ರೈತರಿಗೋಸ್ಕರ ಹಾಲಿನ ದರ ಪರಿಷ್ಕರಣೆ | ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ | ಡಿಸಿಎಂ ಡಿಕೆ ಶಿವಕುಮಾರ್

June 26, 2024
1:33 PM

ಹಾಲಿನ ದರ ಏರಿಕೆಯಿಂದ ರೈತರಿಗೂ ಲಾಭದ ಪಾಲು ಸಿಗಲಿದೆ, ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ದರ ಪರಿಷ್ಕರಣೆಯಲ್ಲಿ ರೈತರಿಗೂ ಪಾಲು ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

Advertisement
Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಲಾಭ ರೈತರಿಗೆ ಸಿಗಲಿದೆ, ಕೆಎಂಎಫ್ ಎಂದರೆ ರೈತರು, ಕೆಎಂಎಫ್​ನಲ್ಲಿ ರೈತರೇ ಇರುವುದು ರೈತರಿಗೋಸ್ಕರನೇ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಯಾರು ಎಷ್ಟೇ ವಿವಾದ ಮಾಡಲಿ. ಬೇಕಾದರೆ ರೈತರನ್ನೇ ಕೇಳಲಿ, ಅವರು ಪರಿಸ್ಥಿತಿ ಏನಿದೆ ಅಂತಾ ತಿಳಿಸುತ್ತಾರೆ. ಹಸುಗಳನ್ನು ಸಾಕಲಾಗದೆ ಇಂದು ರೈತರು ಮಾರಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

Advertisement

ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ. ಇದಕ್ಕೆ ವಿರೋಧ ಮಾಡುವ ಮೂಲಕ ಬಿಜೆಪಿಯವರ ರೈತ ವಿರೋಧಿ ಧೋರಣೆ ಅನಾವರಣಗೊಂಡಿದೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನಮ್ಮ ಬಳಿ ಎಷ್ಟಿದೆ ಎನ್ನುವುದನ್ನು ನೋಡಲಿ ಮೊದಲು ಹಾಗೆ ರೈತರನ್ನ ಉಳಿಸುವ ಚಿಂತನೆ ಮಾಡಲಿ ಎಂದು ಹೇಳಿದರು.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪರಿಸರವಾದಿ ಶಿವಾನಂದ ಕಳವೆಯವರ ಕಾಳಜಿ | ಅವರ ಫೇಸ್‌ಬುಕ್‌ನ ಒಂದು ಪೋಸ್ಟ್‌ನಿಂದಾಗಿ ತಪ್ಪಿತು 3500 ಮರಗಳ ಮಾರಣ ಹೋಮ..!
June 28, 2024
3:03 PM
by: The Rural Mirror ಸುದ್ದಿಜಾಲ
ಮೌಲ್ಯದಿಂದ ಮಾನ ಪಡೆದ ಮಲೆನಾಡಗಿಡ್ಡಗಳು | ಕರಾವಳಿ – ಮಲೆನಾಡಿಗರಿಗೆ ಅದರ ಮೌಲ್ಯ ಇನ್ನೂ ಅರ್ಥವಾಗಿಲ್ಲ…!
June 28, 2024
1:21 PM
by: ಮುರಲೀಕೃಷ್ಣ ಕೆ ಜಿ
ಅಡಿಕೆ ಜಗಿಯುವುದರಿಂದ ಆಯಾಸ ದೂರವಾಗುತ್ತದೆ, ಕರುಳಿನ ಚಟುವಟಿಕೆ ಹೆಚ್ಚಾಗುತ್ತದೆ | ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ದಾಖಲಾದ ಅಡಿಕೆಯ ಔಷಧೀಯ ಗುಣ |
June 28, 2024
1:19 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ… ಮಾನವ ತಿರುಗಾಟಕ್ಕೆ ಅಲ್ಲ
June 28, 2024
12:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror