ದೀಪಾವಳಿಗೆ ಲೋಡ್ ಶೆಡ್ಡಿಂಗ್ ಇಲ್ಲ | ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ | ಸಚಿವ ಸುನಿಲ್‌ ಕುಮಾರ್

October 23, 2022
12:03 PM

‌ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಸದ್ಯ ವಿದ್ಯುತ್‌ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ. ಕಲ್ಲಿದ್ದಲು ದಾಸ್ತಾನು ಕೂಡಾ ಉತ್ತಮವಾಗಿದೆ. ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಲೋಡ್‌ ಶೆಡ್ಡಿಂಗ್‌ ಆಗುವುದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತಗೊಳಿಸಲಾಗುವುದು. ಅನೇಕ ವರ್ಷಗಳಿಂದ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ ವಿದ್ಯುತ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಈಗ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಕಲ್ಲಿದ್ದಲು ಮತ್ತು ತೈಲಬೆಲೆ ಇಳಿಕೆಯಾದಲ್ಲಿ ವಿದ್ಯುತ್ ಬೆಲೆ ಕೂಡ ಇಳಿಕೆ ಮಾಡಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್ ತಿಳಿಸಿದ್ದಾರೆ.‌  ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಬದಲು ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಮುಂದಿಟ್ಟಿದ್ದೇನೆ. ಗ್ರಾಹಕರಿಗೆ ಹೊರೆಯಾಗುವುದರಿಂದ ವರ್ಷಕ್ಕೊಮ್ಮೆ ದರ ಹೆಚ್ಚಿಸುವುದು ಸೂಕ್ತ ಎಂದು ಹೇಳಲಾಗಿದೆ ಎಂದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ
October 2, 2026
12:46 PM
by: ಸಾಯಿಶೇಖರ್ ಕರಿಕಳ
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ
October 2, 2026
7:41 AM
by: ದ ರೂರಲ್ ಮಿರರ್.ಕಾಂ
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ
October 2, 2026
7:28 AM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌
October 2, 2026
7:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror