ಪ್ಯಾನ್​-ಆಧಾರ್‌ ಲಿಂಕ್‌ಗೆ ಮೇ 31 ಡೆಡ್​ಲೈನ್ | ತಪ್ಪಿದರೆ ಡಬಲ್‌ ಟಿಡಿಎಸ್‌ ಕಡಿತ |

May 29, 2024
12:23 PM

ಯಾರ್ಯಾರು ತೆರಿಗೆದಾರರಿದ್ದೀರಿ(Tax payers) ತಪ್ಪದೇ ನಿಮ್ಮ ಆಧಾರ ಕಾರ್ಡ್‌(Adhar card) ಹಾಗೂ ಪ್ಯಾನ್‌  ಕಾರ್ಡ್‌ನ್ನು(Pan card) ಲಿಂಕ್‌ ಮಾಡಿಸಿ(PAN Aadhaar Link). ಇಲ್ಲವಾದಲ್ಲಿ ಡಬಲ್‌ ತೆರಿಗೆ(Tax) ಬೀಳೋದು ಪಕ್ಕಾ. ಹೆಚ್ಚಿನ ದರದಲ್ಲಿ ತೆರಿಗೆ ಕಡಿತ ತಪ್ಪಿಸಲು ಮೇ 31ರೊಳಗೆ ಸಾರ್ವಜನಿಕರು ತಪ್ಪದೇ ಪ್ಯಾನ್ ಕಾರ್ಡ್​ನೊಂದಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (IT) ತೆರಿಗೆದಾರರಿಗೆ ತಿಳಿಸಿದೆ.

Advertisement
Advertisement

ಆದಾಯ ತೆರಿಗೆ ನಿಯಮಗಳ ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದೇ ಇದ್ದರೆ, ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಲಾಗುತ್ತದೆ. ಅಂದರೆ, ಶೇ.10ರ ಬದಲಾಗಿ ಶೇ.20ರಷ್ಟು ಟಿಡಿಎಸ್‌ ಮಾಡಲಾಗುತ್ತದೆ ಎಂದು ಹೇಳಿದೆ.

ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಈ ಕುರಿತು ಮೊದಲ ಸುತ್ತೋಲೆ ಹೊರಡಿಸಿದೆ. ತೆರಿಗೆದಾರರು ಮೇ 31ರೊಳಗೆ ತಮ್ಮ ಪ್ಯಾನ್ ಜೊತೆಗೆ ಆಧಾರ್‌ ಲಿಂಕ್ ಮಾಡಿದರೆ ಹೆಚ್ಚಿನ ಟಿಡಿಎಸ್‌ ಕಡಿತಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿತ್ತು. ಇದೇ ವೇಳೆ, ಬ್ಯಾಂಕ್‌ಗಳು ಹಾಗು ಹಣಕಾಸು ವ್ಯವಹಾರ ನಡೆಸುವ ಇತರೆ ಸಂಸ್ಥೆಗಳು ಕೂಡಾ ವ್ಯವಹಾರದ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

  • ಅಂತರ್ಜಾಲ ಮಾಹಿತಿ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ
July 26, 2025
3:56 PM
by: The Rural Mirror ಸುದ್ದಿಜಾಲ
ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ
July 26, 2025
3:16 PM
by: The Rural Mirror ಸುದ್ದಿಜಾಲ
ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group