ಫೆ.21 “ಭಾವತೀರ ಯಾನ” ಸಿನಿಮಾ ಬಿಡುಗಡೆ | ಇಬ್ಬರು ಗೆಳೆಯರ ಭಾವಯಾನ | ಮಲೆನಾಡಿನಲ್ಲಿ ನಡೆದಿದೆ ಚಿತ್ರೀಕರಣ |

February 10, 2025
6:29 AM
ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ ಈ ಸಿನಿಮಾವು ಚಿಕ್ಕವರಿಂದ ತೊಡಗಿ ಹಿರಿಯರವರೆಗೆ ಜೊತೆಯಲ್ಲಿ ಕುಳಿತು ನೋಡಬಹುದಾದ ಸಿನಿಮಾ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಯೂರ್‌ ಅಂಬೆಕಲ್ಲು ಹಾಗೂ ತೇಜಸ್‌ ಕಿರಣ್‌ ಅವರ ಸಿನಿಮಾ ನಿರ್ದೇಶನದ “ಭಾವತೀರ ಯಾನ”  ಸಿನಿಮಾವು ಫೆ.21 ರಂದು ಬಿಡುಗಡೆಯಾಗಲಿದೆ. ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಹಾಗೂ ಹಿರಿಯ ನಟರೂ ಭಾಗಿಯಾಗಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಮೂಡಿದೆ.……… ಮುಂದೆ ಓದಿ…….

ಮಯೂರ ಅಂಬೆಕಲ್ಲು ಹಾಗೂ ಅವರ ಸ್ನೇಹಿತ ತೇಜಸ್‌ ಕಿರಣ್‌ ನಿರ್ದೇಶನದ ‘ಭಾವತೀರ ಯಾನ’ ಸಿನಿಮಾ  ಕಿರುಚಿತ್ರ ಮಾಡುವ ಆಲೋಚನೆಯಿಂದ ಆರಂಭವಾದ ಕಥೆ. ಕಿರುಚಿತ್ರವನ್ನು ನೋಡಿದ ಬಳಿಕ ದೊಡ್ಡ ಪರದೆಯ ಮೇಲೆ ಈ ಚಿತ್ರವನ್ನು ತೋರಿಸಬಹುದು ಎಂಬ ಹಿರಿಯರ ಸಲಹೆ ಮೇರಗೆ ಕಥೆಯನ್ನು ವಿಸ್ತರಿಸಿಕೊಂಡು ಬೆಳೆದಿರುವ ಈ ಸಿನಿಮಾವು ಪ್ರೀತಿಯ ವಿಷಯವನ್ನು ಹೊಂದಿದೆ. ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ ಈ ಸಿನಿಮಾವು ಚಿಕ್ಕವರಿಂದ ತೊಡಗಿ ಹಿರಿಯರವರೆಗೆ ಜೊತೆಯಲ್ಲಿ ಕುಳಿತು ನೋಡಬಹುದಾದ ಸಿನಿಮಾ. ಈಚೆಗೆ ಬಿಡುಗಡೆಯಾಗಿರುವ ಸಿನಿಮಾಗಳಿಗಿಂತ ವಿಭಿನ್ನವಾಗಿದ್ದು ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವುಗಳನ್ನು ತೆರೆದಿರುವ ಒಬ್ಬ ಹುಡುಗನ ಕಥೆ  ಇರಲಿದೆ. ದಕ್ಷಿಣ ಕನ್ನಡ ಅದರಲ್ಲೂ ಸುಳ್ಯ, ಪುತ್ತೂರು, ಮಂಗಳೂರು ಭಾಗದಲ್ಲಿ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ಹಲವು ಕಡೆ ಚಿತ್ರೀಕರಣ ನಡೆದಿದೆ. ಕೇವಲ 20-25 ದಿನದಲ್ಲಿ ಚಿತ್ರೀಕರಣವನ್ನು ಈ ತಂಡವು ಮುಗಿಸಿದೆ.
ಮಯೂರ್‌ ಅಂಬೆಕಲ್ಲು
ತೇಜಸ್‌ ಕಿರಣ್
ಮಯೂರ್‌ ಅಂಬೆಕಲ್ಲು ಹಾಗೂ ಅವರ ಗೆಳೆಯ ತೇಜಸ್‌ ಕಿರಣ್‌ ಜೊತೆಯಾಗಿ ರಚಿಸಿರುವ ಕಥೆಗೆ ತೇಜಸ್‌ ಕಿರಣ್‌ ಇದರ ನಿರ್ದೇಶನದ ಜತೆಗೆ ನಾಯಕರಾಗಿ ನಟಿಸಿದರೆ, ಮಯೂರ ಅಂಬೇಕಲ್ಲು ನಿರ್ದೇಶನದ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.  ಈ ಚಿತ್ರದಲ್ಲಿ ರಮೇಶ್‌ ಭಟ್‌ ಹಾಗೂ ವೀಣಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿ ಆರೋಹಿ ನೈನಾ-ಅನುಷಾ ಕೃಷ್ಣ ನಾಯಕಿಯರು. ಇನ್ನುಳಿದಂತೆ ಕಿರುತೆರೆ ಕಲಾವಿದೆ ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ ಮತ್ತಿತರರು ಸಿನಿಮಾದಲ್ಲಿ ಇದ್ದಾರೆ. ಫೆ.21ಕ್ಕೆ ಬಿಡುಗಡೆಗೆ ಸಜ್ಜಾಗಿರುವ ಭಾವತೀರ ಯಾನ ಸಿನಿಮಾಕ್ಕೆ ಇಬ್ಬರು ಮಯೂರ್‌ ಹಾಗೂ ತೇಜಸ್‌ ಅವರ ಪೋಷಕರಾದ ಶೈಲೇಶ್‌ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿಕೆ ನಿರ್ಮಾಣದ ಬಲ ನೀಡಿದ್ದಾರೆ.‌

 

 

ಶೈಲೇಶ್‌ ಅಂಬೆಕಲ್ಲು

“Bhavatheera Yana,” an eagerly anticipated film helmed by directors Mayur Ambekallu and Tejas Kiran from the Sullia taluk of Dakshina Kannada district, is scheduled for release on February 21. This cinematic project has garnered significant attention, primarily due to its unique amalgamation of emerging talents from rural backgrounds alongside seasoned veteran actors. The film stands as a testament to the burgeoning creativity and potential within communities often overlooked by mainstream media. As anticipation builds, “Bhavthira Yana” is expected to offer a refreshing narrative that resonates with diverse audiences, promising both artistic innovation and cultural depth. The collaboration of these young directors with experienced actors is poised to deliver a memorable cinematic experience, further elevating the profile of regional cinema.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ
March 31, 2026
6:47 AM
by: ಮಿರರ್‌ ಡೆಸ್ಕ್
“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ
March 31, 2026
6:31 AM
by: ದ ರೂರಲ್ ಮಿರರ್.ಕಾಂ
‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ
March 31, 2026
6:09 AM
by: ದ ರೂರಲ್ ಮಿರರ್.ಕಾಂ
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror