ಗುತ್ತಿಗಾರು ಸ್ವಚ್ಛತಾ ಅಭಿಯಾನ | ವಾರ್ಡ್‌ ಮಟ್ಟದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಸಂಜೀವಿನಿ ಒಕ್ಕೂಟದ ಸದಸ್ಯರು |

September 14, 2023
1:28 PM
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಗುತ್ತಿಗಾರು ಗ್ರಾಪಂ , ಸಂಜೀವಿನ ಒಕ್ಕೂಟ, ವರ್ತಕ ಸಂಘ ಹಾಗೂ ಇತರ ಸಂಘಗಳ ಸಹಕಾರದೊಂದಿಗೆ ಈ ಕಾರ್ಯ ಪ್ರತೀ ವಾರ ನಡೆಯುತ್ತಿರುವ ಸ್ವಚ್ಛತಾ ಜಾಗೃತಿ ಅಭಿಯಾನವು ಇದೀಗ ಸಂಜೀವಿನ ಒಕ್ಕೂಟದ ಸದಸ್ಯರ ಮೂಲಕ ವಾರ್ಡ್‌ ಮಟ್ಟದಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಕಾರ್ಯ ಮಾದರಿಯಾಗಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ನಡೆಯುತ್ತಿರುವ ಸ್ವಚ್ಛ ಗುತ್ತಿಗಾರು ಅಭಿಯಾನವು ಕಳೆದ 11 ವಾರಗಳಿಂದ ನಿರಂತರವಾಗಿ ನಡೆಯುತ್ತಿದೆ. ಸ್ವಚ್ಛತಾ ಟಾಸ್ಕ್‌ ಫೋರ್ಸ್‌ ಹಾಗೂ ಗುತ್ತಿಗಾರು ಗ್ರಾಪಂ , ಸಂಜೀವಿನ ಒಕ್ಕೂಟ, ವರ್ತಕ ಸಂಘ ಹಾಗೂ ಇತರ ಸಂಘಗಳ ಸಹಕಾರದೊಂದಿಗೆ ಈ ಕಾರ್ಯ ಪ್ರತೀ ವಾರ ಸ್ವಚ್ಛತಾ ಜಾಗೃತಿ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇದೀಗ ಸಂಜೀವಿನಿ ತಂಡವು ವಾರ್ಡ್‌ ಮಟ್ಟದಲ್ಲಿ ಈ ಕಾರ್ಯವನ್ನು ನಡೆಸುತ್ತಿದೆ.

Advertisement

ಬುಧವಾರ ಸ್ವಚ್ಚತಾ ಕಾರ್ಯವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಅಮರ ಸಂಜೀವಿನಿ ಒಕ್ಕೂಟದ ವತಿಯಿಂದ ಕಡ್ತಲ್ ಕಜೆ- ವಳಲಂಬೆ- ಕಾಜಿಮಡ್ಕ- ವಳಲಂಬೆ ಅಂಗವಾಡಿ-ಹಾಗೂ ವಳಲಂಬೆಯ ರಸ್ತೆ ಬದಿಗಳಲ್ಲಿ ಸ್ವಚ್ಚತೆ ಮಾಡಲಾಯಿತು. ರಸ್ತೆ ಬದಿಗಳಲ್ಲಿದ್ದ ಕಸವನ್ನು ಗೋಣಿಚೀಲದಲ್ಲಿ ತುಂಬಿಸಿಡಲಾಯಿತು.ಬೆಳಗ್ಗೆ 10ಗಂಟೆಗೆ ಆರಂಭವಾದ ಸ್ವಚ್ಚತಾ ಕಾರ್ಯಕ್ರಮ ಪಂಚಾಯತ್ ಅಧ್ಯಕ್ಷರಾದ ಸುಮಿತ್ರ ಮೂಕಮಲೆ ಉಪಸ್ಥಿತಿಯಲ್ಲಿ ಮುಂದುವರೆಯಿತು.

ಈ ಸ್ವಚ್ಚತಾ ಕಾರ್ಯದಲ್ಲಿ ಶಂಖಪಾಲ ಸ್ತ್ರೀ ಶಕ್ತಿ, ಶಂಖಶ್ರೀ ಸ್ತ್ರೀ ಶಕ್ತಿ, ಶ್ರೀ ದುರ್ಗಾ ಸ್ತ್ರೀ ಶಕ್ತಿ, ಯಶಸ್ವಿ ಸಂಜೀವಿನಿ, ಬಾಂಧವ್ಯ ಸಂಜೀವಿನಿ,ಚಿಗುರು ಸಂಜೀವಿನಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ,ಆಶಾಕಾರ್ಯಕರ್ತೆ,ಅಮರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ, ಎಲ್.ಸಿ.ಆರ್.ಪಿಗಳು, ಪಶುಸಖಿ,ಕೃಷಿ ಸಖಿ ಹಾಗೂ ವಾರ್ಡ್ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 13, 2025
11:03 PM
by: The Rural Mirror ಸುದ್ದಿಜಾಲ
ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group