ಪಶ್ಚಿಮಘಟ್ಟ(western Ghat) ಸಂರಕ್ಷಣೆಗೆ(Save) ಸಂಬಂಧಿಸಿದಂತೆ ಗಾಡ್ಗೀಳ್ ವರದಿ(Gadgil Report) ಜಾರಿ ಮಾಡಿದ್ದೆವು. ಆದರೆ ಅದನ್ನು ಸರಿಯಾಗಿ ಅಧ್ಯಯನ(study) ಮಾಡದೇ ತಪ್ಪು ಅಭಿಪ್ರಾಯಗಳನ್ನು ಜನರಲ್ಲಿ ಭಿತ್ತಿದ್ದರಿಂದ ವರಿ ಜಾರಿಗೊಳಿಸುವುದು ಹಿನ್ನಡೆಯಾಗಿದೆ. ಕಾಲ ಮಿಂಚಿಲ್ಲ. ಇನ್ನು ಸಮಯ ಇದೆ. ಈಗಲೂ ಮನಸು ಮಾಡಿದರೆ ಈ ವರದಿಯನ್ನು ಜಾರಿಮಾಡಬಹದು. ಈಗ ಜಾರಿ ಮಾಡಿದರು ಪಶ್ಚಿಮಘಟ್ಟದ ಪರಿಸ(Environment)ರ ಮತ್ತು ಜನಜೀವನಕ್ಕೆ ರಕ್ಷಣೆ ಸಿಗಲಿದೆ ಎಂದು ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆ ‘ಗಾಡೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟು ಬಲಿ ಬೇಕು?’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಏರ್ಅಪಡಿಸಿದ್ದರು. ಅಲ್ಲಿ ಮಾತನಾಡಿದ ಅವರು ಪಶ್ಚಿಮಘಟ್ಟದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕೆಂದು ವರದಿಯಲ್ಲಿ ಹೇಳಿಲ್ಲ. ನಾವು ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳನ್ನು ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಎಂದು 3 ವಲಯಗಳಾನ್ನಾಗಿ ಗುರುತಿಸಿದ್ದೆವು. ಸಾಮಾನ್ಯ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುವ ಬಗ್ಗೆ ವರದಿಯಲ್ಲಿ ನಿರ್ಬಂಧವನ್ನು ಹೇಳಿರಲಿಲ್ಲ. ಕೇವಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದಲ್ಲಿ ಮಾತ್ರ ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಮಾಹಿತಿ ನೀಡಲಾಗಿತ್ತು. ಆದರೆ, ಆ ವರದಿಯನ್ನು ಸರಿಯಾಗಿ ಓದದೇ ಕೇವಲ ಊಹಾಪೋಹ ಮತ್ತು ತಪ್ಪು ವರದಿಗಳನ್ನು ಹರಡಿ ಅದನ್ನು ಮೂಲೆಗೆ ತಳ್ಳಲಾಯಿತು. ಜನರಲ್ಲಿ ಬೇಡದ ವಿಚಾರಗಳನ್ನು ತುಂಬಿ ಭಯ ಹುಟ್ಟಿಸಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಕೈಬಿಡಿ: ಸಂವಾದದಲ್ಲಿ ಪರಿಸರ ವಿಜ್ಞಾನಿ ಟಿ ವಿ ರಾಮಚಂದ್ರ ಅವರು ಮಾತನಾಡಿ, ಬೆಂಗಳೂರು ನಗರಕ್ಕೆ ನೀರು ತರಲು ಐದು ಸಾವಿರ ಹೆಕ್ಟೇರ್ ಕಾಡು ನಾಶ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟುವುದು ಅನಾಹುತಕಾರಿ. ಇದು 100 ಟಿಎಂಸಿ ನೀರು ಇಂಗಿಸುವ ಕಾಡು ಮುಳುಗಿಸಿ 65 ಟಿಎಂಸಿ ನೀರು ತರುವ ಮೂರ್ಖತನ ಎಂದು ಹೇಳಿದರು. ಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕಿದೆ. ಬೆಂಗಳೂರಿನಲ್ಲಿ ವಾರ್ಷಿಕ ಬೀಳುವ ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ನೀರು ಪಡೆಯಬಹುದು. ಮತ್ತು ಅದೇ ನೀರನ್ನು ಮರು ಬಳಕೆ ಮಾಡುವ ಮೂಲಕ ಇಡೀ ಬೆಂಗಳೂರಿನ ನೀರಿನ ಅಗತ್ಯವನ್ನೇ ಪೂರೈಕೆ ಮಾಡಬಹುದು. ಅದಕ್ಕಾಗಿ ಪರಿಸರಕ್ಕೆ ತೀರಾ ಮಾರಕವಾಗಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತಿರುವುದು ಅನಾಹುತಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ಸಂವಾದ ಸಭೆಯಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು:
ಅಂತರ್ಜಾಲ ಮಾಹಿತಿ
ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…
ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…
ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…
ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…