ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA ) ಯು ಜಾನುವಾರು ಶೆಡ್ ನಿರ್ಮಾಣಕ್ಕೆ ದೊರೆಯುತ್ತಿರುವ ರೂ 57,000 ಸಹಾಯಧನ ನೀಡುತ್ತಿದೆ. ಈ ದೃಷ್ಟಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಪಶುಗಳ ಆರೈಕೆಗೆ ಉತ್ತಮ ಪರಿಸರ ಒದಗಿಸಲು ಸಹಕಾರಿಯಾಗುತ್ತದೆ. ಈ ಯೋಜನೆಯ ಮೊತ್ತದಲ್ಲ ರಾಜ್ಯಾಸುಸಾರ ವ್ಯತ್ಯಾಸಗಳು ಇರುತ್ತಿದ್ದು ಹೆಚ್ಚಿನ ಮಾಹಿತಿಗೆ ಪಂಚಾಯತ್ ಅಥವಾ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬಹುದು.
ಹಸು, ಎಮ್ಮೆ, ಕುರಿ, ಹಂದಿ, ಕೋಳಿ ಮುಂತಾದ ಜಾನುವಾರುಗಳಿಗಾಗಿ ಸುರಕ್ಷಿತ ಮತ್ತು ಸ್ವಚ್ಛ ಶೆಡ್ ನಿರ್ಮಾಣಕ್ಕೆ ಯೋಜನೆಯಡಿ ಅನುದಾನ ಸಿಗುತ್ತದೆ. ಅಂದರೆ, ಕರ್ನಾಟಕದಲ್ಲಿ ಹಸು ಅಥವಾ ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ರೂ. 57,000 ಸಹಾಯಧನ ನೀಡುವುದು. ಇದರಲ್ಲಿ ರೂ. 10,556 ಕೂಲಿ ವೆಚ್ಚ ಹಾಗೂ ರೂ 46,644 ಸಾಮಾಗ್ರಿ ವೆಚ್ಚ ಒಳಗೊಂಡಿದ್ದು, ಈ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಂತಹಂತವಾಗಿ ವರ್ಗಾವಣೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
• ಜಾಬ್ ಕಾರ್ಡ್ ಪ್ರತಿಗಳು
• ಆಧಾರ್ ಕಾರ್ಡ್ ಪ್ರತಿಗಳು
• ಆಮೀನು ದಾಖಲೆಗಳು
• ಬ್ಯಾಂಕ್ ಖಾತೆ ವಿವರಗಳು
• ಪಶು ವೈದ್ಯರಿಂದ ದೃಢೀಕರಣ ಪತ್ರ
• ಸ್ಥಳೀಯವಾಗಿ ಕೇಳುವ ಇತರ ದಾಖಲೆಗಳು
ಅರ್ಜಿ ಸಲ್ಲಿಕೆ ಹೇಗೆ? : ಅಗತ್ಯ ದಾಖಲೆಗಳೊಂದಿಗೆ ಪಂಚಾಯತ್ ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರೀಶಿಲಿಸುತ್ತಾರೆ. ತದನಂತರ ಕೆಲಸ ಆರಂಭಕ್ಕೆ ಅನುಮತಿ ದೊರೆಯುತ್ತಿದ್ದು. ಕೆಲಸ ಪೂರ್ಣಗೊಂಡಂತೆ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತದೆ.


