ಕೃಷಿ(Agriculture) ಅನ್ನೋದು ಒಂದು ಸಮಾಧಾನ, ನೆಮ್ಮದಿ, ಖುಷಿ, ಸಂತೋಷ. ನಾಳೆಯ ಬದುಕಿನ ಆಸರೆ, ಭರವಸೆ. ಒಂದು ಜಮೀನಿನಲ್ಲಿ ಏನಾದರು ಬೆಳೆದರೆ, ಅದು ಮುಂದಿನ ಕೆಲವು ದಿನ, ತಿಂಗಳು, ಅಥವಾ ವರ್ಷದಲ್ಲಿ ಫಸಲು ನೀಡುತ್ತೆ, ನಮ್ಮ ಕಷ್ಟಕ್ಕೆ ಕೈ ಹಿಡಿಯುತ್ತೆ ಅನ್ನುವ ಭರವಸೆಯಲ್ಲಿ ರೈತ(Farmer) ಕೃಷಿ ಮಾಡಿರುತ್ತಾನೆ. ಅದನ್ನು ಕಷ್ಟಪಟ್ಟು ಪ್ರೀತಿಯಿಂದ ಸಾಕಿರುತ್ತಾನೆ. ಆದರೆ ಆ ಬೆಳೆ ಯಾರೋದೋ ಹುಂಬುತನಕ್ಕೆ ಬಲಿಯಾದರೆ ಅದನ್ನು ಬೆಳೆದ ರೈತ ಏನಾಗಬೇಡ..? ಇಲ್ಲಿ ಆದದ್ದೂ ಅದೇ. ಜಮೀನು ವಿವಾದದ ಹಿನ್ನಲೆಯಲ್ಲಿ 70ಕ್ಕೂ ಹೆಚ್ಚು ತೆಂಗಿನಮರಗಳನ್ನು(coconut tree) ಕಿಡಿಗೇಡಿಗಳು ನಾಶ ಮಾಡಿದ್ದಾರೆ. 5 ವರ್ಷ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ತೆಂಗಿನ ಗಿಡಗಳನ್ನು ಕಳೆದುಕೊಂಡ ರೈತನ ಪರಿಸ್ಥಿತಿ ಏನಾಗಬೇಡ.
ಈ ಘಟನೆ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣಮೂರ್ತಿ ಹಾಗೂ ಕುಶಾಲ ಎಂಬವರ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಜಮೀನಿನ ಬಳಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಐದು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನಮರಗಳನ್ನು ಕಳೆದುಕೊಂಡು ರೈತರು (Farmer) ಕಣ್ಣೀರಿಟ್ಟಿದ್ದಾರೆ.
ನುಗ್ಗೇಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಂದಲೇ ಆಗಿರುವ ನಷ್ಟ ಭರಿಸುವಂತೆ ರೈತ ಕೃಷ್ಣಮೂರ್ತಿ ಹಾಗೂ ಕುಶಾಲ ಒತ್ತಾಯಿಸಿದ್ದಾರೆ.
Miscreants have destroyed more than 70 coconut trees in the background of land dispute. What should be the situation of the farmer who has lost the coconut plants that he cultivated for 5 years. This incident took place in Santeshivara village of Channarayapatna. The miscreants have cut down the coconut trees growing in the land of Krishnamurthy and Kushala of the village.
- ಅಂತರ್ಜಾಲ ಮಾಹಿತಿ
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…