ಕಳೆದ ವರ್ಷ ಸೆಪ್ಟೆಂಬರ್ 13 ರಂದು ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಗದೂಲ್ ಗ್ರಾಮದ ಸುತ್ತಮುತ್ತಲಿನ ಅರಣ್ಯಗಳಲ್ಲಿ ಇತರ ಸೈನಿಕರೊಂದಿಗೆ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಯಿತು. ಆ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್ ಹುತಾತ್ಮರಾದರು. ಅಪ್ಪನ ಅಗಲಿಕೆಯ ಬಳಿಕವೂ ಅವರ ಏಳು ವರ್ಷದ ಕಬೀರ್ ತನ್ನ ತಂದೆ ಎಂದಿಗೂ ಹಿಂತಿರುಗುವುದಿಲ್ಲ ಎಂಬ ವಾಸ್ತವದ ಬಗ್ಗೆ ತಿಳಿದಿಲ್ಲ. ಬಾಲಕ ಪಟ್ಟುಬಿಡದೆ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಸಂಖ್ಯೆಗೆ ಧ್ವನಿ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾನೆ,” ಅಪ್ಪ ಒಮ್ಮೆ ಬನ್ನಿ..” ಅನ್ನುತ್ತಲೇ ಇದ್ದಾನೆ…
“ಅಪ್ಪಾ, ದಯವಿಟ್ಟು ಒಮ್ಮೆ ಬನ್ನಿ, ನಂತರ ನೀವು ಹೋಗಿ ಮತ್ತೆ ಕರ್ತವ್ಯ ಮಾಡಬಹುದು” ಹೀಗೆ ಸದಾ ವಾಯ್ಸ್ ಮೆಸೇಜ್ ಮಾಡುತ್ತಲೇ ಇದ್ದಾನೆ ಬಾಲಕ ಕಬೀರ್. ತನ್ನ ತಂದೆಗೆ ವೀಡಿಯೊ ಕರೆ ಮಾಡಲು ಬೇಡಿಕೊಳ್ಳುತ್ತಿದ್ದಂತೆ, ಈ ಹೃದಯಸ್ಪರ್ಶಿ ಸಂದೇಶಗಳು ಈಗ ಸುದ್ದಿಯಾಗಿದೆ.
19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್, ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಲಾರ್ಕಿಪೋರಾ, ಝಲ್ದೂರ ಮತ್ತು ಕೋಕರ್ನಾಗ್ ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿ ಹೀರೋ ಆಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಅನೇಕ ಸ್ಥಳೀಯರು ಅವರ ನಿಸ್ವಾರ್ಥ ತ್ಯಾಗ , ಸೇವೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಕರ್ನಲ್ ಸಿಂಗ್ ಅವರ ಅಗಲುವಿಕೆ ಅವರ ಕುಟುಂಬ ಸದಸ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ವಿಶೇಷವಾಗಿ ಅವರ ಪತ್ನಿ ಜಗ್ಮೀತ್, ಅವರು ಕೆಲವು ಸಮಯವನ್ನು ನೆನಪಿಸಿಕೊಳ್ಳುತ್ತಾರೆ . ಎರಡು ಗಿಡಗಳನ್ನು ಅಂದು ನೆಟ್ಟ ಕ್ಷಣಗಳನ್ನೂ ಅವರೂ ನೆನಪಿಸಿಕೊಳ್ಳುತ್ತಾರೆ. ಅದಕ್ಕೆ ತಮ್ಮ ಮಕ್ಕಳಾದ ಕಬೀರ್ ಮತ್ತು ವಾಣಿ ಎಂದು ಹೆಸರಿಟ್ಟರು. ಈ ಮರಗಳನ್ನು ಮತ್ತೆ ನೋಡಲು ನಾವು 10 ವರ್ಷಗಳ ನಂತರ ಹಿಂತಿರುಗುತ್ತೇನೆ ಎಂದು ಅವರು ಹೇಳಿದ್ದರು. ಆದರೆ ಈಗ …,” ಜಗ್ಮೀತ್ ನೆನಪಿಸಿಕೊಳ್ಳುತ್ತಾರೆ.
ಕಾಶ್ಮೀರದ ಜನರ ಜೀವನವನ್ನು ಸುಧಾರಿಸುವ ಬಗ್ಗೆ ಕರ್ನಲ್ ಸಿಂಗ್ ಎಷ್ಟು ತೀವ್ರವಾಗಿ ಯೋಚಿಸುತ್ತಿದ್ದರು, ಯೋಜನೆ ಹಾಕಿಕೊಳ್ಳುತ್ತಿದ್ದ, ಭಾವೋದ್ರಿಕ್ತರಾಗಿದ್ದರು. ಅವರು ಇನ್ನು ಹಿಂತಿರುಗುವುದಿಲ್ಲ ಎಂದು ತನ್ನ ಮಕ್ಕಳಿಗೆ ಅರ್ಥವಾಗುವಂತೆ ಮಾಡುವಲ್ಲಿ ತೀರಾ ತೊಂದರೆಗಳಾಗುತ್ತಿರುವ ಬಗ್ಗೆ ಜಗ್ಮೀತ್ ಅವರು ಸುದ್ದಿಸಂಸ್ಥೆ ಪಿಟಿಐಯೊಂದಿಗೆ ಮಾತನಾಡುತ್ತಿದ್ದಾಗ ಹೇಳಿಕೊಂಡಿದ್ದಾರೆ. 32 ಸೆಕೆಂಡುಗಳ ಕಾಲ ನಡೆದ ತನ್ನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡ ಜಗ್ಮೀತ್, ನಾನು ಕಾರ್ಯಾಚರಣೆಯಲ್ಲಿದ್ದೇನೆ, ನಂತರ ಅವರ ಕೊನೆಯ ಮಾತುಗಳು ನಾನು ಇಂದಿನವರೆಗೂ ಕೇಳಲಿಲ್ಲ ಎನ್ನುತ್ತಾರೆ.
Source : PTI
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…