ಅಡುಗೆ ಕೋಣೆಯಲ್ಲೇ ಮಕ್ಕಳಿಗೆ ಊಟ-ಪಾಠ | ಇದು ಸುಳ್ಯದ ಗ್ರಾಮೀಣ ಸರಕಾರಿ ಶಾಲೆಯೊಂದರ ದುಸ್ಥಿತಿ…! |

August 12, 2023
5:13 PM
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿಯ ಸರಕಾರಿ ಪ್ರಾಥಮಿಕ ಶಾಲೆ ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ದುಸ್ಥಿತಿಯಿಂದ ಕೂಡಿದೆ. ಇದರಿಂದ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ..

ನಮ್ಮ ದೇಶ ಸ್ವತಂತ್ರವಾಗಿ ನಾವು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆದರೆ ಒಂದಷ್ಟು ಮುಖ್ಯ ಸಮಸ್ಯೆಗಳು ಇಂದಿಗೂ ನೀಗಿಲ್ಲ. ಮೂಲಭೂತ ಸೌಕರ್ಯಗಳು ಇನ್ನೂ ಹಳ್ಳಿಗಳ ಕಡೆಗೆ ತಲುಪಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಮುಖ್ಯವಾದ ಶಿಕ್ಷಣವನ್ನು ನಮ್ಮ ಸರ್ಕಾರಗಳು ಇಂದಿಗೂ ಮಕ್ಕಳಿಗೆ ಸರಿಯಾದ ಸೌಲಭ್ಯ ಒದಗಿಸಿ ನೀಡುತ್ತಿಲ್ಲ. ನಮ್ಮ ಪ್ರತಿನಿಧಿಗಳಂತೂ ಸ್ವಹಿತದ ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋದೆ ಆಯ್ತು. ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳನ್ನು ಕಣ್ಣೆತ್ತಿಯೂ ನೋಡಲ್ಲ…!

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿಯ ಸರಕಾರಿ ಪ್ರಾಥಮಿಕ ಶಾಲೆ ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ದುಸ್ಥಿತಿಯಿಂದ ಕೂಡಿದೆ. ಇದರಿಂದ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.

ಇನ್ನು ಈ ಅಡುಗೆ ಕೋಣೆ ಸಹಿತ 100 ಚದರ ಅಡಿಗಿಂತ ಕಡಿಮೆಯಿದೆ. ನಾಲ್ಕು ದಶಕಗಳಷ್ಟು ಹಳೆಯದಾದ ಶಾಲಾ ಕಟ್ಟಡದ ಬ್ಲಾಕ್‌ಗಳು ಶಿಥಿಲಗೊಂಡಿವೆ ಮತ್ತು ಗೋಡೆಗಳಿಗೆ ಮರದ ದಿಮ್ಮಿಗಳಿಂದ ಆಸರೆ ನೀಡಲಾಗಿದೆ. ಇನ್ನು ಸಂಪೂರ್ಣ ಹಾನಿಗೀಡಾಗಿದ್ದ ಮತ್ತೊಂದು ಕೊಠಡಿಯನ್ನು ಸಣ್ಣಪುಟ್ಟ ದುರಸ್ತಿಗೊಳಿಸಿ ಅಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸಿದರು.

ಕಳೆದ ಮಾರ್ಚ್​ನಲ್ಲಿ ನಮ್ಮ ಶಾಲೆಯ ದುರಸ್ತಿಗೆ ಸರ್ಕಾರ ಹಣ ಮಂಜೂರು ಮಾಡಿತ್ತು. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಲಿಲ್ಲ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹಣ ವಾಪಸ್ ಹೋಗಿದೆ. ಕಳೆದ ವರ್ಷ ತರಗತಿಯೊಂದರ ಗೋಡೆಗಳು ಹಾನಿಗೊಳಗಾಗಿದ್ದವು. ಅದಕ್ಕೂ ಮುನ್ನ ಇನ್ನೊಂದು ತರಗತಿ ಕೊಠಡಿ ಬಳಕೆಗೆ ಯೋಗ್ಯವಲ್ಲ ಎಂದು ಇಲಾಖೆ ಘೋಷಿಸಿ ಮುಚ್ಚಿತ್ತು ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಿ.ಕೆ ದಯಾನಂದ ಹೇಳಿದರು.

ಇದರಿಂದ ತರಗತಿಗಳಿಗೆ ಬೇರೆ ಸ್ಥಳ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಸಂಪೂರ್ಣ ಹಾನಿಗೊಳಗಾದ ತರಗತಿಯನ್ನು ಸರಿಪಡಿಸಿ, ನೀರು ಸೋರಿಕೆಯಾಗದಂತೆ ತಾಡಪಲ್​ ಹಾಕಿದ್ದೇವೆ. ಹೀಗಾಗಿ ಅಡುಗೆ ಇಲ್ಲೇ ತಯಾರಿಸಲಾಗುತ್ತಿದೆ. ನಂತರ ಒಂದರಿಂದ ಐದನೇ ತರಗತಿವರೆಗಿನ ಸುಮಾರು 12 ಮಕ್ಕಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಳೆಗಾಲದಲ್ಲಿ ತಂಪಾದ ನೆಲದ ಮೇಲೆ ಕುಳಿತು ಪಾಠ ಕೇಳುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಖಾಯಂ ಶಿಕ್ಷಕರು ಮಾತ್ರ ಕಷ್ಟಗಳ ನಡುವೆಯೂ ಮಕ್ಕಳಿಗೆ ಕಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ ಎಂದರು.

ದಯಾನಂದ ಅವರು ಶಾಲೆಯ ದುರವಸ್ಥೆಯನ್ನು ನೋಡಿ ಹತ್ತಿರದಲ್ಲಿರುವ ಮತ್ತೊಂದು ಶಾಲೆಯಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವಂತೆ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ಶಾಲೆ ದುರಸ್ತಿಯಾಗುವವರೆಗು ವಿದ್ಯಾರ್ಥಿಗಳಿಗೆ ತಮ್ಮ ಕ್ಯಾಂಪಸ್​ನಲ್ಲಿ ಪಾಠ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಎಸ್‌ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ
April 11, 2025
6:00 AM
by: The Rural Mirror ಸುದ್ದಿಜಾಲ
ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ
April 11, 2025
5:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group