ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |

November 26, 2024
7:11 AM
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು ಕೂಡಾ ಚರ್ಮದ ಆರೋಗ್ಯದ ಮೇಲೆ ಅತ್ಯುತ್ತಮವಾದ ಪರಿಣಾಮ ಬೀರುತ್ತದೆ. ಮಹೇಶ್‌ ಪುಣ್ಚತ್ತೋಡಿ ಅವರು ತಯಾರು ಮಾಡಿರುವ ಅಡಿಕೆಯ ಲಿಕ್ವಿಡ್‌ ಸೋಪು ಗಮನಸೆಳೆದಿದೆ.

ಅಡಿಕೆಯಲ್ಲಿರುವ  ಔಷಧೀಯ ಗುಣಗಳೂ ಹಲವಾರು. ಅಡಿಕೆಯ ಸೋಪು ಚರ್ಮದ ಹೊಳಪು ಹೆಚ್ಚಿಸುತ್ತದೆ, ಮೊಡವೆ ನಿವಾರಕವಾಗಿ ಕೆಲಸ ಮಾಡುತ್ತದೆ, ಬೆವರುಸಾಲೆಗಳ ನಿವಾರಣೆಯಲ್ಲೂ ಉತ್ತಮ ಪರಿಣಾಮ ಬೀರುತ್ತದೆ. ಕಳೆದ ಕೆಲವು ವರ್ಷಗಳಿಂದ ಅಡಿಕೆಯ ಲಿಕ್ವಿಡ್‌ ಸೋಪು ತಯಾರು ಮಾಡುತ್ತಿರುವ ಪುತ್ತೂರಿನ ಪಡ್ನೂರಿನಲ್ಲಿರುವ ಮಹೇಶ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement

Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಕೆದಿಲದ  ಸದ್ಯ ಪಡ್ನೂರಿನಲ್ಲಿ ವಾಸವಾಗಿರುವ ಮಹೇಶ್‌ ಪುಂಜತ್ತೋಡಿ ಅವರು ಅಡಿಕೆಯಿಂದ ಅದರಲ್ಲೂ ಎಳೆ ಅಡಿಕೆಯಿಂದ ಲಿಕ್ವಿಡ್‌ ಸೋಪು ತಯಾರು ಮಾಡುತ್ತಿದ್ದಾರೆ. ಸೋಪು ಮಾತ್ರವಲ್ಲ ಪೇಸ್‌ವಾಶ್‌, ಪೆಟ್‌ ಶಾಂಪ್‌ ಕೂಡಾ ತಯಾರು ಮಾಡುತ್ತಿದ್ದಾರೆ. wemade ಹೆಸರಿನಲ್ಲಿ Bubble Bath ಎನ್ನುವ ಲಿಕ್ವಿಡ್‌ ಸೋಪು ಈಗ ಮಾರುಕಟ್ಟೆಯಲ್ಲೂ ಲಭ್ಯವಿದೆ. ಅಡಿಕೆ ಮಾತ್ರವಲ್ಲ ತೆಂಗು, ಕೋಕಂ ಹಾಗೂ ಕೊಕೋ ಕೂಡಾ ಅವರ ಮೌಲ್ಯವರ್ಧನೆಯ ವಸ್ತುಗಳು. ಹೀಗಾಗಿ ಕೃಷಿ ವಸ್ತುಗಳ ಮೌಲ್ಯವರ್ಧನೆಯನ್ನು ಮಾಡುತ್ತಿರುವ ಮಹೇಶ್‌ ಅವರು ಕೃಷಿ ಸಮುದಾಯಕ್ಕೆ ಉತ್ತಮ ಸಂದೇಶವನ್ನೂ ನೀಡಿದ್ದಾರೆ.

ಕ್ಯಾಂಪ್ಕೊದ ಮಾಜಿ ಉದ್ಯೋಗಿಯಾಗಿರುವ ಮಹೇಶ್‌ ಅವರು ಮನೆ ಬಳಕೆಗಾಗಿ , ಕೈ ಕಾಲು ತೊಳೆಯುವ ಉದ್ದೇಶದಿಂದ ಲಿಕ್ವಿಡ್‌ ಸೋಪು ತಯಾರು ಮಾಡಿದ್ದರು. ಮನೆಯವರಿಗೆ ಇತರ ಲಿಕ್ವಿಡ್‌ ಸೋಪುಗಳು ಪಾತ್ರೆ ತೊಳೆಯುವ ವೇಳೆ ಕೈ ಹಾಗೂ ಮೈ ಎಲರ್ಜಿಯಾಗುತ್ತಿತ್ತು. ಇದಕ್ಕೆ ಪರ್ಯಾಯ ಬೇಕು ಎಂದು ಮನೆಯಲ್ಲಿಯೇ ಲಿಕ್ವಿಡ್‌ ಸೋಪು ತಯಾರಿಸಿದರು. ಇದಕ್ಕೆ “ಬಬಲ್‌ ಡ್ರಾಪ್‌” ಎನ್ನುವ ಹೆಸರು ಇರಿಸಿ ತಮ್ಮ ಮನೆಯ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು. ಅದಾದ ಬಳಿಕ ಈ ಮಾಹಿತಿ ಅರಿತ ಕೆಲವರು ಬಳಕೆ ಮಾಡಿ ತಮಗೂ ಬೇಕು ಎನ್ನುವ ಬೇಡಿಕೆ ಇರಿಸಿದಾಗ ಅವರಿಗೂ ತಯಾರಿಸಿದರು. ಹೀಗೇ ಅವರ ಬಬಲ್‌ ಡ್ರಾಪ್‌ ಪ್ರಚಾರ ಪಡೆಯಿತು. ಆ ಬಳಿಕ wemade ಎನ್ನುವ ಹೆಸರಿನ ಮೂಲಕ ಮಾರುಕಟ್ಟೆ ಪ್ರವೇಶಿಸಿದರು. ಇಂದು ಪುತ್ತೂರು, ಮಂಗಳೂರು ಕೆಲವು ಕಡೆ ಅವರು ಉತ್ಪನ್ನ ಲಭ್ಯವಿದೆ.

Advertisement

ಈ ಲಿಕ್ವಿಡ್‌ ಸೋಪು ತಯಾರಿಕೆಯ ಆರಂಭದ 3 ವರ್ಷ ಅವರ ಸತತ ಪ್ರಯತ್ನ ಸಾಗಿತ್ತು. ಯಾವುದೇ ಅಲರ್ಜಿಯಾಗದಂತೆ ಸಿದ್ಧವಾಗಬೇಕು ಅಂದರೆ ಪಿಎಚ್‌ ನ್ಯೂಟ್ರಲ್‌ ಆಗಬೇಕಾಗಿತ್ತು. ಹೀಗಾಗಿ ತೆಂಗಿನೆಣ್ಣೆ ಮತ್ತು ಹರಳೆಣ್ಣೆಯನ್ನೇ ಬಳಕೆ ಮಾಡಿ ಸೋಪಿನ ಬೇಸ್‌ ತಯಾರಿಸಿದ್ದರು. ಇದಕ್ಕಾಗಿ ಅಧ್ಯಯನ ಹಾಗೂ ಅಭಿವೃದ್ಧಿಪಡಿಸಲು ಮೂರು ವರ್ಷಗಳ ಕಾಲ ಪ್ರಯತ್ನಪಟ್ಟರು. ಕೊನೆಗೆ ಸೋಪಿನ ಬೇಸ್‌ ತಯಾರಿಸುವಲ್ಲಿ ಯಶಸ್ಸನ್ನು ಕಂಡರು. ಅಂದಿನಿಂದ ಬಬಲ್‌ ಡ್ರಾಪ್‌ ತಯಾರಾಯಿತು.

Advertisement

ಸೋಪಿನ ಬೇಸ್‌ ತಯಾರಾದ ಬಳಿಕ ವಿವಿಧ ಹಂತಗಳನ್ನು ತಲುಪಿದರು. ಅದರಲ್ಲಿ ಬೇಕಾದ ಫ್ಲೇವರ್‌ ಗಳನ್ನು ಸಿದ್ಧಪಡಿಸಿದರು. ಹೆಚ್ಚಾಗಿ ನೈಸರ್ಗಿಕವಾದ ಉತ್ಪನ್ನಗಳನ್ನೇ ಮಹೇಶ್ ಬಳಕೆ  ಮಾಡುತ್ತಾರೆ. ಕೃಷಿಕರೂ ಆದ್ದರಿಂದ ಕೃಷಿ ಉತ್ಪನ್ನಗಳನ್ನೇ ಮೌಲ್ಯವರ್ಧನೆ ಮಾಡುವ ಬಗ್ಗೆಯೇ ಆಸಕ್ತರಾದರು. ಹೀಗಾಗಿ ಇಡೀ ಅವರ ಉತ್ಪನ್ನಗಳ ಮೂಲವೇ ತೆಂಗಿನೆಣ್ಣೆ ಹಾಗೂ ಹರಳೆಣ್ಣೆ.

Advertisement

ಯಶಸ್ಸು ಕಂಡ ಬಳಿಕ ಅಡಿಕೆಯ ಸೋಪು ತಯಾರು ಮಾಡುವ ಬಗ್ಗೆ ಚಿಂತಿಸಿ ಬದನಾಜೆ ಶಂಕರ ಭಟ್‌ ಅವರನ್ನು ಸಂಪರ್ಕಿಸಿದಾಗ, ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಬದನಾಜೆ ಶಂಕರ ಭಟ್‌ ಅವರು ಮಾಹಿತಿ ನೀಡಿದರು. ಅಡಿಕೆಯು ಆಂಟಿ ಆಕ್ಸಿಡೆಂಡ್‌ ಚರ್ಮದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಹಾಗೂ ಉತ್ತಮವಾದ ಪ್ಲೇವರ್‌ ಕೂಡಾ ಸಾಧ್ಯ ಎಂದು ಶಂಕರ್‌ ಭಟ್‌ ಅವರು ಹೇಳಿದ್ದರು. ಹೀಗಾಗಿ ಸಾಗರದಿಂದ  ಅಡಿಕೆ ಚೊಗರು ತಂದು ಅದನ್ನು ತಮ್ಮ  ಪ್ರಾಡಕ್ಟ್‌ ಗಳಿಗೆ ಬಳಕೆ ಮಾಡಿದರು ಮಹೇಶ್.‌ ಅಡಿಕೆಯ ಬಾತ್‌ ಲಿಕ್ವಿಡ್‌, ಫೇಸ್‌ ವಾಶ್‌ ಹಾಗೂ ಪೆಟ್‌ ಶಾಂಪೂ ತಯಾರಿಸಿದರು. ಬದನಾಜೆಯವರು ಹೇಳುವಂತೆ ಅಡಿಕೆಯ ಚೊಗರು ಚರ್ಮದ ಕೆಳಗಿನ ಜಿಡ್ಡು ಶೇಖರಣೆಯನ್ನು ತೆಗೆಯುತ್ತದೆ ಇದರಿಂದ ಮೊಡವೆ ಇತ್ಯಾದಿಗಳು ನಿವಾರಣೆಯಾಗುತ್ತದೆ. ಚರ್ಮದ ಹೊಳಪು ಚೆನ್ನಾಗುತ್ತದೆ, ಚರ್ಮ ಸುಕ್ಕು ಹಿಡಿಯುವುದೂ ಕಡಿಮೆಯಾಗುತ್ತದೆ.

ನಮ್ಮಲ್ಲಿ ಲಿಕ್ವಿಡ್‌ ಸೋಪು ಬಳಕೆ ಮಾಡುವ ಜನರು ಕಡಿಮೆ ಇದ್ದಾರೆ , ಹೀಗಾಗಿ ಈ ಲಿಕ್ವಿಡ್‌ ಸೋಪು ತಯಾರಿಕೆಯ ಮೊದಲ ವರ್ಷ ಅಷ್ಟೊಂದು ಹಿಮ್ಮಾಹಿತಿ ಇರಲಿಲ್ಲ ಎನ್ನುತ್ತಾರೆ ಮಹೇಶ್‌. ಆದರೆ ಎರಡನೇ ವರ್ಷದಿಂದ ಅಡಿಕೆಯ ಸೋಪಿಗೆ ಉತ್ತಮ ಫೀಡ್‌ ಬ್ಯಾಕ್‌ ಬಂದಿದೆ. ಅಡಿಕೆ ಲಿಕ್ವಿಡ್ ಸೋಪು‌ ಬಳಕೆಯಿಂದ ಬೆವರುಸಾಲೆ ಕಡಿಮೆಯಾಗಿದೆ, ಆಹ್ಲಾದಕರವಾಗಿದೆ ಎನ್ನುವ ಹಿಮ್ಮಾಹಿತಿ ಬಂದಿದೆ ಎನ್ನುತ್ತಾರೆ ಮಹೇಶ್.‌

Advertisement

ಸದ್ಯ ಅಡಿಕೆ, ಕೊಕೋ ಬಟರ್, ತೆಂಗಿನೆಣ್ಣೆ, ಕೋಕಂ ಬಟರ್‌ ಇವರ ಮುಖ್ಯವಸ್ತುಗಳು. ಇದೆಲ್ಲವೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ. ಅದರಲ್ಲೂ ತೆಂಗಿನೆಣ್ಣೆ ಹೆಚ್ಚು ಬೇಕಾಗುತ್ತದೆ, ಸೋಪ್ ಬೇಸ್‌ ತೆಂಗಿನೆಣ್ಣೆ. ಹೊರಗಿನಿಂದ ಸೋಪು ಬೇಸ್‌ ತರುವುದಿಲ್ಲ ಎನ್ನುತ್ತಾರೆ ಮಹೇಶ್.

Advertisement
ಆರಂಭದ ದಿನಗಳಲ್ಲಿ ಸೋಪು ಬೇಸ್‌ ತಯಾರಿಸುವುದೇ ಸವಾಲಾಗಿತ್ತು. ಲಿಕ್ವಿಡ್‌ ರೂಪಕ್ಕೆ ತರಲು ಕಷ್ಟವಾಗಿತ್ತು. 3 ವರ್ಷ ಬೇಕಾಗಿತ್ತು. ಈಗ ಧೈರ್ಯ ಬಂದಿದೆ. ಅಡಿಕೆಯೂ ಮೌಲ್ಯವರ್ಧನೆ ಮಾಡಲು ಸಾಧ್ಯವಾಯಿತು. ಅದರ ಜೊತೆಗೆ ತೆಂಗಿನ ಎಣ್ಣೆ, ಪುನರ್ಪುಳಿ, ಕೊಕೋ ಇದು ಕೂಡಾ ಮೌಲ್ಯವರ್ಧನೆಯಾಗುತ್ತದೆ ಎನ್ನುತ್ತಾರೆ ಮಹೇಶ್.‌

ಸದ್ಯ ಅವರ ಪತ್ನಿ ಗೀತಾ ಪುಂಜತ್ತೋಡಿ ಹಾಗೂ ಅವರ ಪುತ್ರ ಪ್ರತೀಕ್‌ ಅವರು ಸೇರಿ ಈ ವಸ್ತುಗಳನ್ನು ಮಾರಾಟ, ತಯಾರಿಕೆ, ಬ್ರಾಂಡಿಂಗ್‌ ಮಾಡುತ್ತಿದ್ದಾರೆ. ಮಾರುಕಟ್ಟೆಯನ್ನು ತಮಗೆ ಸಾಧ್ಯವಾದಷ್ಟು ವಿಸ್ತಾರ ಮಾಡುತ್ತಿದ್ದಾರೆ.

ಅಡಿಕೆಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪವಾದಗಳು ಇರುವ ನಡುವೆಯೇ ಅಡಿಕೆಯ ಔಷಧೀಯ ಗುಣಗಳು ಇಲ್ಲಿ ಲಿಕ್ವಿಡ್‌ ಸೋಪು ಮಾದರಿಯಲ್ಲಿ ಬಳಕೆಯಾಗಿದೆ. ಅಡಿಕೆಯ ಇಂತಹ ಗುಣಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬೇಕಿದೆ. ಕೃಷಿಕರೂ ಬೆಂಬಲಿಸಬೇಕಿದೆ. (ಮಹೇಶ್‌ ಅವರ ಸಂಪರ್ಕ ಸಂಖ್ಯೆ : 9448770585 )

Advertisement

Arecanut or Betelnuts are known for their numerous medicinal properties. Arecanut soap is effective in brightening the skin, acting as an anti-acne agent, and helping to reduce sweat lines. Mahesh Punchathody, from Padnur-Puttur, who has been producing liquid soap made from Arecanuts for several years, shared insights on this topic.

Advertisement

In addition to this they also manufacture different types of liquid soap.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror