ಹಾಲಿನ ದರ ಏರಿಕೆಯಿಂದ ರೈತರಿಗೂ ಲಾಭದ ಪಾಲು ಸಿಗಲಿದೆ, ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ದರ ಪರಿಷ್ಕರಣೆಯಲ್ಲಿ ರೈತರಿಗೂ ಪಾಲು ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಲಾಭ ರೈತರಿಗೆ ಸಿಗಲಿದೆ, ಕೆಎಂಎಫ್ ಎಂದರೆ ರೈತರು, ಕೆಎಂಎಫ್ನಲ್ಲಿ ರೈತರೇ ಇರುವುದು ರೈತರಿಗೋಸ್ಕರನೇ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಯಾರು ಎಷ್ಟೇ ವಿವಾದ ಮಾಡಲಿ. ಬೇಕಾದರೆ ರೈತರನ್ನೇ ಕೇಳಲಿ, ಅವರು ಪರಿಸ್ಥಿತಿ ಏನಿದೆ ಅಂತಾ ತಿಳಿಸುತ್ತಾರೆ. ಹಸುಗಳನ್ನು ಸಾಕಲಾಗದೆ ಇಂದು ರೈತರು ಮಾರಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.