ರಾಜ್ಯಾದ್ಯಂತ ಬೇಸಿಗೆ(Summer) ಕಾಲದ ಎಫೆಕ್ಟ್ ಎಲ್ಲದಕ್ಕಿಂತ ಹೆಚ್ಚಾಗಿ ರೈತ(Farmer), ಕೃಷಿ(Agriculture), ಜಾನುವಾರು(Cattle), ಪ್ರಾಣಿ ಪಕ್ಷಿಗಳ(Animal-birds) ಮೇಲೆ ನೇರ ಪರಿಣಾಮ ಬೀರುತ್ತದೆ. ಕುಡಿಯಲು(Water crisis) ನೀರಿಲ್ಲ. ಕೃಷಿ, ಜನ-ಜಾನುವಾರುಗಳಿಗೆ ನೀರಿಗೆ ಹಾಹಾಕಾರ ಬಂದಿದೆ. ಹೀಗಿರುವಾಗ ಹೆಚ್ಚಿನ ಪಶುಸಂಗೋಪನೆ(animal husbandry) ಮಾಡುವ ರೈತರಿಗೆ ತೊಂದರೆ ತಪ್ಪಿದ್ದಲ್ಲ. ಮೇವು(Fodder), ನೀರಿಗೆ ಕೊರತೆಯಾದಾಗ ಸಹಜವಾಗಿ ಜಾನುವಾರುಗಳನ್ನು ಮಾರುವುದೊಂದೇ ದಾರಿ ಕಂಡುಕೊಳ್ಳುತ್ತಾರೆ. ಆದರೆ ರಾಜ್ಯದಲ್ಲಿ ಹಾಲು ಉತ್ಪಾದನೆ(Milk Production) ಹಾಗೂ ಮಾರಾಟದಲ್ಲಿ ಕೆಎಂಎಫ್ (Karnataka Milk Federation) ಹೊಸ ಮೈಲುಗಲ್ಲು ಸಾಧಿಸಿದೆ. ಬೇಸಿಗೆಯಲ್ಲೂ ಹಾಲು ಉತ್ಪಾದನೆಯಲ್ಲಿ ಕೆಎಂಎಫ್‌ಗೆ ನಂಬರ್ ಒನ್ ಸ್ಥಾನ ಸಿಕ್ಕಿದೆ. ರೈತರು ಬರಗಾಲ(Drought) ಬಂದರು ತಮ್ಮ ಕಾಯಕದಿಂದ ಹಿಂದೆ ಸರಿದಿಲ್ಲ.
ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಶೇಕಡಾ 12 ರಷ್ಟು ಹೆಚ್ಚಳವಾಗಿದೆ. ಹಾಲು ಉತ್ಪಾದನೆ ಮಾತ್ರವಲ್ಲದೆ ಮಾರಾಟದಲ್ಲೂ (KMF Milk Sales) 41.79 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ. 2023 ಮಾರ್ಚ್ ನಲ್ಲಿ ನಿತ್ಯ 72,07 ಲಕ್ಷ ಲೀಟರ್ ಹಾಗೂ ಉತ್ಪಾದನೆ ಆಗುತ್ತಿತ್ತು, ಆದರೆ 2024 ಮಾರ್ಚ್ 15 ತಾರೀಖು ರಂದು ರಾಜ್ಯದಲ್ಲಿ 80.80 ಲಕ್ಷ ಲೀಟರ್ ಉತ್ಪಾದನೆಯಾಗದೆ. ಬೆಂಗಳೂರಿನಲ್ಲಿ ನಿತ್ಯ 13.69 ಲಕ್ಷ ಲೀಟರ್ ಹಾಲು, ಹಾಸನದಲ್ಲಿ ನಿತ್ಯ 11.93 ಲಕ್ಷ ಲೀಟರ್, ಮಂಡ್ಯ 9.18 ಲಕ್ಷ ಲೀಟರ್, ಕೋಲಾರದಲ್ಲಿ ನಿತ್ಯ 9.77 ಲಕ್ಷ ಲೀಟರ್, ತುಮಕೂರಿನಲ್ಲಿ 7.71 ಲಕ್ಷ ಲೀಟರ್, ಮೈಸೂರಿನಲ್ಲಿ 7.71 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
ರಾಜ್ಯದಲ್ಲಿ ಬೇಸಿಗೆ ಪರಿಣಾಮ ಹಸಿರು ಮೇವು ಹಾಗೂ ನೀರಿಗೆ ಹಲವು ಭಾಗಗಳಲ್ಲಿ ಹಾಹಾಕಾರ ಶುರುವಾಗಿದ್ದು, ಇದರ ನಡುವೆ ಹಾಲು ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪರಿಣಾಮ ರಾಜ್ಯದಲ್ಲಿ ಹರಿಯಿತು ಕೆಎಂಎಫ್ ಹಾಲಿನ ಹೊಳೆ ಹರಿದಿದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಕೆಎಂಎಫ್ ಹಾಲಿನ ಉತ್ಪಾದನೆ ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಇದರ ಪರಿಣಾಮವಾಗಿ ತೀವ್ರ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಬೇಸಿಗೆಯಲ್ಲಿ ಈ ಬಾರಿ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿಯನ್ನು ಕೆಎಂಎಫ್ ಇಟ್ಟುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಕೆಎಂಎಫ್ ಎಮ್ಮೆ ಹಾಲು ಮಾರಾಟಕ್ಕೆ ಬ್ರೇಕ್ : ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ ರಾಜ್ಯಾಧ್ಯಂತ ಎಮ್ಮೆ ಹಾಲು ಮಾರಾಟಕ್ಕೆ ಚಾಲನೆ ನೀಡಿತ್ತು. ಆದರೆ ಇದಾದ ಮೂರೇ ತಿಂಗಳಿಗೆ ಎಮ್ಮೆ ಹಾಲು ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ ಚಿಂತನೆ ನಡೆಸಿದೆಯಂತೆ. ಹೌದು, ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ ಕೆಎಂಎಫ್ ಬಿಡುಗಡೆ ಮಾಡಿತ್ತು, ಆದರೆ ಸದ್ಯ ಎಮ್ಮೆ ಹಾಲು ಮಾರಾಟ ಮತ್ತೆ ಸ್ಥಗಿತ ಮಾಡಲು ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆಯಂತೆ.
ಎಮ್ಮೆ ಹಾಲಿಗೆ ಗ್ರಾಹಕರಿಂದ ಬೇಡಿಕೆ ಕುಸಿತ ಆಗಿರುವುದು ಕೆಎಂಎಫ್ ಚಿಂತನೆಗೆ ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ನಿತ್ಯ 2000 ಲೀಟರ್ ಮಾತ್ರ ಎಮ್ಮೆ ಹಾಲು ಮಾರಾಟ ಆಗುತ್ತಿದೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಭಾಗಕ್ಕೆ ಎಮ್ಮೆ ಹಾಲು ಪೂರೈಕೆಯಾಗುತ್ತಿತ್ತು. ಕೆಎಂಎಫ್ ಪ್ರತಿ ಲೀಟರ್ ಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿತ್ತು. ಆದರೆ ಇನ್ಮೇಲೆ ಎಮ್ಮೆ ಹಾಲು ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದ್ದರು.
– ಅಂತರ್ಜಾಲ ಮಾಹಿತಿ
KMF (Karnataka Milk Federation) has achieved a new milestone in milk production and sales in the state. KMF has got the number one position in milk production even in summer. Farmers did not back down from their kayaks when the drought came.