#NandiniMilk | ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ | ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಕರ್ನಾಟಕದಲ್ಲೇ ಕಡಿಮೆಯಂತೆ…! |

August 1, 2023
11:02 AM
ಇಂದಿನಿಂದ ಕರ್ನಾಟಕದಲ್ಲಿ ಪ್ರತಿ ಲೀಟರ್​ ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಳವಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಸ್ಟ್​ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು.

ಗ್ರಾಹಕರ ಜೇಬಿಗೆ ಇಂದಿನಿಂದ ಮತ್ತೆ ಕತ್ತರಿ ಬೀಳಲಿದೆ. ಇಂದಿನಿಂದ ಕರ್ನಾಟಕದಲ್ಲಿ ಪ್ರತಿ ಲೀಟರ್​ ನಂದಿನಿ ಹಾಲಿನ #NandiniMilk ದರ 3 ರೂಪಾಯಿ ಹೆಚ್ಚಳವಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಸ್ಟ್​ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ #KMF, ಇಂದಿನಿಂದ ಪ್ರತಿ ಲೀಟರ್​ ನಂದಿನಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡಿದೆ.

Advertisement
Advertisement

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ ಎಂದು ಕೆಎಂಎಫ್ ಎಂಡಿ ಜಗದೀಶ್ ತಿಳಿಸಿದ್ದಾರೆ. 39 ರೂಪಾಯಿ ಇದ್ದ ನಂದಿನಿ ಹಾಲಿನ ದರ ಈಗ 42 ರೂ. ಆಗಿದೆ. ಆಂಧ್ರ ಪ್ರದೇಶದಲ್ಲಿ ಲೀಟರ್ ಹಾಲಿಗೆ 56 ರೂ., ಕೇರಳದಲ್ಲಿ 51 ರೂ. ಇದೆ. ಮಹಾರಾಷ್ಟ್ರದಲ್ಲಿ 54 ರೂ., ತಮಿಳುನಾಡಿನಲ್ಲಿ ಹಾಲಿಗೆ 44 ರೂ. ಇದೆ ಎಂದು ಮಾಹಿತಿ ನೀಡಿದರು. ದರ ಕಡಿಮೆ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ರೈತರ ಆದಾಯವನ್ನು ಗಮನದಲ್ಲಿಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಕೆಎಂಎಫ್ ಎಂಡಿ ಜಗದೀಶ್ ಮನವಿ ಮಾಡಿದರು.

Advertisement
Advertisement

ಯಾವ್ಯಾವ ಪಾಕೇಟ್​ ಹಾಲು ಎಷ್ಟಿದೆ?: ಟೋನ್ಡ್​​ ಹಾಲು ನೀಲಿ ಪಾಕೆಟ್‌ನ ದರ ಪ್ರತಿ ಲೀಟರ್​ ಹಿಂದೆ 39 ರೂಪಾಯಿ ಇತ್ತು. ಪರಿಷ್ಕೃತ ದರ 42 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೇ ಹೋಮೋಜಿನೈಸ್ಡ್ ಹಸುವಿನ ಹಾಲು ಹಿಂದೆ ಪ್ರತಿ ಲೀಟರ್‌ಗೆ 40 ರೂಪಾಯಿ ಇತ್ತು.. ಇದು ಇಂದಿನಿಂದ 43 ರೂಪಾಯಿ ಆಗಲಿದೆ. ಅದೇ ರೀತಿ ಶುಭಂ ಅಂದ್ರೆ ಕೇಸರಿ ಪಾಕೆಟ್ ಅಥವಾ ಸ್ಪೆಷಲ್ ಹಾಲಿನ ದರ ಹಿಂದೆ ಪ್ರತಿ ಲೀಟರ್‌ಗೆ 45 ರೂಪಾಯಿ ಇದ್ದು, ಪರಿಷ್ಕೃತ ದರ 48 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಮೊಸರು ಪ್ರತಿ ಲೀಟರ್‌ಗೆ ಹಿಂದೆ 47 ರೂಪಾಯಿ ಇತ್ತು. ಇಂದಿನಿಂದ ಪ್ರತಿ ಲೀಟರ್‌ ಮೊಸರಿನ ಬೆಲೆ 50 ರೂಪಾಯಿಗೆ ಹೆಚ್ಚಳವಾಗಿದೆ. ಉಳಿದಂತೆ 200 ಮಿಲಿ ಪಾಕೆಟ್‌ನ ನಂದಿನಿ ಮಜ್ಜಿಗೆ ಬೆಲೆ ಹಿಂದೆ 7 ರೂಪಾಯಿ ಇತ್ತು.. ಪರಿಷ್ಕೃತ ದರ 9 ರೂಪಾಯಿಗೆ ಹೆಚ್ಚಳವಾಗಿದೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಇದು ಡಿಸೆಂಬರ್ ತಿಂಗಳು ಅಷ್ಟೇ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪ, ಉರಿ ಬಿಸಿಲು ಹೇಗಿರಬಹುದು?
December 8, 2023
3:39 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಶ್ರೀರಾಮನ ಪೌರೋಹಿತ್ಯ ಸೇವೆಗೆ ಆಯ್ಕೆಯಾದ ಸಕಲ ವೇದ ಪಾರಂಗತ “ಮೋಹಿತ್ ಪಾಂಡೆ” : ಯಾರು ಈತ..? ಎಲ್ಲಿಯ ಹುಡುಗ..?
December 8, 2023
3:18 PM
by: The Rural Mirror ಸುದ್ದಿಜಾಲ
ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ… : ಹಾಗಾದರೆ ಸಕ್ಕರೆ ಕಾಯಿಲೆ ಬರಲು ಕಾರಣವೇನು..?
December 8, 2023
3:01 PM
by: The Rural Mirror ಸುದ್ದಿಜಾಲ
ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ | ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ |
December 8, 2023
2:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror