ಭಾರತದ ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಹಾವಳಿ..! ಮಣ್ಣಿನೊಳಗೆ ‘ಪ್ಲಾಸ್ಟಿಕ್ ವಿಷ’! ರೈತರ ಭವಿಷ್ಯಕ್ಕೆ ಮೈಕ್ರೋಪ್ಲಾಸ್ಟಿಕ್ ದೊಡ್ಡ ಎಚ್ಚರಿಕೆ

May 17, 2026
2:30 PM
ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದನೆಗೆ ಭೀತಿ ತಂದಿದೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣೆ ಹಾಗೂ ತುರ್ತು ಕ್ರಮ ಅಗತ್ಯವಾಗಿದೆ.

ಭಾರತದ ಕೃಷಿ ವ್ಯವಸ್ಥೆಯಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ದೊಡ್ಡ ಸವಾಲಾಗಿ ಬೆಳೆಯುತ್ತಿದೆ. ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ನಿರ್ವಹಣೆಯ ಕೊರತೆ ಮತ್ತು ಕೃಷಿ ಪದ್ಧತಿಗಳಿಂದ ಮಣ್ಣಿನ ಗುಣಮಟ್ಟ, ಬೆಳೆ ಉತ್ಪಾದನೆ ಮತ್ತು ಆಹಾರ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತಿದೆ.

ಭಾರತದಲ್ಲಿ ಪ್ಲಾಸ್ಟಿಕ್ ಮಾಲಿನ್ಯವು ಈಗ ಕೃಷಿ ಕ್ಷೇತ್ರಕ್ಕೂ ಗಂಭೀರವಾಗಿ ವ್ಯಾಪಿಸಿದ್ದು, ಮೈಕ್ರೋಪ್ಲಾಸ್ಟಿಕ್ (ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು) ಮಣ್ಣಿನಲ್ಲಿ ಸೇರುವ ಮೂಲಕ ಹೊಸ ಪರಿಸರ ಸಮಸ್ಯೆ ಸೃಷ್ಟಿಸಿದೆ. ಇವು 5 ಮಿಮೀ ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳು ಆಗಿದ್ದು, ಪರಿಸರದಲ್ಲಿ ದೀರ್ಘಕಾಲ ಉಳಿಯುತ್ತವೆ. ಇತ್ತೀಚಿನ ವರದಿಯ ಪ್ರಕಾರ, ಕೃಷಿಯಲ್ಲಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.

 ಮೈಕ್ರೋಪ್ಲಾಸ್ಟಿಕ್ ಹೇಗೆ ಕೃಷಿಗೆ ಬರುತ್ತದೆ? : ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್‌ಗಳು, ಗ್ರೀನ್‌ಹೌಸ್ ಕವರ್‌ಗಳು, ಡ್ರಿಪ್ ನೀರಾವರಿ ಪೈಪ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕೈಗಾರಿಕಾ ಹರಿವು ಇತ್ಯಾದಿಗ ಬಳಕೆ ಇದೆ.  ಇವು ಕಾಲಕ್ರಮೇಣ ತುಂಡಾಗುತ್ತಾ ಮೈಕ್ರೋಪ್ಲಾಸ್ಟಿಕ್ ಕಣಗಳಾಗಿ ಮಣ್ಣಿನಲ್ಲಿ ಸೇರುತ್ತವೆ.

ಮಣ್ಣಿನ ಮೇಲೆ ಪರಿಣಾಮ :  ಈ ಪ್ಲಾಸ್ಟಿಕ್‌ ಕಣಗಳಿಂದಾಗಿ ಮಣ್ಣಿನ ಸೂಕ್ಷ್ಮ ಜೀವಿಗಳ ಮೇಲೆ ಹಾನಿ, ಪೋಷಕಾಂಶ ಚಕ್ರದಲ್ಲಿ ವ್ಯತ್ಯಯ, ನೀರಿನ ಹಿಡಿತ ಸಾಮರ್ಥ್ಯ ಕುಸಿತ, ಮಣ್ಣಿನ ಗುಣಮಟ್ಟ ಹದಗೆಡುವಿಕೆ ಆರಂಭವಾಗುತ್ತದೆ.  ಇದರಿಂದ ಬೆಳೆ ಉತ್ಪಾದನೆ ಮತ್ತು ಮಣ್ಣಿನ ಆರೋಗ್ಯಕ್ಕೆ ನೇರ ಹೊಡೆತ ಬೀಳುತ್ತದೆ.

ಆಹಾರ ಸರಪಳಿಯಲ್ಲಿ ಅಪಾಯ : ಮೈಕ್ರೋಪ್ಲಾಸ್ಟಿಕ್‌ಗಳು ಮಣ್ಣಿನಿಂದ ಸಸ್ಯಗಳಿಗೆ, ಅಲ್ಲಿಂದ ಮಾನವನ ಆಹಾರಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಇದರಂದ ಆಹಾರ ಸುರಕ್ಷತೆಗೆ ಧಕ್ಕೆ, ಮಾನವ ಆರೋಗ್ಯದ ಮೇಲೆ ಅಪಾಯ, ವಿಷಕಾರಿ ರಾಸಾಯನಿಕಗಳ ಸಾಗಣೆಯಾಗುತ್ತದೆ.  ಈ ಕಣಗಳು ಆಹಾರ ಸರಪಳಿಯಲ್ಲಿ ಸೇರಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

 ಪರಿಸ್ಥಿತಿ ಎಷ್ಟು ಗಂಭೀರ? : ಭಾರತದ ವಿವಿಧ ಕೃಷಿ ಮಣ್ಣು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗುವುದು,  ಭೂಗರ್ಭ ಜಲದಲ್ಲಿಯೂ ಪತ್ತೆ ಹಾಗೂ  ಮಣ್ಣಿನ ಉತ್ಪಾದಕತೆ ಕುಸಿಯುವ ಸಾಧ್ಯತೆಗಳು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಮುಂದಿನ ದಿನಗಳಲ್ಲಿ ಕೃಷಿಯ ಸ್ಥಿರತೆಯೇ ಪ್ರಶ್ನಾರ್ಥಕವಾಗುವ ಪರಿಸ್ಥಿತಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ತುರ್ತು ಕ್ರಮಗಳ ಅಗತ್ಯ : ತಜ್ಞರು ಸೂಚಿಸಿರುವ ಪ್ರಮುಖ ಪರಿಹಾರಗಳು:

  • ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು
  • ಜೈವ ವಿಲೀನ (biodegradable) ಪರ್ಯಾಯಗಳಿಗೆ ಉತ್ತೇಜನ
  • ತ್ಯಾಜ್ಯ ನಿರ್ವಹಣೆಯನ್ನು ಸುಧಾರಣೆ
  • ಮೈಕ್ರೋಪ್ಲಾಸ್ಟಿಕ್ ಕುರಿತು ಹೆಚ್ಚಿನ ಸಂಶೋಧನೆ

ಕೃಷಿಯ ಭವಿಷ್ಯ ಉಳಿಸಬೇಕಾದರೆ ಈಗಲೇ ಎಚ್ಚರ : ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ನಿಧಾನವಾಗಿ ಆದರೆ ಅಪಾಯಕಾರಿಯಾಗಿ ಕೃಷಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಇದು ಕೇವಲ ಪರಿಸರ ಸಮಸ್ಯೆಯಲ್ಲ; ರೈತರ ಆದಾಯ, ಮಣ್ಣಿನ ಆರೋಗ್ಯ ಮತ್ತು ದೇಶದ ಆಹಾರ ಭದ್ರತೆಯ ಮೇಲೆಯೇ ಪರಿಣಾಮ ಬೀರುವ ದೊಡ್ಡ ಸಂಕಷ್ಟ.

ಇಂದೇ ಕ್ರಮ ಕೈಗೊಳ್ಳದಿದ್ದರೆ, ನಾಳೆ ಆರೋಗ್ಯಕರ ಮಣ್ಣು ಮತ್ತು ಸುರಕ್ಷಿತ ಆಹಾರ ದೊರೆಯುವುದು ದೊಡ್ಡ ಸವಾಲಾಗಬಹುದು ಎಂಬ ಎಚ್ಚರಿಕೆ ಇದೀಗ ಕೃಷಿ ಕ್ಷೇತ್ರದಿಂದ ಕೇಳಿಬರುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Microplastics are emerging as a major threat to Indian agriculture, entering soil through plastic use and poor waste management. They affect soil health, crop productivity, and food safety. Experts call for urgent action including reducing plastic use and promoting sustainable alternatives.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror