ಮಿಜೋರಾಂ ಅಡಿಕೆ ಬೆಳೆಗಾರರ ಬೇಡಿಕೆ ಈಡೇರಿಕೆಗೆ ಒತ್ತಾಯ | ವಾರಗಳ ಕಾಲ ಮುಷ್ಕರಕ್ಕೆ ಕರೆ | ಅಡಿಕೆ ಸಾಗಾಟಕ್ಕೆ ಹೆಚ್ಚಿದ ಒತ್ತಡ |

November 1, 2022
9:07 PM

ಮಿಜೋರಾಂ ಪ್ರದೇಶದ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಸಮೀಪ ಅಥವಾ ರಾಜ್ಯದ ಹೊರಗೆ ಸಾಗಿಸಲು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಇದೀಗ ಅಡಿಕೆ ಬೆಳೆಗಾರರು ಹೋರಾಟಕ್ಕೆ ಮುಂದಾಗಿದ್ದಾರೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಗಡಿಯಲ್ಲಿರುವ  ಮಿಜೋರಾಂನ ಮಮಿತ್ ಜಿಲ್ಲೆಯ ಹಚೆಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಡಿಕೆ ಬೆಳೆಗಾರರು ಒಂದು ವಾರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆರಂಭದ 4 ದಿನಗಳ ಕಾಲ ಕಚೇರಿಗಳಿಗೆ ಮುತ್ತಿಗೆ ಹಾಗೂ ಆ ಬಳಿಕ ಹೆದ್ದಾರಿ ತಡೆ ನಡೆಸಲು ನಿರ್ಧರಿಸಿದ್ದಾರೆ.

Advertisement
Advertisement
Advertisement

ಮಂಗಳವಾರದಿಂದ ಪ್ರಾರಂಭವಾದ  ಮುಷ್ಕರ ವಾರಗಳ ಕಾಲ ನಡೆಯಲಿದೆ. ಮಿಜೋರಾಂನ ಹಚ್ಚೇಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 32 ಗ್ರಾಮಗಳ ಪೈಕಿ 30 ಗ್ರಾಮಗಳಲ್ಲಿ ಅಡಿಕೆ ತೋಟವಿದೆ. ಆದರೆ ಇಲ್ಲಿ ಬೆಳೆದ ಅಡಿಕೆಯ ಸಾಗಾಟಕ್ಕೆ ಕಷ್ಟವಾಗುತ್ತಿದೆ ಎಂಬುದು  ಅಲ್ಲಿನ ಬೆಳೆಗಾರರ ಆರೋಪ. ಅಸ್ಸಾಂ ಪೊಲೀಸರು ಅಡಿಕೆ ಸಾಗಾಟವನ್ನು ತಡೆಯುತ್ತಿದ್ದಾರೆ. ಅಸ್ಸಾಂ, ಮಿಜೋರಾಂ ಮೂಲಕ ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಅಡಿಕೆ ಸಾಗಾಟವನ್ನು  ತಡೆಯುತ್ತಿದ್ದಾರೆ.

Advertisement

ಮಿಜೋರಾಂ ಅಡಿಕೆ ಬೆಳೆಗಾರರ ಸಂಘವು ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಹಾಗೂ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬೆಳೆಗಾರರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಸರ್ಕಾರವು ರೈತರಿಗೆ ಗುರುತಿನ ಚೀಟಿ ನೀಡುವುದಾಗಿ ಹೇಳಿತ್ತು. ಇದರಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಇರಲಿಲ್ಲ. ಹಾಗಿದ್ದರೂ ಇದೀಗ ಪ್ರತಿಭಟನೆ ಆರಂಭವಾಗಿದೆ. ನ.8 ಕ್ಕೂ ಮೊದಲು  ಸಂಕಷ್ಟಗಳನ್ನು ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳದೇ ಇದ್ದರೆ ನ.9 ರಿಂದ ಹಚೆಕ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಸಂಪೂರ್ಣ ಬಂದ್ ಮಾಡುವುದಾಗಿ ಅಡಿಕೆ ಬೆಳೆಗಾರರು ಹೇಳಿದ್ದಾರೆ.

ಅಸ್ಸಾಂ ಸರ್ಕಾರವು  ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿರುವ  ಒಣ ಅಡಿಕೆಗಳ ಸಾಗಾಣಿಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದೀಗ ಮಿಜೋರಾಂ ಅಡಿಕೆ ಬೆಳೆಗಾರರ ಮೂಲಕ ಅಡಿಕೆ ಕಳ್ಳಸಾಗಾಣಿಕೆದಾರರು ಹೊಸದೊಂದು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಇಲಾಖೆಗಳ ಸಂದೇಹವಾಗಿದೆ. ಮಿಜೋರಾಂನಲ್ಲಿ ಹಸಿ ಅಡಿಕೆಯ ವ್ಯವಹಾರಗಳೇ ಹೆಚ್ಚಾಗಿ ನಡೆಯುತ್ತಿರುವಾಗ ಒಣ ಅಡಿಕೆ ಸಾಗಾಟ ನಿಷೇಧ ತೆರವು ಬಗ್ಗೆ ನಡೆಸುತ್ತಿರುವ ಹೋರಾಟವೂ ಇದೇ ಉದ್ದೇಶವಾಗಿದೆ ಎಂದು ಚರ್ಚೆಯಾಗುತ್ತಿದೆ.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror