#Melasma | ಚೆಲುವಿಗೆ ಕುಂದು ತಂದಿದೆಯೇ ಬಂಗು | ಇದಕ್ಕೆ ಆಯುರ್ವೇದದಲ್ಲಿದೆ ಪರಿಹಾರ |

August 18, 2023
1:30 PM
ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕ ಉತ್ಪಾದನೆ ಆಗುವುದರಿಂದ ಹೈಪರ್ ಪಿಗ್ಮೆಂಟೇಷನ್ ಉಂಟಾಗುತ್ತದೆ. ಈ ಸಮಸ್ಯೆಗೆ ಆಯುರ್ವೇದದಲ್ಲಿ ಪರಿಹಾರ ಇದೆ.

ಬಂಗು #melasma. ಇದನ್ನು ಆಯುರ್ವೇದದಲ್ಲಿ ವ್ಯಂಗ #Vyanga ಎಂದು ಕರೆಯಲಾಗುತ್ತದೆ. ಇದು ಸಾಧಾರಣ ಮಧ್ಯವಯಸ್ಕರಲ್ಲಿ ಮುಖದ ಮೇಲೆ, ಹಣೆ,ಗಲ್ಲ, ಕುತ್ತಿಗೆ ಬೆನ್ನು ಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ತರದ ಕಪ್ಪು ಕಲೆಯುಳ್ಳ ಚರ್ಮವ್ಯಾಧಿ. ಇದರಲ್ಲಿ ಚರ್ಮ ಕಂದು ಅಥವಾ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸಾಮಾನ್ಯವಾಗಿ ಬಂಗು ಅಥವಾ ಕರಂಗ ಅಥವಾ ಮೆಲಾಸ್ಮಾ ಎಂದು ಕರೆಯುತ್ತಾರೆ. ಸ್ತ್ರೀಯರಲ್ಲಿ ಅಧಿಕವಾಗಿ ಕಾಣಬಹುದು. ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕ ಉತ್ಪಾದನೆ ಆಗುವುದರಿಂದ ಹೈಪರ್ ಪಿಗ್ಮೆಂಟೇಷನ್ ಉಂಟಾಗುತ್ತದೆ.

Advertisement
Advertisement

ಇದಕ್ಕೆ ಕಾರಣಗಳೇನು..?:
– ಸುಡುವ ಬಿಸಿಲಿಗೆ ಸತತವಾಗಿ ಚರ್ಮವನ್ನು ಒಡ್ಡುವುದು
– ಹಾರ್ಮೋನ್ ನ ಬದಲಾವಣೆಗಳು (ಹೆರಿಗೆಯ ನಂತರ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಸಾಮಾನ್ಯವಾಗಿ ಕಂಡುಬರುತ್ತದೆ )
– ಅನುವಂಶಿಯತೆ
– ಆಹಾರದಲ್ಲಿ ಪೋಷಕಾಂಶಗಳ ಕೊರತೆ . ವಿಟಮಿನ್ E ಮತ್ತು C ಕೊರತೆಯಿಂದಲೂ ಹೈಪರ್ ಪಿಗ್ಮೆಂಟೇಷನ್ ಉಂಟಾಗಬಹುದು.

ಪರಿಹಾರ:
–  ಬಿಸಿಲಿಗೆ ಹೆಚ್ಚು ಹೋಗದೇ ಇರುವುದು
– ವಿಟಮಿನ್ ಸಿ ಜಾಸ್ತಿ ಇರುವ ಕಿತ್ತಳೆ ಹಣ್ಣಿನ ಸೇವನೆ ಹಾಗೂ ವಿಟಮಿನ್ E ಹೇರಳವಾಗಿರುವ ಹಸಿರು ತರಕಾರಿಗಳು, ಗೋಧಿ ರಾಗಿಯ ಅತಿ ಹೆಚ್ಚು ಬಳಕೆ ಮಾಡವುದು
– ಚರ್ಮದ ಕಾಂತಿಯನ್ನು ಹೆಚ್ಚಿಸುವ ಲೋಳೆಸರ, ಅರಸಿನ ಇವುಗಳ ಲೇಪನ
– ನೈಸರ್ಗಿಕವಾಗಿ ರಕ್ತ ಶುದ್ಧ ಮಾಡಲು ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ.
– ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವಂಥದ್ದು
– ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು.
– ಉತ್ತಮ ಚರ್ಮದ ರಕ್ಷಣೆಗಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ. ಜ್ಯೋತಿ ಕೆ, ಆಯುರ್ವೇದ ತಜ್ಞರು, ಮಂಗಳೂರು, 94481 68053

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಗಾಲದಲ್ಲಿ ಡೆಂಗ್ಯು ಹರಡುವ ಸಾಧ್ಯತೆ  – ಎಚ್ಚರಿಕೆ
July 25, 2025
7:32 AM
by: ದ ರೂರಲ್ ಮಿರರ್.ಕಾಂ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್
July 15, 2025
9:31 PM
by: The Rural Mirror ಸುದ್ದಿಜಾಲ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group