ಸುಳ್ಯದ ಸಾಯಿಶೃತಿ ಅವರಿಗೆ ‘MISS WORLD INTERNATIONAL INDIA’ ಸೆಕೆಂಡ್ ರನ್ನರ್ ಅಪ್ಅವಾರ್ಡ್

February 28, 2024
11:13 PM
ಸುಳ್ಯದ ಸಾಯಿಶೃತಿ ಪಿಲಿಕಜೆ ಅವರಿಗೆ ಬಹುಮಾನ.

ಧ್ವನಿ ಮಾಯೆ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಸುಳ್ಯದ ಹುಡುಗಿ ಸಾಯಿಶೃತಿ ಪಿಲಿಕಜೆ ಹೈದರಾಬಾದ್ ನಲ್ಲಿ ನಡೆದ ‘MISS WORLD INTERNATIONAL INDIA’ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಅವಾರ್ಡ್ ಪಡೆದುಕೊಂಡಿದ್ದಾರೆ.

Advertisement
Advertisement
Advertisement

ಪ್ರತಿಭಾವಂತ ಹುಡುಗಿ ಸಾಯಿಶೃತಿ ಪಿಲಿಕಜೆ ಧ್ವನಿ ಮಾಯೆ ಕಲಾವಿದೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಈ ಹಿಂದೆ ಗುರುತಿಸಿದ್ದನ್ನು ಸ್ಮರಿಸಬಹುದು.

Advertisement

ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯ ತಾಲೂಕು ಅಮರ ಮೂಡ್ನೂರು ಗ್ರಾಮದ ಸಾಯಿಶ್ರುತಿ ಪ್ರತಿಭಾವಂತೆ. ಪಿಲಿಕಜೆ ಮನೆಯ ‌  ಶಿವಸಾಯಿ ಭಟ್ ಪಿಲಿಕಜೆ ಹಾಗೂ ಸುಜ್ಯೋತಿ ದಂಪತಿಗಳ  ಮಗಳು ಸಾಯಿಶ್ರುತಿ.  ಪ್ರೌಢ -ಪದವಿಪೂರ್ವ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಳಾರೆಯಲ್ಲಿ ಪಡೆದು, ಬಳಿಕ 1 ವರ್ಷ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ,ಸುಳ್ಯದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಪದವಿಯನ್ನೂ ಗಳಿಸಿ, ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಎಂಬಿಎ ಮಾಡಿರುತ್ತಾರೆ.

Advertisement

ಮಿಮಿಕ್ರಿ , ಭಾಷಣ, ಯಕ್ಷಗಾನ, ನಾಟಕ, ಹಾಡು, ನೃತ್ಯ ದಲ್ಲಿ ಪರಿಣಿತಿ ಹೊಂದಿದ  ಸಾಯಿಶೃತಿ ಪಿಲಿಕಜೆ ಕಳೆದ 5 ವರ್ಷಗಳಿಂದ ಬೊಂಬೆ – ಚಿಂಟೂ ವನ್ನು ಜೊತೆಗಾರನ್ನಾಗಿ ಮಾಡಿಕೊಂಡು, ಅದಕ್ಕೆ ಜೀವ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ.” ಮಾತನಾಡುವ ಬೊಂಬೆ – ಚಿಂಟೂ ” ಎಂಬ ವಿನೂತನ ಕಾರ್ಯಕ್ರಮ ವನ್ನು ಪ್ರಾರಂಭಿಸಿದ ಸಾಯಿಶೃತಿ ಮಾತೇ ಮಾಣಿಕ್ಯವಾಗಿ ಮನರಂಜಿಸುವಲ್ಲಿ ಯಶಸ್ವಿಗೊಂಡು, ಸುಳ್ಯ, ಬೆಳ್ಳಾರೆ, ಪುತ್ತೂರು, ಸುಬ್ರಹ್ಮಣ್ಯ, ಕೇರಳ, ಬೆಂಗಳೂರು, ಗುಲ್ಬರ್ಗ, ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡುವುದರ ಜೊತೆಗೆ, Online ಮೂಲಕ ಅಮೆರಿಕದ ಕನ್ನಡಿಗರಿಗೆ ಕಾರ್ಯಕ್ರಮ ಕೊಟ್ಟಿರುತ್ತಾರೆ.

ಸುಳ್ಯ, ಪುತ್ತೂರು, ಉಜಿರೆ, ಗುಲ್ಬರ್ಗ, ಮೊದಲಾದ ಊರಿನ ಸಂಘ – ಸಂಸ್ಥೆಗಳಿಂದ ಗೌರವ ಸನ್ಮಾನಗಳ ಜೊತೆಗೆ ‌ಶೈನಿಂಗ್ ಸ್ಟಾರ್ ನ್ಯಾಷನಲ್ ಪ್ರೈಡ್ ಎವಾರ್ಡ್, ಜೋನ್ 15 ಗಾಟ್ ಟ್ಯಾಲೆಂಟ್‌ ಯೂತ್ ಐಕಾನ್ ಆಫ್ ದ ಇಯರ್ 2023, ಕ್ವೀನ್ ಆಫ್ ಜೋನ್ 15 ಅವಾರ್ಡ್ ಆಫ್ ಎಕ್ಸಲೆನ್ಸ್, ಯೂನಿಕಾನ್ ವರ್ಡ್ ರೆಕಾರ್ಡ್ ಪ್ರಶಸ್ತಿ ಗಳನ್ನು ಗಳಿಸಿರುತ್ತಾರೆ.

Advertisement

ನಾಡಿನಾದ್ಯಂತ ಉತ್ತಮ ಮಾತುಗಾರ್ತಿಯಾದ  ಸಾಯಿಶೃತಿ ಪಿಲಿಕಜೆ ಮಾತಿನ ಮೂಲಕ ಚಿಂಟೂ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಕಲಾರಾಧನೆ ಮೂಲಕ ಜನ – ಮನ ರಂಜಿಸಿ ಪ್ರಖ್ಯಾತಿ ಗಳಿಸಿದ ಕಲಾವಿದೆ.

ಬರಹ ಮಾಹಿತಿ : ಬಾಲು ದೇರಾಜೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror