ಉಪ್ಪುಕಳದಲ್ಲಿ ಕೊಚ್ಚಿ ಹೋದ ಕಾಲುಸಂಕ | ಸ್ಥಳಕ್ಕೆ ಸಚಿವ ಅಂಗಾರ ಭೇಟಿ | ಕ್ಷೇತ್ರದಲ್ಲಿ 124 ಸೇತುವೆ ಆಗಿದೆ | ಬಹಿಷ್ಕಾರದಿಂದ ಅಭಿವೃದ್ಧಿ ಆಗಲ್ಲ | ಮಾಧ್ಯಮದವರು ಆದದ್ದೂ ಬರೆಯಲಿ |

July 14, 2022
8:02 PM

ಇಡೀ ಕ್ಷೇತ್ರದಲ್ಲಿ ಇದುವರೆಗೆ 124 ಸೇತುವೆ ಈಗಾಗಲೇ ನಿರ್ಮಾಣ ಮಾಡಲಾಗಿದೆ. ಮುಂದೆಯೂ ಅಭಿವೃದ್ಧಿ ಆಗುತ್ತದೆ. ಜನರು ಗೊಂದಲಕ್ಕೆ ಒಳಗಾಗುವುದು  ಬೇಡ. ಮತ ಬಹಿಷ್ಕಾರ ಮಾಡುವುದರಿಂದ ಅಭಿವೃದ್ಧಿ ಆಗುವುದಿಲ್ಲ. ಉಪ್ಪುಕಳದಲ್ಲಿ ಕೂಡಾ ಸೇತುವೆ ನಿರ್ಮಾಣವಾಗುತ್ತದೆ. ಮಾಧ್ಯಮದವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ, ಆದ ಕೆಲಸ ಹೇಳುವುದಿಲ್ಲ ಹೀಗೆಂದು ಹೇಳಿದವರು ಸಚಿವ ಎಸ್‌ ಅಂಗಾರ.

Advertisement
Advertisement
Advertisement

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಈಚೆಗೆ ಕೊಚ್ಚಿ ಹೋದ ಕಾಲು ಸಂಕದ ಪ್ರದೇಶಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದರು. ಜನರಿಗೆ ಸದಾ ಉತ್ತಮವಾದ ಸೇವೆ ನೀಡುವ ಕೆಲಸ ಈವರೆಗೂ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲೂ ಜನ ಸರಾಗವಾಗಿ ಹೋಗಿ ಬರುವಂತೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಡೆಗೆ ಗಮನಹರಿಸುತ್ತಲೇ ಇದ್ದೇವೆ. ಏನೇ ಟೀಕೆಗಳು ಬಂದರೂ ಗೊಂದಕ ಬೇಡ. ಅಪಪ್ರಚಾರ ಮಾಡುವವರು, ಟೀಕೆ ಮಾಡುವವರು ಮಾಡಲಿ. ಕ್ಷೇತ್ರದ ಜನರಿಗೆ ಕೆಲಸ ಮಾಡುವುದೇ ನನ್ನ ಉದ್ದೇಶ ಎಂದು ಅಂಗಾರ ಹೇಳಿದರು.

Advertisement

ಮಾಧ್ಯಮದವರು ಹೇಳುತ್ತಾರೆ, ಆದರೆ ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ ಆದ ಕೆಲಸ ಹೇಳುವುದಿಲ್ಲ.  ಅದೇ ವಾಟ್ಸಪ್‌ ಲಿ ಬರೆಯುವುದಿಲ್ಲ, ಹಾಕುವುದಿಲ್ಲ. ಬಾಳುಗೋಡಿನಲ್ಲಿ 3 ಸೇತುವೆ ಆಗಿದೆ, ಅದನ್ನು ಏಕೆ ಹೇಳುವುದಿಲ್ಲ? ಎಂದು ಪ್ರಶ್ನೆ ಮಾಡಿದ ಅಂಗಾರ ಅವರು  ಅದನ್ನೂ ಹಾಕಿ. ಆಗ ನಮಗೂ ಖುಷಿಯಾಗುತ್ತದೆ,ಇನ್ನೂ ಕೆಲಸ ಮಾಡಬೇಕು ಎಂದು ಆಗುತ್ತದೆ. ರಾಜಕೀಯವಾಗಿ ಮಾತನಾಡಲು ಹೋದರೆ, ಅದೇ ರಾಜಕೀಯವೇ ಆಗುತ್ತದೆ ಎಂದರು.

ಮತದಾನ ಬಹಿಷ್ಕಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಈ ಹಿಂದೆ ಪೆರುವಾಜೆ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಆದರೆ ಅಲ್ಲಿ ಒಬ್ಬ ಕಾರ್ಯಕರ್ತ ಮತ ಹಾಕಿದರು. ನಾರಾಯಣ ಎಂಬವರು ಮಾತ್ರಾ ಮತ ಹಾಕಿದರು. ಹೀಗಾಗಿ ಅಲ್ಲಿ ಅಭಿವೃದ್ಧಿ ಆಗಿದೆ.  ಪೆರುವಾಜೆಯು ಮತ ಬಹಿಷ್ಕಾರದಿಂದ ಅಭಿವೃದ್ಧಿ ಆಗಿಲ್ಲ, ಆಗುವುದೂ ಇಲ್ಲ. ಅವರ ಒಬ್ಬರ ಮತದಿಂದ ಅಭಿವೃದ್ಧಿ ಆಗಿದೆ ಎಂದರು. 

Advertisement

ಕ್ಷೇತ್ರದ 76  ಗ್ರಾಮಗಳಲ್ಲಿ ನದಿ ಇಲ್ಲದ ಗ್ರಾಮ ಇಲ್ಲ. ಜನಗಳಿಗೆ ಸರಾಗವಾಗಿ ಹೋಗಬೇಕಾದರೆ ಸೇತುವೆಯೇ ಪ್ರಮುಖ ಕೆಲಸ. ಅದರ ನಡುವೆ ಮುಳುಗು ಸೇತುವೆ ಇದೆ. ಎಲ್ಲಾ ಮುಳುಗು ಸೇತುವೆ ಪಕ್ಕಾ ಸೇತುವೆ ಆಗಿದೆ, ಆಗುತ್ತಲಿದೆ. ಜನ ಸರಾಗವಾಗಿ ಹೋಗಲು ವ್ಯವಸ್ಥೆ ಆಗುತ್ತದೆ.ಅಭಿವೃದ್ಧಿ ಮಾಡಲಾಗುತ್ತದೆ. ಇದುವರೆಗೆ 124 ಸೇತುವೆ ಆಗಿದೆ. ಹೊಸಮಠ, ಶಾಂತಿಮೊಗರು, ಕುಮಾರಧಾರಾದಂತಹ ದೊಡ್ಡ ಸೇತುವೆ ಆಗಿದೆ. ಎಡಮಂಗಲದ ಪಾಲೋಳಿಯಲ್ಲೂ ಸೇತುವೆಯಾಗುತ್ತಿದೆ.  ಈ ಹಿಂದೆ ಕಾಂಗ್ರೆಸ್‌ ಎಲ್ಲೆಲ್ಲಾ ಸೇತುವೆ ಮಾಡಿದೆ, ರಸ್ತೆ ಮಾಡಿದೆ ಎನ್ನುವುದನ್ನು ನೋಡಬೇಕು. ಈಗ ಮತ್ತೆ ಗೊಂದಲ ಮಾಡಿಸುತ್ತಿದೆ. ಜನ ಗೊಂದಲ ಮಾಡಬೇಡಿ, ಕೆಲಸ ನಿರಂತರ ಮಾಡುತ್ತೇವೆ ಎಂದು ಅಂಗಾರ ಹೇಳಿದರು.  ಪ್ರಾಕೃತಿಕ ವಿಕೋಪ, ಕೋವಿಡ್‌ ಸಮಯದಲ್ಲೂ ಸರ್ಕಾರ ಜನ ಹಿತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror