ನಮ್ಮ ದೇಶ ಸ್ವತಂತ್ರವಾಗಿ ನಾವು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆದರೆ ಒಂದಷ್ಟು ಮುಖ್ಯ ಸಮಸ್ಯೆಗಳು ಇಂದಿಗೂ ನೀಗಿಲ್ಲ. ಮೂಲಭೂತ ಸೌಕರ್ಯಗಳು ಇನ್ನೂ ಹಳ್ಳಿಗಳ ಕಡೆಗೆ ತಲುಪಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಮುಖ್ಯವಾದ ಶಿಕ್ಷಣವನ್ನು ನಮ್ಮ ಸರ್ಕಾರಗಳು ಇಂದಿಗೂ ಮಕ್ಕಳಿಗೆ ಸರಿಯಾದ ಸೌಲಭ್ಯ ಒದಗಿಸಿ ನೀಡುತ್ತಿಲ್ಲ. ನಮ್ಮ ಪ್ರತಿನಿಧಿಗಳಂತೂ ಸ್ವಹಿತದ ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋದೆ ಆಯ್ತು. ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳನ್ನು ಕಣ್ಣೆತ್ತಿಯೂ ನೋಡಲ್ಲ…!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿಯ ಸರಕಾರಿ ಪ್ರಾಥಮಿಕ ಶಾಲೆ ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ದುಸ್ಥಿತಿಯಿಂದ ಕೂಡಿದೆ. ಇದರಿಂದ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನಮ್ಮ ಶಾಲೆಯ ದುರಸ್ತಿಗೆ ಸರ್ಕಾರ ಹಣ ಮಂಜೂರು ಮಾಡಿತ್ತು. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಲಿಲ್ಲ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹಣ ವಾಪಸ್ ಹೋಗಿದೆ. ಕಳೆದ ವರ್ಷ ತರಗತಿಯೊಂದರ ಗೋಡೆಗಳು ಹಾನಿಗೊಳಗಾಗಿದ್ದವು. ಅದಕ್ಕೂ ಮುನ್ನ ಇನ್ನೊಂದು ತರಗತಿ ಕೊಠಡಿ ಬಳಕೆಗೆ ಯೋಗ್ಯವಲ್ಲ ಎಂದು ಇಲಾಖೆ ಘೋಷಿಸಿ ಮುಚ್ಚಿತ್ತು ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಿ.ಕೆ ದಯಾನಂದ ಹೇಳಿದರು.
ಇದರಿಂದ ತರಗತಿಗಳಿಗೆ ಬೇರೆ ಸ್ಥಳ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಸಂಪೂರ್ಣ ಹಾನಿಗೊಳಗಾದ ತರಗತಿಯನ್ನು ಸರಿಪಡಿಸಿ, ನೀರು ಸೋರಿಕೆಯಾಗದಂತೆ ತಾಡಪಲ್ ಹಾಕಿದ್ದೇವೆ. ಹೀಗಾಗಿ ಅಡುಗೆ ಇಲ್ಲೇ ತಯಾರಿಸಲಾಗುತ್ತಿದೆ. ನಂತರ ಒಂದರಿಂದ ಐದನೇ ತರಗತಿವರೆಗಿನ ಸುಮಾರು 12 ಮಕ್ಕಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಳೆಗಾಲದಲ್ಲಿ ತಂಪಾದ ನೆಲದ ಮೇಲೆ ಕುಳಿತು ಪಾಠ ಕೇಳುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಖಾಯಂ ಶಿಕ್ಷಕರು ಮಾತ್ರ ಕಷ್ಟಗಳ ನಡುವೆಯೂ ಮಕ್ಕಳಿಗೆ ಕಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ ಎಂದರು.
ದಯಾನಂದ ಅವರು ಶಾಲೆಯ ದುರವಸ್ಥೆಯನ್ನು ನೋಡಿ ಹತ್ತಿರದಲ್ಲಿರುವ ಮತ್ತೊಂದು ಶಾಲೆಯಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವಂತೆ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ಶಾಲೆ ದುರಸ್ತಿಯಾಗುವವರೆಗು ವಿದ್ಯಾರ್ಥಿಗಳಿಗೆ ತಮ್ಮ ಕ್ಯಾಂಪಸ್ನಲ್ಲಿ ಪಾಠ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಎಸ್‌ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…