ಪುತ್ತೂರು ಪೇಟೆಯಲ್ಲಿ ರಸ್ತೆ ಬದಿ ಸಚಿವರ ಕಾರು ಪಾರ್ಕಿಂಗ್‌ | ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ಸಾರ್ವಜನಿಕರು….! |

October 21, 2021
11:31 PM

ಪುತ್ತೂರು ನಗರದ ಮಳಿಗೆಯೊಂದರ ಬಳಿ ಜಿಲ್ಲೆಯ ಸಚಿವರೊಬ್ಬರ ಕಾರನ್ನು ಪಾರ್ಕ್ ಮಾಡಿದ ಫೋಟೋ ಇದೀಗ‌  ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಸಚಿವರ ಕಾರು ಈ ರೀತಿ ಪಾರ್ಕ್‌ ಮಾಡಿರುವುದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಎಲ್ಲರಿಗೂ ಒಂದೇ ನಿಯಮವಲ್ಲವೇ ಇಲ್ಲಿ ? ಎಂಬುದು ಪ್ರಶ್ನೆಯ ಸಾರಾಂಶ.

ಪುತ್ತೂರು ನಗರದಲ್ಲಿ ವಾಹನಗಳಿಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ವಾಹನಗಳ ಓಡಾಟ ಹೆಚ್ಚಾದಂತೆ ಪುತ್ತೂರು ಪೇಟೆಯ ರಸ್ತೆಗಳು ಆಗಾಗ ಬ್ಲಾಕ್‌ ಆಗುತ್ತವೆ. ಹೀಗಾದಾಗ ಇಡೀ ಪೇಟೆಯಲ್ಲಿ ಟ್ರಾಫಿಕ್‌ ಜಾಂ ಆಗುತ್ತದೆ.

ಆದರೆ ಸಚಿವರೊಬ್ಬರ ಕಾರನ್ನು ಗುರುವಾರ ಸಂಜೆ  ನಗರದ ಮಳಿಗೆಯೊಂದರ ಎದುರಿನಲ್ಲಿ ಪಾರ್ಕ್‌ ಮಾಡಲಾಗಿತ್ತು. ಇದರಿಂದ ಕೆಲಕಾಲ ಟ್ರಾಫಿಕ್‌ ಸಮಸ್ಯೆಯಾಯಿತು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ, ಇದೇ ವೇಳೆ, ಸಾರ್ವಜನಿಕರಿಗೆ ಒಂದು ಕಾನೂನು- ಸಚಿವರಿಗೆ ಇನ್ನೊಂದು ಕಾನೂನೇ ಎಂದೂ ಪ್ರಶ್ನೆ ಮಾಡಿದ್ದಾರೆ.  ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ಹೀಗೆ ವಾಹನವನ್ನು ಪಾರ್ಕ್‌ ಮಾಡಿಸಿದರೆ ಹೇಗೆ ಎಂಬುದೂ ಪ್ರಶ್ನೆಯಾಗಿದೆ.

ಇಂತಹ ಸಂದರ್ಭಗಳಲ್ಲಿ ಕಾರಿನ ಚಾಲಕನಲ್ಲಿ ಕೆಲಸಕ್ಕಾಗಿ ಮಳಿಗೆಗಳಿಗೆ ಬಿಟ್ಟು  ವಾಹನವನ್ನು ಬೇರೆಡೆ ಪಾರ್ಕ್‌ ಮಾಡಿಸಿ ಕೆಲಸದ ನಂತರ ವಾಹನವನ್ನು ಮತ್ತೆ ಕರೆಯಿಸುವ ವ್ಯವಸ್ಥೆಯನ್ನು ಸಾಮಾನ್ಯ ಜನರೂ ಮಾಡುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ
ಮೀನು ಪ್ರಿಯರೇ ಗಮನಿಸಿ, ಎಲ್ಲಾ ಮೀನುಗಳು ಉತ್ತಮವಲ್ಲ…!
October 28, 2025
5:09 PM
by: ರೂರಲ್‌ ಮಿರರ್ ಸುದ್ದಿಜಾಲ
ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!
August 2, 2025
10:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror