ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಸಾಗಾ ಮಾಡುತ್ತಿದ್ದ ಅಡಿಕೆಯನ್ನು ಗಡಿ ಭದ್ರತಾ ಪಡೆ ಹಾಗೂ ಮೇಘಾಲಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಸುಮಾರು 24 ಲಕ್ಷ ರೂಪಾಯಿ ಮೌಲ್ಯದ 11000 ಕೆಜಿ ಒಣ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇಘಾಲಯದ ರೋಂಗಾರಾ ಪ್ರದೇಶದಲ್ಲಿ ಅಡಿಕೆ ಸಾಗಾಟ ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಮೂರು ಲಾರಿಗಳಲ್ಲಿ ಒಟ್ಟು 24 ಲಕ್ಷ ರೂ.ಮೌಲ್ಯದ ಒಣ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಬಿಎಸ್ಎಫ್ ಪ್ರಕಾರ, ವಾಹನಗಳ ಎಲ್ಲಾ ಮೂವರು ಚಾಲಕರು ತಪ್ಪಿಸಿಕೊಂಡಿದ್ದಾರೆ. ತನಿಖೆ ಮುಂದುವರಿಯುತ್ತಿದೆ.
ಕಳೆದ ಕೆಲವು ಸಮಯಗಳಿಂದ ಅಡಿಕೆಯು ಕಳ್ಳಸಾಗಾಣಿಕೆ ಮೂಲಕ ಭಾರತಕ್ಕೆ ಬರುತ್ತಲೇ ಇದೆ. ಸಣ್ಣ ಪ್ರಮಾಣದಲ್ಲಿ ಸಾಗಾಟವಾಗುತ್ತಿದ್ದ ಅಡಿಕೆ ಈಚೆಗೆ ದೊಡ್ಡ ಪ್ರಮಾಣದಲ್ಲಿಯೂ ಸಾಗಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಮುಂದೆಯೂ ಕಾರ್ಯಾಚರಣೆಗಳು ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel