ಕಾಸರಗೋಡು ಜಿಲ್ಲೆಯ ಕುಂಬ್ದಾಜೆ ಪಂಚಾಯತ್ 13ನೇ ವಾರ್ಡ್ ವ್ಯಾಪ್ತಿಯ ಕಜೆಮಲೆ ನಿವಾಸಿ ಉದಯ ಕುಮಾರ್ ಹಾಗೂ ಸವಿತಾ ದಂಪತಿಗಳ ಪುತ್ರಿ ನಾರಂಪಾಡಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಸಾನ್ವಿ (7) ಅಪರೂಪವಾಗಿ ಕಂಡುಬರುವ ತಲಸ್ಸೇಮಿಯಾ ಮೇಜರ್ ಎಂಬ ಕಾಯಿಲೆ ತಗಲಿದ್ದು, ಚಿಕಿತ್ಸೆಗಾಗಿ ಬಡ ಕುಟುಂಬ ದಾನಿಗಳಿಂದ ನೆರವನ್ನು ಕೇಳಿಕೊಂಡಿದೆ.
ಈಗಾಗಲೇ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಬಾಲಕಿಯ ಚಿಕಿತ್ಸೆಗಾಗಿ ಈ ಬಡ ಕುಟುಂಬ ಅಪಾರ ಮೊತ್ತ ವ್ಯಯಿಸಿದ್ದು, ಮುಂದೆ ಅಸ್ಥಿಮಜ್ಜೆ ಕಸಿ ಮಾಡುವ ಶಸ್ತ್ರಕ್ರಿಯೆ ನಡೆಯಬೇಕಿದ್ದು, ಅಂದಾಜು 40 ಲಕ್ಷ ಮೊತ್ತ ಅವಶ್ಯಕವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಅಸಾಧ್ಯವಾದ ಈ ಬಡ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಕುಂಬ್ದಾಜೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಧ್ಯಕ್ಷತೆಯಲ್ಲಿ ಊರ ಪರವೂರ ಬಂಧುಗಳ ಸಹಕಾರದೊಂದಿಗೆ ಸಾನ್ವಿ ಚಿಕಿತ್ಸಾ ಸಹಾಯ ಸಮಿತಿಯನ್ನು ರೂಪಿಸಿದ್ದು, ಸಮಿತಿಯ ಖಾತೆಯ ಮುಖಾಂತರ ದಾನಿಗಳಿಂದ ಚಿಕಿತ್ಸಾ ನೆರವನ್ನು ಸ್ವೀಕರಿಸಲಾಗುತ್ತಿದೆ.
ಇದರೊಂದಿಗೆ ಸಮಿತಿಯ ಸದಸ್ಯರು ಗುಂಪುಗಳಾಗಿ ತೆರಳಿ, ವಿವಿಧ ಸ್ವ ಸಹಾಯ ಸಂಘ, ಕ್ಲಬ್, ವಿದ್ಯಾ ಸಂಸ್ಥೆ, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳಿಂದಲೂ ಆರ್ಥಿಕ ನೆರವನ್ನು ಸ್ವೀಕರಿಸುತ್ತಿದ್ದಾರೆ. ಬೆಳಿಂಜ – ಬದಿಯಡ್ಕ – ಕಾಸರಗೋಡು ಸಂಚರಿಸುವ ಬಿಲಾಲ್, ಮಲ್ಲ – ಕಾಸರಗೋಡು – ಪೈಕ – ಮುಳ್ಳೇರಿಯಾ – ಬದಿಯಡ್ಕ – ಪೆರ್ಲ ರಸ್ತೆ ಮೂಲಕ ಸಾಗುವ ದುರ್ಗಾ ಗಣೇಶ್, ಕಿನ್ನಿಂಗಾರು- ಮುಳ್ಳೇರಿಯಾ – ಕಾಸರಗೋಡು ಸಂಚರಿಸುವ ರಶ್ಮಿ ಎಂಬ ಖಾಸಗಿ ಬಸ್ ಕಾರುಣ್ಯ ಯಾತ್ರೆ ನಡೆಸಿ, ಒಂದು ದಿನದ ಸಂಗ್ರಹವನ್ನು ಬಾಲಕಿಯ ಚಿಕಿತ್ಸೆಗಾಗಿ ನೀಡಿದ್ದು, ಕಾಸರಗೋಡು- ಮಧೂರ್- ನೀರ್ಚಾಲ್- ಬದಿಯಡ್ಕ – ಪೆರ್ಲ ಸಂಚರಿಸುವ ಸಂಘಂ ಎಂಬ ಖಾಸಗಿ ಬಸ್ ಜು. 19 ರಂದು ಕಾರುಣ್ಯ ಯಾತ್ರೆ ನಡೆಸಿ ಬಾಲಕಿಯ ಚಿಕಿತ್ಸೆಗಾಗಿ ನೆರವಾಗಲಿದೆ.
ಇದರೊಂದಿಗೆ ಪೆರ್ಲ ರಿಕ್ಷಾ ಚಾಲಕರು ಬುಧವಾರ ಕಾರುಣ್ಯ ನಡೆಸಿ ಒಂದು ದಿನದ ಸಂಗ್ರಹವನ್ನು ಚಿಕಿತ್ಸಾ ನಿಧಿಗೆ ಸಮರ್ಪಿಸಿದ್ದು, ಶಿವಾಜಿ ಆಟೋ ಟ್ಯಾಕ್ಸಿ ಸ್ಟ್ಯಾಂಡ್ ಮುಳ್ಳೇರಿಯಾ ಚಾಲಕರು ಮುನ್ನಡೆಸುವ ಕಾರುಣ್ಯ ಯಾತ್ರಾ ಜು.16 ಶನಿವಾರ ನಡೆಯಲಿದೆ.
ಚಿಕಿತ್ಸೆಗಾಗಿ ಮತ್ತಷ್ಟು ಮೊತ್ತದ ಅವಶ್ಯಕತೆಯಿದ್ದು ದಾನಿಗಳು ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿ ಬಾಲಕಿಯ ಮುಂದಿನ ಚಿಕಿತ್ಸೆಗೆ ಅನುವು ಮಾಡಿಕೊಡಬೇಕಾಗಿ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸಂಪರ್ಕ ಹಾಗೂ ಖಾತೆ ಸಂಖ್ಯೆ :
ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಂಭಾವ್ಯ ನೆರೆ ಹಾಗೂ ಮುಳುಗಡೆ ಪ್ರದೇಶಗಳಲ್ಲಿ…
ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳೆದ ಎರಡು…
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಮೇ 23 ಅಥವಾ 24ರಂದು ಗುಜರಾತ್ ಕರಾವಳಿ…
ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…