ಉತ್ತರದಿಂದ ವೈವಾಹಿಕ ಸಂಬಂಧ | ಶ್ರೀರಾಮಚಂದ್ರಾಪುರ ಮಠ ಸ್ಪಷ್ಟನೆ

September 21, 2023
10:32 PM
Advertisement

ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜತೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನ ನಡೆಸಲು ಓಂ ಗುರೂಜಿ ಮತ್ತು ಕನ್ಯೆಯರ ಪೋಷಕರನ್ನು ಒಳಗೊಂಡ ತಂಡ ಕರಾವಳಿ ಕರ್ನಾಟಕಕ್ಕೆ ಆಗಮಿಸುತ್ತಿದೆ ಎಂಬ ಮಾಹಿತಿ ಸಮಾಜ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೂ ಶ್ರೀರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀಮಠ ಸ್ಪಷ್ಟಪಡಿಸಿದೆ.

Advertisement

“ಈ ತಂಡದ ಜತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರಿಗೆ ಆಪ್ತರಾಗಿರುವವರು ಇದ್ದಾರೆ. ಆದ್ದರಿಂದ ಮೋಸ ಹೋಗಲು ಅವಕಾಶವಿಲ್ಲ” ಎಂಬ ಮಾಹಿತಿ ಈ ವಾಟ್ಸಪ್ ಸಂದೇಶಗಳಲ್ಲಿ ಇದ್ದು, ಶ್ರೀಮಠದ ಜತೆ ನೇರ ಸಂಪರ್ಕ ಇರುವ ಯಾರೂ ಇಂತಹ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿಲ್ಲ ಅಥವಾ ಶ್ರೀಮಠ ಇಂತಹ ಯಾರನ್ನೂ ಈ ಉದ್ದೇಶಕ್ಕೆ ನಿಯೋಜಿಸಿಲ್ಲ ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

Advertisement
Advertisement

ಉತ್ತರ ಭಾರತದಿಂದ ವೈವಾಹಿಕ ಸಂಬಂಧ ಬಯಸುವವರು ಉತ್ತರ ಭಾರತಕ್ಕೆ ಹೋಗಿ ಕನ್ಯೆಯರನ್ನು ನೋಡುವುದು, ಅವರು ವರನ ಮನೆಗೆ ಬಂದು ನೋಡುವುದು, ಒಪ್ಪಿಗೆಯಾದಲ್ಲಿ ಮಠದ ಕಾಣಿಕೆ, ಮದುವೆ ಖರ್ಚು ಹೀಗೆ ಕನಿಷ್ಠ 1.5 ಲಕ್ಷ ರೂಪಾಯಿ ಭರಿಸಲು ಸಿದ್ಧರಿರಬೇಕು ಎಂದು ಈ ವಾಟ್ಸಪ್ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಈ ಒಡಂಬಡಿಕೆಗೆ ಒಪ್ಪಿಕೊಳ್ಳುವವರು ತಮ್ಮದೇ ಸ್ವಂತ ವಿವೇಚನೆಯಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕೇ ವಿನಃ ಇದಕ್ಕೆ ಶ್ರೀಮಠವಾಗಲೀ ಅಥವಾ ಮಠಕ್ಕೆ ಸಂಬಂಧಿಸಿದ ಯಾವುದೇ ಸಂಘಟನೆ, ಸಂಘ ಸಂಸ್ಥೆಗಳಾಗಲೀ ಹೊಣೆ ಆಗಿರುವುದಿಲ್ಲ ಎಂದು ಹೇಳಿದ್ದಾರೆ.

ಹವ್ಯಕ ಸಮಾಜ ಸೇರಿದಂತೆ ಬ್ರಾಹ್ಮಣ ಸಮಾಜದ ಇತರ ಉಪ ಪಂಗಡಗಳಿಗೆ ಸೇರಿದ ಕೃಷಿಕರು, ಅಡುಗೆಯವರು, ಪುರೋಹಿತರು ಮತ್ತು ಇತರ ವೃತ್ತಿಪರರನ್ನು ಗುರಿಯಾಗಿಸಿಕೊಂಡು ಈ ಗುಂಪು ಕೆಲಸ ಮಾಡುತ್ತಿದೆ. ಒಂದು ವೇಳೆ ಈ ವ್ಯವಸ್ಥೆ ಜತೆ ವ್ಯವಹಾರ ನಡೆಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚೀನಾವನ್ನು ಸೈಡ್‌ಲೈನ್‌ ಮಾಡಿದ ಯುಎಸ್‌ | ಯುಎಸ್‌ನ ವಾಲ್‌ಮಾರ್ಟ್‌ಗೆ ಭಾರತದಿಂದ ಚಿಲ್ಲರೆ ವಸ್ತುಗಳ ರಫ್ತು | ಈ ವರ್ಷ ವಾಲ್‌ಮಾರ್ಟ್‌ ಆಮದು ಮಾಡಿಕೊಂಡ ವಸ್ತು ಎಷ್ಟು..? |
December 1, 2023
2:10 PM
by: The Rural Mirror ಸುದ್ದಿಜಾಲ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ
ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |
December 1, 2023
12:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror