ಈರುಳ್ಳಿಯನ್ನು ಹೆಚ್ಚಾಗಿ ತರಕಾರಿಯ ರೂಪದಲ್ಲಿ ಉಪಯೋಗಿಸುತ್ತೇವೆ.
ಬೋಂಡಾ ಬಜ್ಜಿ ಪಲ್ಲೆ ಸಾಂಬಾರು ಸಾರು ಸಾಸಿವೆ ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸುವ ಈರುಳ್ಳಿಯಲ್ಲಿ ಔಷಧೀಯ ಗುಣಗಳು ತುಂಬಾ ಇದೆ. ಬಿಳಿ ಈರುಳ್ಳಿ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಉರಿಯೂತ ನಿವಾರಕ ಮತ್ತು ಆ್ಯಂಟಿಬಯೋಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ಆರ್ಯುವೇದ ಅತೀ ಹೆಚ್ಚು ಬೆಲೆಯನ್ನು ಹೊಂದಿದೆ
ಕೆಂಪು ಈರುಳ್ಳಿ, ಬಿಳಿ ಈರುಳ್ಳಿ, ಸಿಹಿ ಈರುಳ್ಳಿ ತುಂಬಾ ವಿಧಗಳು ಇದ್ದರೂ ಬಿಳಿ ಈರುಳ್ಳಿಯ ಔಷಧೀಯ ಗುಣಗಳು ಹೆಚ್ಚು. ಇದು ನಾನು ಚಿಕ್ಕವಳಿದ್ದಾಗ ನನ್ನ ಅಜ್ಜಿ ಎಂದ ಕೇಳುವ ಫೇವರೆಟ್ ಕಥೆ. ಈರುಳ್ಳಿ ಸ್ತೂಲ ಶರೀರವನ್ನು ಬೆಳ್ಳುಳ್ಳಿ ಕೃಷ ಶರೀರವನ್ನು ಉಂಟುಮಾಡುತ್ತದೆ.
ಈರುಳ್ಳಿ ಕೇವಲ ಅಡುಗೆಗೆ ಮಾತ್ರವಲ್ಲದೆ ದರ ಉಪಯೋಗದಿಂದ ಆರೋಗ್ಯಕ್ಕೂ ಬಹಳ ಉಪಯೋಗವಿದೆ.
1) ಬಿಳಿ ಈರುಳ್ಳಿಯ ರಸವನ್ನು ಬಿಸಿ ಮಾಡಿ ಕಿವಿಗೆ ಬಿಡುವುದರಿಂದ ಕರ್ಣ ಶೂಲೆ ಗುಣವಾಗುತ್ತದೆ.
2) ಕಿವಿಯನ್ನು ಸ್ವಚ್ಛಗೊಳಿಸಿ ಈರುಳ್ಳಿಯ ರಸವನ್ನು ಬಿಡುವುದರಿಂದ ಕಿವಿ ಸೋರುವುದು ನಿಲ್ಲುತ್ತದೆ. ತುಂಬಾ ದಿನ ಮಾಡಬೇಕಾಗುತ್ತದೆ.
3) ಶೀತಕಾಲದಲ್ಲಿ ಅರ್ಧ ಚಮಚ ದಿಂದ ಒಂದು ಚಮಚ ಈರುಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹ ಪುಷ್ಟಿ ಆಗುತ್ತದೆ.
4) ಪ್ರತಿದಿನ ಅರ್ಧ ಕಪ್ ಈರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದರಿಂದ ಸಣ್ಣ ಪ್ರಮಾಣದ ಮೂತ್ರದ ಕಲ್ಲು ನಿವಾರಣೆ ಆಗುತ್ತದೆ.
5) ಊರಿನಲ್ಲಿ ಕಾಲರ ಬಂದಾಗ ಈರುಳ್ಳಿ ರಸವನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಊರಿನ ಕಾಲರ ಮನೆಗೆ ಬರುವುದಿಲ್ಲ.
6) ಈರುಳ್ಳಿಯ ಪೀಸ್ ಗಳನ್ನು ಮನೆಯಲ್ಲಿ ಅಲ್ಲಲ್ಲಿ ಇಡುವುದರಿಂದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ.
7) ಈರುಳ್ಳಿಯನ್ನು ಸುಟ್ಟು ಬೆಲ್ಲ ಹಾಕಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
8) ಈರುಳ್ಳಿ ರಸಕ್ಕೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಬೇಗನೆ ಮುಟ್ಟು ಬರುತ್ತದೆ.
9) ಈರುಳ್ಳಿ ಹೆಚ್ಚುವಾಗ ಬರುವ ಗಾಟನ್ನು ಕಣ್ಣಿಗೆ ತೆಗೆದುಕೊಳ್ಳುವುದರಿಂದ ಕಣ್ಣು ಸ್ವಚ್ಚವಾಗುತ್ತದೆ.
10) ಈರುಳ್ಳಿಯ ರಸವನ್ನು ಕೂದಲಿನ ಬುಡದಲ್ಲಿ ಹಚ್ಚುವುದರಿಂದ ಕೂದಲಿನ ಉದುರುವ ಹೊಟ್ಟಿನ ಮತ್ತು ಹೇನಿನ ಸಮಸ್ಯೆ ಪರಿಹಾರವಾಗುತ್ತದೆ.
11) ಈರುಳ್ಳಿಯ ರಸ ತೆಗೆದು ಎಣ್ಣೆಯಲ್ಲಿ ಕುದಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
12) ಪ್ರತಿನಿತ್ಯ ಈರುಳ್ಳಿ ಹೆಚ್ಚು ಉಪಯೋಗಿಸುವುದರಿಂದ ಶರೀರದ ತೂಕ ಹೆಚ್ಚುತ್ತದೆ.
13) ಈರುಳ್ಳಿಯ ಸೊಪ್ಪನ್ನು ಪೇಸ್ಟ್ ಮಾಡಿ ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಗಾಯ ಗುಣವಾಗುತ್ತದೆ. ಬೊಬ್ಬೆಗಳು ಬರುವುದಿಲ್ಲ.
14) ನಾನು ತಯಾರಿಸುವ ತೊನ್ನಿನ ಔಷಧಿ ಯಲ್ಲಿ ಇದರ ಬೀಜದ ಅಗತ್ಯ ಇರುತ್ತದೆ.
*ವಿಶೇಷ ಸೂಚನೆ*
15) ಈರುಳ್ಳಿಯ ಹೆಚ್ಚು ಸೇವನೆಯಿಂದ ಬುದ್ಧಿ ಸಾಮರ್ಥ್ಯ ಕಡಿಮೆಯಾಗುತ್ತದೆ.
16) ತಾಮಸಿಕ ಗುಣವನ್ನು ಹೆಚ್ಚಿಸುತ್ತದೆ. ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.
17) ಇದರ ಘಾಟು ವಾಸನೆ ಬೇರೆಯವರೊಂದಿಗೆ ಮಾತನಾಡುವಾಗ ಅನುಕೂಲಕರವಾಗಿರುವುದಿಲ್ಲ.
🥢 ಸುಮನಾ ಮಳಲಗದ್ದೆ 9980182883.