ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ್ದು, ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಬಿ ಖಾತೆಗೆ ಎ ಖಾತಾ ಮಾನ್ಯತೆ ನೀಡಲು ಗುರುವಾರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯು ಅನಧಿಕೃತ ಬಡಾವಣೆಗಳಿಗೆ A- ಖಾತಾ ಪಡೆಯಲು ಅವಕಾಶ, ಸಚಿವ ಸಂಪುಟ ಮಹತ್ವದ ನಿರ್ಧಾರ ರಾಜ್ಯ ನಗರಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸುವುದು ಹಾಗೂ ಮಾರಾಟ ಮಾಡುವ ಅನಿಯಂತ್ರಿತ ಪ್ರಕ್ರಿಯೆಯನು ತಡೆಯವ ಉದ್ದೇಶದಿಂದ ರಾಜ್ಯ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತವಾಗಿ ರಚಿಸಿರುವ ಬಡವಣೆಗಳು, ಬಿ-ಖಾತಾ ನಿವೇಶನಗಳು, ಕಟ್ಟಡಗಳು ಅಥವಾ ಅಪಾರ್ಟ್ ಮೆಂಟ್ ಗಳು ಇವೆ. ಇವುಗಳಿಗೆ ಸರ್ಕಾರ ಷರತ್ತುಬದ್ದವಾಗಿ ಎ ಖಾತಾ ನೋಂದಣಿ ಮಾಡಿ ಅಧಿಕೃತ ದಾಖಲೆಯನ್ನು ನೀಡಲು ತೀರ್ಮಾನಿಸಿದೆ.
ಸಂಬಂಧೀತ ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಗಳು ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆದವರು, ನಿಗದಿತ ನಿಬಂಧನೆಗಳನ್ನು ಪೂರೈಸಿದ ನಂತರ ಮಾತ್ರ ಎ-ಖಾತಾ ಪ್ರಮಾಣ ಪತ್ರ ನೀಡಲಾಗುತ್ತದೆ.

