ಹೈನುಗಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಸದ್ಯ ಪಶು ಆಹಾರ ಧಾರಣೆಯಲ್ಲಿ ಹೆಚ್ಚಳವಾಗಿದ್ದು, ಕರ್ನಾಟಕ ಹಾಲು ಮಹಾ ಮಂಡಳಿ ಅಕ್ಟೋಬರ್ 19 ರಂದು ಈ ಬಗ್ಗೆ ಆದೇಶ ಹೊರಡಿಸಿದೆ. 50 ಕೆಜಿ ನಂದಿನಿ ಗೋಲ್ಡ್ ಪಶು ಆಹಾರದ ಬೆಲೆಯನ್ನು 1,040 ರೂಪಾಯಿಗಳಿಂದ 1,165 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
Advertisement
ಹಾಲಿನ ಬೆಲೆ ಏರಿಕೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಹಾಲು ನೀಡಿದರೂ ಹೈನುಗಾರರಿಗೆ ಸೂಕ್ತವಾದ ಧಾರಣೆ ಲಭ್ಯವಾಗುತ್ತಿಲ್ಲ ಎಂಬ ಆರೋಪ ಇದೆ. ಭಾರತೀಯ ಕಿಸಾನ್ ಸಂಘವು ಹೈನುಗಾರರಿಗೆ ಉತ್ತಮ ಧಾರಣೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದೆ. ವಿವಿಧ ರಾಜ್ಯಗಳಲ್ಲಿ ಹಾಲಿಗೆ ಉತ್ತಮ ಧಾರಣೆ ಇದೆ. ಆದರೆ ರಾಜ್ಯದಲ್ಲಿ ಹೈನುಗಾರರು ಈ ಮೊದಲಿನಿಂದಲೂ ಮನವಿ ಮಾಡಿಕೊಂಡು ಬಂದಿದ್ದು, ಆದರೆ ಈ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರ ಮಧ್ಯೆ ಇದೀಗ ಪಶು ಆಹಾರದ ಬೆಲೆ ಹೆಚ್ಚಿಸಿರುವುದು ಹೈನುಗಾರರಿಗೆ ಶಾಕ್ ನೀಡಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement