ಕೋಳಿ ಸಾಕಾಣಿಕೆ ಮಾಡುವವರಿಗೆ ಈಚೆಗೆ ಕೋಳಿಗಳಿಗೆ ನೀಡುವ ಆಹಾರದಲ್ಲಿ ವಿಷಕಾರಿ ಶಿಲೀಂಧ್ರಗಳದೇ ಸಮಸ್ಯೆಯಾಗಿದೆ. ಈ ಶಿಲೀಂದ್ರಗಳು ಕೋಳಿಗಳ ಆರೋಗ್ಯ ಕೆಡಿಸುತ್ತಿದೆ. ಮಾತ್ರವಲ್ಲದೆ, ಅವುಗಳ ಮೊಟ್ಟೆ ಮತ್ತು ಮಾಂಸದ ಗುಣಮಟ್ಟದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದ್ದು. ಇದರಿಂದ ಕೋಳಿ ಸಾಕಾಣಿಕೆ ಮಾಡಲು ರೈತ ಹಿಂದು ಮುಂದು ನೋಡುವಂತಾಗಿದೆ. ಆದರೆ, ಈ ಸಮಸ್ಯೆಗಳಿಗೆ ಈಗ ಒಂದು ಸುಲಭ ಮತ್ತು ನೈಸರ್ಗಿಕ ಪರಿಹಾರವನ್ನು ಉತ್ತರ-ಪಶ್ಚಿಮ ವಿಶ್ವವಿದ್ಯಾಲಯದ ಎಂಎಸ್ಸಿ ಪದವೀಧರೆ ದಿನಿಯೋ ಮಜೋಂಗ್ ಅವರು ಸಂಶೋಧನೆಯ ಮೂಲಕ ಕಂಡುಹಿಡಿದಿದ್ದಾರೆ.
ಸಾಮಾನ್ಯವಾಗಿ ಅಣಬೆ ಬೆಳೆದ ನಂತರ ಉಳಿಯುವ ತ್ಯಾಜ್ಯವನ್ನು ಎಸೆಯದೇ ಕೋಳಿಗಳಿಗೆ ನೀಡುವ ಆಹಾರದಲ್ಲಿ ಶೇ.2 ರಷ್ಟು ಅಣಬೆ ತ್ಯಾಜ್ಯವನ್ನು ಬೆರೆಸಿದರೆ ಸಾಕು. ಇದರಿಂದ ಕೋಳಿಗಳ ಮೊಟ್ಟೆಯ ಗುಣಮಟ್ಟ ಮಾತ್ರವಲ್ಲ ಅವುಗಳ ಆರೋಗ್ಯವು ಸುಧಾರಿಸುತ್ತದೆ. ಆದರೆ ಈ ಅಣಬೆ ತ್ಯಾಜ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದೆ ಕೇಲವ 2% ರಷ್ಟು ಬಳಸಬೇಕೆಂದು ದಿನಿಯೋ ಮಜೋಂಗ್ ಹೇಳಿದ್ದಾರೆ.
ಆಯಿಸ್ಟರ್ ಅಣಬೆಗಳಲ್ಲಿ ವಿಶೇಷವಾದ ನೈಸರ್ಗಿಕ ಕಿಣ್ವಗಳಿರುತ್ತದೆ. ಇವು ಕೋಳಿ ಆಹಾರದಲ್ಲಿರುವ ಕಠಿಣವಾದ ವಿಷಕಾರಿ ಅಂಶಗಳನ್ನು ಒಡೆಯುವ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಕೋಳಿಗಳ ಆಹಾರದಲ್ಲಿ ಮಿಶ್ರಣ ಮಾಡಿಕೊಂಡುವುದರಿಂದ ಆದರದಲ್ಲಿರುವ ವಿಷಕಾರಿ ಅಂಶಗಳನ್ನು ನಿಷ್ಟ್ರಿಯಗೊಳಿಸುತ್ತದೆ. ಇದರಿಂದ ಕೋಳಿಗಳು ಸುರಕ್ಷಿತವಾಗಿ ಸಾಯುವ ಪ್ರಮಾಣ ಕಡಿಮೆಯಾಗುತ್ತದೆ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…