ರಬ್ಬರ್‌ 200 :ಕಾಳುಮೆಣಸು 680 | ರಬ್ಬರ್ ಹಾಗೂ ಕಾಳುಮೆಣಸು ಧಾರಣೆ ಏರಿಕೆ |

June 14, 2024
8:13 PM
ರಬ್ಬರ್‌ ಹಾಗೂ ಕಾಳುಮೆಣಸು ಧಾರಣೆ ಈಗ ಏರಿಕೆಯ ಹಾದಿಯಲ್ಲಿದೆ. ರಬ್ಬರ್‌ ಧಾರಣೆ 200 ರೂಪಾಯಿ ತಲಪಿದೆ. ಕಾಳುಮೆಣಸು ಧಾರಣೆ ಕೂಡಾ ಏರಿಕೆಯಾಗುತ್ತಿದ್ದು 700 ರೂಪಾಯಿ ತಲುಪುವ ನಿರೀಕ್ಷೆ ಇದೆ.

ಹಲವು ವರ್ಷಗಳ ಬಳಿಕ ರಬ್ಬರ್‌ ಹಾಗೂ ಕಾಳುಮೆಣಸು ಧಾರಣೆ ಏರಿಕೆ ಕಂಡಿದೆ. ಶುಕ್ರವಾರ ಸಂಜೆ ರಬ್ಬರ್‌ ಧಾರಣೆ 200 ರೂಪಾಯಿ ಹಾಗೂ ಕಾಳುಮೆಣಸು ಧಾರಣೆ 680 ರೂಪಾಯಿಗೆ ತಲಪಿದೆ. ಇದೆರಡೂ ಅಂತರಾಷ್ಟ್ರೀಯ ಮಾರುಕಟ್ಟೆಯೂ ಹೊಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯೂ ಏರಿಕೆಯ ನಿರೀಕ್ಷೆ ಇದೆ. ಮಾರುಕಟ್ಟೆ ಸಹಜವಾದ ಏರಿಳಿಕೆ ಇದ್ದರೂ ಧಾರಣೆ ಏರಿಕೆಯ ಟ್ರೆಂಡ್‌ ಇದೆ. ಹೀಗಾಗಿ ಕಾಳುಮೆಣಸು-ರಬ್ಬರ್‌ ಎರಡೂ ಕೂಡಾ ಮುಂದಿನ ಎರಡು ತಿಂಗಳ ಟ್ರೆಂಡಿಂಗ್‌ ಮಾರುಕಟ್ಟೆ…!

Advertisement
Advertisement

ಕಳೆದ ವರ್ಷ ಅಡಿಕೆ ಧಾರಣೆ ಏರಿಕೆಯ ಸುದ್ದಿ . 500 ರೂಪಾಯಿ ದಾಟಿ ಮುಂದೆ ಹೋಗಿದ್ದ ಧಾರಣೆ ಈಗ 466-470 ರೂಪಾಯಿ ಚಾಲಿ ಹಳೆ ಅಡಿಕೆ ಹಾಗೂ 350-385 ಚಾಲಿ ಹೊಸ ಅಡಿಕೆ ಧಾರಣೆ ಇದೆ.  ಎರಡು ತಿಂಗಳ ಹಿಂದೆ ಕೊಕ್ಕೋ ಧಾರಣೆ ಸದ್ದು ಮಾಡಿತು. 250 ರೂಪಾಯಿ ದಾಟಿತು, 1000 ರೂಪಾಯಿ ಕೊಕೋ ಡ್ರೈ ಗೆ ಇದೆ ಎನ್ನುವ ಸುದ್ದು ಖುಷಿ ತಂದಿತು. ಸದ್ಯ 170 ರೂಪಾಯಿ ಹಸಿ ಕೊಕ್ಕೋ ಧಾರಣೆ ಹಾಗೂ 580 ರೂಪಾಯಿ ಒಣ ಕೊಕ್ಕೋ ಧಾರಣೆ ಇದೆ. ಇದೀಗ ರಬ್ಬರ್‌ ಹಾಗೂ ಕಾಳುಮೆಣಸು ಧಾರಣೆ ಸದ್ದು ಮಾಡಲು ಆರಂಭಿಸಿದೆ.

Advertisement

ಸುಮಾರು 6 ವರ್ಷದ ಹಿಂದೆ ರಬ್ಬರ್‌ ಧಾರಣೆ ಏರಿಕೆ ಕಂಡಿತ್ತು. 250-280 ರೂಪಾಯಿವರೆಗೂ ತಲಪಿತ್ತು. ಅದಾದ ಬಳಿಕ ಇಳಿಕೆ ಕಂಡ ರಬ್ಬರ್‌ ಧಾರಣೆ 100 ರೂಪಾಯಿಗೆ ತಲಪಿತ್ತು. ಕಳೆದ ವರ್ಷದಿಂದ ನಿಧಾನವಾಗಿ ಏರಿಕೆ ಕಂಡ ರಬ್ಬರ್‌ ಧಾರಣೆ ಈಗ 200 ರೂಪಾಯಿಗೆ ತಲಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ರಬ್ಬರ್‌ ಬೇಡಿಕೆ ಇದೆ. ಶುಕ್ರವಾರ ಸಂಜೆಯ ವೇಳೆಗೆ ಕೊಂಚ ಇಳಿಕೆಯ ಟ್ರೆಂಡ್‌ ಕಂಡುಬಂದಿತ್ತಾದರೂ ಮುಂದಿನ ವಾರ ರಬ್ಬರ್‌ 200 ರೂಪಾಯಿಗಿಂತ ಹೆಚ್ಚಿನ ಧಾರಣೆ ತಲುಪುವ ನಿರೀಕ್ಷೆ ಇದೆ.

ಕಾಳುಮಣಸು ಧಾರಣೆ ಕೂಡಾ ಸುಮಾರು 5-6 ವರ್ಷದ ಹಿಂದೆ 700 ರೂಪಾಯಿಗೆ ತಲಪಿತ್ತು. ನಂತರ ಇಳಿಕೆ ಕಂಡ ಕಾಳುಮೆಣಸು ಧಾರಣೆ 250-350 ರೂಪಾಯಿಗೆ  ಇಳಿಕೆಯಾಗಿತ್ತು. ಅದಾಗಿ ಏರಿಕೆ ಕಂಡ ಕಾಳುಮೆಣಸು ಧಾರಣೆ ಈಗ 600 ರೂಪಾಯಿ ದಾಟಿ ಮುಂದೆ ಸಾಗಿದೆ. ಬೇಡಿಕೆ ಕಾಣುತ್ತಿದೆ, ಅದಕ್ಕೆ ಸಹಜವಾಗಿಯೇ ಧಾರಣೆ ಕೂಡಾ ಏರಿಕೆಯಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 700 ರೂಪಾಯಿಗಿಂತ ಹೆಚ್ಚಿನ ಧಾರಣೆ ಇದೆ. ಮುಂದಿನ ವಾರದ ವೇಳೆ ಭಾರತದಲ್ಲೂ ಕಾಳುಮೆಣಸು ಧಾರಣೆ 700 ತಲಪುವ ನಿರೀಕ್ಷೆ ಇದೆ.

Advertisement

ಅಡಿಕೆ, ಕಾಳುಮೆಣಸು, ರಬ್ಬರ್‌, ಕೊಕೋ ಇದೆಲ್ಲಾ ಧಾರಣೆ ಏರಿಕೆಯ ಖುಷಿಯನ್ನು ಕೃಷಿಕರು ಅನುಭವಿಸುತ್ತಾರೆ. ಆದರೆ ಸ್ವತ: ಕೃಷಿಕರು ಅದೇ ಧಾರಣೆ ಮಾರಾಟ ಮಾಡಲಾಗದೆ, ನಿರಾಶರಾಗುವ ಪರಿಸ್ಥಿತಿ ಬಹುತೇಕ ಸಂದರ್ಭ ಕಂಡುಬಂದಿದೆ. ಇದಕ್ಕಾಗಿ ಕೃಷಿ ಮಾರುಕಟ್ಟೆಯ ಬಗ್ಗೆ ಸರಿಯಾದ ಅಧ್ಯಯನ ಮಾಡಿಕೊಂಡು ಒಂದು ಹಂತದ ಧಾರಣೆ ಬಂದಾಗ ನಿಯಮಿತವಾಗಿ ಮಾರುಕಟ್ಟೆಗೆ ಬಿಡುವುದು ಉತ್ತಮ ವಿಧಾನವಾಗಿದೆ. ಇದರಿಂದಾಗಿ ಎಲ್ಲಾ ರೈತರಿಗೂ ಸರಿಯಾದ ಧಾರಣೆಯೂ ಸಿಗಬಹುದಾಗಿದೆ.

The markets for both rubber and pepper are currently experiencing an upward trend. The price of rubber has recently escalated to Rs. 200 per unit, indicating a significant increase. Similarly, the pepper market is witnessing a rise in prices, with current projections anticipating that it may soon reach Rs. 700 per unit.

Advertisement

This surge in prices can be attributed to a combination of factors including increased demand, potential supply constraints, and broader economic conditions. For rubber, the rise in demand from industries such as automotive and manufacturing could be contributing to the higher market prices. Additionally, production challenges or raw material shortages might be exacerbating the supply side of the equation.

In the case of pepper, the upward price movement may be influenced by similar supply and demand dynamics. Factors such as climatic conditions impacting harvests, shifts in global trade policies, or increased consumption in both domestic and international markets could be driving the price increase.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 18-06-2024 | ಜೂ.21 ರಿಂದ ಮುಂಗಾರು ಚುರುಕು | ಜೂ.28 ರಿಂದ ಮತ್ತೆ ದುರ್ಬಲ ಸಾಧ್ಯತೆ |
June 18, 2024
2:50 PM
by: ಸಾಯಿಶೇಖರ್ ಕರಿಕಳ
ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ…!
June 18, 2024
2:17 PM
by: The Rural Mirror ಸುದ್ದಿಜಾಲ
ವಯನಾಡ್‌ ಕ್ಷೇತ್ರ ಬಿಟ್ಟುಕೊಟ್ಟ ರಾಹುಲ್‌ ಗಾಂಧಿ | ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ | ಬಿಜೆಪಿಯಿಂದ ಸ್ಮೃತಿ ಇರಾನಿ ಸ್ಪರ್ಧೆ ಸಾಧ್ಯತೆ |
June 18, 2024
1:22 PM
by: The Rural Mirror ಸುದ್ದಿಜಾಲ
ಬಹಳ ದಿನಗಳ ನಂತರ ಕೊಂಚ ಇಳಿಕೆಯಾದ ಚಿನ್ನದ ಬೆಲೆ |
June 18, 2024
12:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror