2021-22ರಿಂದ 2025-26 ರವೆಗೆ 15 ನೇ ಹಣಕಾಸು ಆಯೋಗದ ಸೈಕಲ್‌ನಲ್ಲಿ ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆ ಅಂಬ್ರೆಲಾ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಯನ್ನು ಸುಧಾರಿಸಲು ಬದ್ಧವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಈ ನಿರ್ಧಾರವು ಗಡಿ ನಿರ್ವಹಣೆ, ಪೊಲೀಸ್ ಮತ್ತು ಗಡಿಗಳನ್ನು ಕಾಪಾಡಲು ಗಡಿ ಮೂಲಸೌಕರ್ಯವನ್ನು ಬಲಪಡಿಸುತ್ತದೆ. ಮಾತ್ರವಲ್ಲ 2021-22 ರಿಂದ 2025-26 ರವರೆಗಿನ ಯೋಜೆಯ ವೆಚ್ಚವು 13,020 ಕೋಟಿ ರೂ ಆಗಬಹುದು ಎಂದು ಮೂಲಗಳು ತಿಳಿಸಿದೆ.
ಭಾರತ-ಪಾಕಿಸ್ತಾನವನ್ನು ಭದ್ರಪಡಿಸಲಯ ಗಡಿ ಬೇಲಿಗಳು ಗಡಿಯ ಫ್ಲಡ್‌ಲೈಟ್‌ಗಳು, ತಾಂತ್ರಿಕ ಪರಿಹಾರಗಳು, ಗಡಿ ರಸ್ತೆಗಳು ಮತ್ತು ಗಡಿ ಹೊರಠಾಣೆಗಳು ಮತ್ತು ಕಂಪೆನಿಯ ಕಾರ್ಯಾಚರಣಾ ನೆಲೆಗಳ ನಿರ್ಮಾಣದಂತಹ ಮೂಲಸೌಕರ್ಯಗಳ ರಚನೆಯಲ್ಲಿ ಬಿ.ಐ.ಎಮ್ ಯೋಜನೆಯು ಸಹಾಯ ಮಾಡುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

