ಬೇಸಿಗೆಯಲ್ಲಿ ದಾಹ ತಣಿಸಿಕೊಳ್ಳಲು ಬಳಸುವ ಎಳನೀರನ್ನು ಯಾವ ಉದ್ದೇಶಕ್ಕೆ ತೆಗೆದುಕೊಳ್ಳುತ್ತೇವೆ ಅನ್ನೋದು ನಾವು ಹೇಗೆ ತೆಗೆದುಕೊಳ್ಳುವುದು ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ.
ಬನ್ನಿ ಹಾಗಾದ್ರೆ ಎಳನೀರನ್ನು ಹೇಗಡ ಕುಡಿದರೆ ಯಾವುದಕ್ಕೆಲ್ಲಾ ಪ್ರಯೋಜನವಾಗುತ್ತದೆ ಅನ್ನೋದನ್ನು ತಿಳಿಯೋಣ..
1) ಮರದಿಂದ ಇಳಿಸಿ ಎಳೆ ನೀರನ್ನು ಹಾಗೆ ಕುಡಿಯುವುದರಿಂದ ಮೂತ್ರಕೋಶ ಶುದ್ದಿಯಾಗುತ್ತದೆ.
2) ಎಳನೀರಿಗೆ ನಿಂಬೆರಸ ಸೇರಿಸಿ ಕುಡಿಯುವುದರಿಂದ ದೇಹ ತಂಪಾಗುತ್ತದೆ.
3) ರಾತ್ರಿ ಎಳನೀರಿಗೆ ಜೀರಿಗೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಕರುಳು ಶುದ್ದಿ ಯಾಗುತ್ತದೆ.
4) ಎಳನೀರಿನೊಂದಿಗೆ ಎಳೆನೀರಿನ ಗಂಜಿಯನ್ನು ಸೇರಿಸಿ ಮಿಕ್ಸಿ ಮಾಡಿ ಕುಡಿಯುವುದರಿಂದ ದೇಹದ ಉರಿ ಶಮನವಾಗುತ್ತದೆ.
5) ಎಳನೀರೋಂದಿಗೆ ಧನಿಯಾ ಪುಡಿ ಸೇರಿಸಿ ಸೇವಿಸುವುದರಿಂದ ಶಕ್ತಿ ವೃದ್ಧಿಯಾಗುತ್ತದೆ.
6) ಎಳನೀರಿಗೆ ಕಬ್ಬಿಣದ ಸೌಟ್ ಕಾಯಿಸಿ ಅದ್ದಿ ಕುಡಿಯುವುದರಿಂದ ಎಳನೀರಿನಿಂದ ಆಗುವ ಕಫ ನಿಯಂತ್ರಣಕ್ಕೆ ಬರುತ್ತದೆ.
7) ಎಳನೀರನ್ನು ಕಾಯಿಸಿ ಬೆಲ್ಲ ಮಾಡಿ ಗಾಯಕ್ಕೆ ಹಚ್ಚುವುದರಿಂದ ಆಗತಾನೆ ಆದ ಗಾಯ ಬೇಗನೆ ವಾಸಿಯಾಗುತ್ತದೆ.
8) ಕ್ರಿಯಾಟಿನ್ ಹೆಚ್ಚಿರುವವರು ಎಳನೀರನ್ನು ಸೇವಿಸಬಾರದು.
ಸುಮನಾ ಮಳಲಗದ್ದೆ 9980182883.