬೀರ್.‌ ತನ್ನ ತಂದೆಗೆ ವೀಡಿಯೊ ಕರೆ ಮಾಡಲು ಬೇಡಿಕೊಳ್ಳುತ್ತಿದ್ದಂತೆ, ಈ ಹೃದಯಸ್ಪರ್ಶಿ ಸಂದೇಶಗಳು ಈಗ ಸುದ್ದಿಯಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 13 ರಂದು ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಗದೂಲ್ ಗ್ರಾಮದ ಸುತ್ತಮುತ್ತಲಿನ ಅರಣ್ಯಗಳಲ್ಲಿ ಇತರ ಸೈನಿಕರೊಂದಿಗೆ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಯಿತು. ಆ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್  ಹುತಾತ್ಮರಾದರು. ಅಪ್ಪನ ಅಗಲಿಕೆಯ ಬಳಿಕವೂ ಅವರ ಏಳು ವರ್ಷದ ಕಬೀರ್ ತನ್ನ ತಂದೆ ಎಂದಿಗೂ ಹಿಂತಿರುಗುವುದಿಲ್ಲ ಎಂಬ ವಾಸ್ತವದ ಬಗ್ಗೆ ತಿಳಿದಿಲ್ಲ. ಬಾಲಕ ಪಟ್ಟುಬಿಡದೆ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಸಂಖ್ಯೆಗೆ ಧ್ವನಿ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾನೆ,” ಅಪ್ಪ ಒಮ್ಮೆ ಬನ್ನಿ..” ಅನ್ನುತ್ತಲೇ ಇದ್ದಾನೆ…

“ಅಪ್ಪಾ, ದಯವಿಟ್ಟು ಒಮ್ಮೆ ಬನ್ನಿ,  ನಂತರ ನೀವು ಹೋಗಿ ಮತ್ತೆ ಕರ್ತವ್ಯ ಮಾಡಬಹುದು”  ಹೀಗೆ ಸದಾ ವಾಯ್ಸ್‌ ಮೆಸೇಜ್‌ ಮಾಡುತ್ತಲೇ ಇದ್ದಾನೆ ಬಾಲಕ ಕಬೀರ್.‌ ತನ್ನ ತಂದೆಗೆ ವೀಡಿಯೊ ಕರೆ ಮಾಡಲು ಬೇಡಿಕೊಳ್ಳುತ್ತಿದ್ದಂತೆ, ಈ ಹೃದಯಸ್ಪರ್ಶಿ ಸಂದೇಶಗಳು ಈಗ ಸುದ್ದಿಯಾಗಿದೆ.

19 ರಾಷ್ಟ್ರೀಯ ರೈಫಲ್ಸ್  ಘಟಕದ ಕಮಾಂಡಿಂಗ್ ಆಫೀಸರ್, ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಲಾರ್ಕಿಪೋರಾ, ಝಲ್ದೂರ ಮತ್ತು ಕೋಕರ್ನಾಗ್ ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿ ಹೀರೋ ಆಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಅನೇಕ ಸ್ಥಳೀಯರು ಅವರ  ನಿಸ್ವಾರ್ಥ ತ್ಯಾಗ , ಸೇವೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಕರ್ನಲ್ ಸಿಂಗ್ ಅವರ ಅಗಲುವಿಕೆ ಅವರ ಕುಟುಂಬ ಸದಸ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ವಿಶೇಷವಾಗಿ ಅವರ ಪತ್ನಿ ಜಗ್ಮೀತ್, ಅವರು ಕೆಲವು ಸಮಯವನ್ನು ನೆನಪಿಸಿಕೊಳ್ಳುತ್ತಾರೆ . ಎರಡು ಗಿಡಗಳನ್ನು ಅಂದು ನೆಟ್ಟ ಕ್ಷಣಗಳನ್ನೂ ಅವರೂ ನೆನಪಿಸಿಕೊಳ್ಳುತ್ತಾರೆ. ಅದಕ್ಕೆ ತಮ್ಮ ಮಕ್ಕಳಾದ ಕಬೀರ್ ಮತ್ತು ವಾಣಿ ಎಂದು ಹೆಸರಿಟ್ಟರು. ಈ ಮರಗಳನ್ನು ಮತ್ತೆ ನೋಡಲು ನಾವು 10 ವರ್ಷಗಳ ನಂತರ ಹಿಂತಿರುಗುತ್ತೇನೆ ಎಂದು ಅವರು ಹೇಳಿದ್ದರು. ಆದರೆ ಈಗ …,” ಜಗ್ಮೀತ್ ನೆನಪಿಸಿಕೊಳ್ಳುತ್ತಾರೆ.

ಕಾಶ್ಮೀರದ ಜನರ ಜೀವನವನ್ನು ಸುಧಾರಿಸುವ ಬಗ್ಗೆ ಕರ್ನಲ್ ಸಿಂಗ್ ಎಷ್ಟು ತೀವ್ರವಾಗಿ ಯೋಚಿಸುತ್ತಿದ್ದರು, ಯೋಜನೆ ಹಾಕಿಕೊಳ್ಳುತ್ತಿದ್ದ, ಭಾವೋದ್ರಿಕ್ತರಾಗಿದ್ದರು. ಅವರು ಇನ್ನು ಹಿಂತಿರುಗುವುದಿಲ್ಲ ಎಂದು ತನ್ನ  ಮಕ್ಕಳಿಗೆ ಅರ್ಥವಾಗುವಂತೆ ಮಾಡುವಲ್ಲಿ ತೀರಾ ತೊಂದರೆಗಳಾಗುತ್ತಿರುವ ಬಗ್ಗೆ  ಜಗ್ಮೀತ್ ಅವರು ಸುದ್ದಿಸಂಸ್ಥೆ ಪಿಟಿಐಯೊಂದಿಗೆ ಮಾತನಾಡುತ್ತಿದ್ದಾಗ ಹೇಳಿಕೊಂಡಿದ್ದಾರೆ. 32 ಸೆಕೆಂಡುಗಳ ಕಾಲ ನಡೆದ ತನ್ನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡ ಜಗ್ಮೀತ್, ನಾನು ಕಾರ್ಯಾಚರಣೆಯಲ್ಲಿದ್ದೇನೆ, ನಂತರ ಅವರ ಕೊನೆಯ ಮಾತುಗಳು ನಾನು ಇಂದಿನವರೆಗೂ ಕೇಳಲಿಲ್ಲ ಎನ್ನುತ್ತಾರೆ.

Advertisement

Source : PTI

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆನೆ ದಾಳಿ | ಅರಣ್ಯ ಸಚಿವರ ಸೂಚನೆ
December 17, 2025
9:44 PM
by: ದ ರೂರಲ್ ಮಿರರ್.ಕಾಂ
2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror