ಬರ್ಮಾದಿಂದ ಅಡಿಕೆ ಕಳ್ಳಸಾಗಾಣಿಕೆ | ಕಳ್ಳಸಾಗಾಣಿಕೆ ತಡೆಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಶಾಸಕ |

November 9, 2022
10:58 PM

ಮಿಜೋರಾಂನಲ್ಲಿ ನಡೆಯುತ್ತಿರುವ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯಿಂದಾಗಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು ತಕ್ಷಣವೇ ಅಡಿಕೆ ಕಳ್ಳಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಿಜೋರಾಂನ ಕಾಂಗ್ರೆಸ್ ಶಾಸಕ ಲಾಲ್ರಿಂಡಿಕಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಮಿಜೋರಾಂನ ಪೂರ್ವ ಭಾಗದಲ್ಲಿರುವ ಗಡಿಯ ಮೂಲಕ ನೆರೆಯ ಮ್ಯಾನ್ಮಾರ್, ಬರ್ಮಾ ಮತ್ತು ಇತರೆಡೆಗಳಿಂದ ಒಣ ಅಡಿಕೆಯನ್ನು ವ್ಯಾಪಕವಾಗಿ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಲಾಲ್ರಿಂಡಿಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಅಡಿಕೆಯ ಅಕ್ರಮ ಆಮದನ್ನು ತಡೆಯಲು ಮಿಜೋರಾಂ ಮತ್ತು ಮಣಿಪುರ ಸರ್ಕಾರಗಳಿಗೆ ಕೇಂದ್ರವು ನಿರ್ದೇಶನ ನೀಡಿದ್ದರೂ, ಯಾವುದೇ ಕ್ರಮ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಮಿಜೋರಾಂನ ಮಮಿತ್ ಜಿಲ್ಲೆಯ ಹಚೆಕ್  ಪ್ರದೇಶವು ಅತಿ ಹೆಚ್ಚು ಅಡಿಕೆ ಉತ್ಪಾದಿಸುವ ಪ್ರದೇಶವಾಗಿದೆ, ಅಲ್ಲಿ ಸುಮಾರು 70 ಪ್ರತಿಶತ ನಿವಾಸಿಗಳು ದಶಕಗಳಿಂದ ಅಡಿಕೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.ಇದೀಗ ಅಡಿಕೆ ಆಮದು ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಕ್ಕೆ ಅಕ್ರಮ ಅಡಿಕೆ ಪ್ರವೇಶವನ್ನು ತಡೆಯಲು ಅಸ್ಸಾಂ ಸರ್ಕಾರವು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಮಿಜೋರಾಂನಲ್ಲಿ ಬೆಳೆಯುವ ಅಡಿಕೆ ಸಾಗಾಟಕ್ಕೆ ಕಷ್ಟವಾಗಿದೆ. ಬರ್ಮಾ ಅಡಿಕೆ ಆಮದು ತಡೆಯಾಗದ ಕಾರಣ  ಸ್ಥಳೀಯ ರೈತರಿಗೆ ತೀವ್ರ ಮಾರುಕಟ್ಟೆ ಸಮಸ್ಯೆಗೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror