ಅಸ್ಸಾಂ ಗಡಿಯಲ್ಲೇ ಅಡಿಕೆ ಹಬ್…! 30,000 ಹೆಕ್ಟೇರ್ ಅಡಿಕೆ ಕೃಷಿಗೆ ಬಲ – ಮಿಜೋರಾಂ ಸಿಎಂ ಉದ್ಘಾಟಿಸಿದ ಹೊಸ ಘಟಕ

January 31, 2026
10:13 PM

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಶುಕ್ರವಾರ ಅಸ್ಸಾಂ ಗಡಿಯ ಬಳಿಯ ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಹೊಸ ಅಡಿಕೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

Advertisement
Advertisement

ಎಸ್‌ಎಸ್‌ಬಿ ಆಗ್ರೋ ಸಂಸ್ಥೆ ಸ್ಥಾಪಿಸಿರುವ ಈ ಘಟಕವು ರಾಜ್ಯದ ಕೃಷಿ ವಲಯವನ್ನು ಬಲಪಡಿಸುವುದರ ಜೊತೆಗೆ, ಈ ಪ್ರದೇಶದ ಅಡಿಕೆ ರೈತರಿಗೆ ವಿಶ್ವಾಸಾರ್ಹ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶ ಹೊಂದಿದೆ.  ಬುಹ್ಚಾಂಗ್‌ಫಾಯಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಪಿಸಿ ವನ್ಲಾಲ್ರುವಾಟಾ, ಉಪ ಸ್ಪೀಕರ್ ಲಾಲ್ಫಮ್ಕಿಮಾ ಹಾಗೂ ಮುಖ್ಯಮಂತ್ರಿ ಸಲಹೆಗಾರ ಮತ್ತು ಶಾಸಕ ಲಾಲ್ಮುವಾನ್‌ಪುಯಾ ಪುಂಟೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಲಾಲ್ದುಹೋಮಾ, ರಾಜ್ಯದಲ್ಲಿ ಪ್ರಸ್ತುತ ಸುಮಾರು 30,000 ಹೆಕ್ಟೇರ್‌ ಭೂಮಿಯಲ್ಲಿ ಅಡಿಕೆ ಕೃಷಿ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಸರ್ಕಾರ ಅಡಿಕೆ ಕಳ್ಳಸಾಗಣೆ ವಿರುದ್ಧ ಕೈಗೊಂಡ ಕ್ರಮಗಳಿಂದ ಸ್ಥಳೀಯ ರೈತರಿಗೆ ಉತ್ತಮ ಮಾರುಕಟ್ಟೆ ಲಾಭ ದೊರಕುತ್ತಿದೆ ಎಂದು ಹೇಳಿದರು.

ರಾಜ್ಯದ ಕೈಗಾರಿಕಾ ಮೂಲಸೌಕರ್ಯ ವಿಸ್ತಾರವಾಗುತ್ತಿದ್ದು, ಕೊಲಾಸಿಬ್ ಜಿಲ್ಲೆಯ ಚೆಂಫೈ ಹಾಗೂ ಮಾಮಿತ್ ಜಿಲ್ಲೆಯ ಜಮುವಾಂಗ್‌ನಲ್ಲಿ ಸರ್ಕಾರದ ವತಿಯಿಂದ ಸ್ಥಾಪಿಸಲಾಗುತ್ತಿರುವ ಸಂಸ್ಕರಣಾ ಘಟಕಗಳು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲು ನಿರೀಕ್ಷಿಸಲಾಗಿದೆ ಎಂದರು.

ಎಸ್‌ಎಸ್‌ಬಿ ಆಗ್ರೋದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಮಿಜೋರಾಂ ಅಡಿಕೆ ಮಾರ್ಕೆಟಿಂಗ್ ಕೋಆಪರೇಟಿವ್ ಸೊಸೈಟಿಯೊಂದಿಗಿನ ಸಂಸ್ಥೆಯ ಖರೀದಿ ಒಪ್ಪಂದವನ್ನು ಸ್ವಾಗತಿಸಿ, ಈ ಪಾಲುದಾರಿಕೆ ಸ್ಥಳೀಯ ರೈತ ಸಮುದಾಯಕ್ಕೆ ಮಹತ್ತರ ಪ್ರಯೋಜನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಸಣ್ಣ ರೈತರಿಗೆ ಇಲ್ಲಿ ‘ಎಟಿಎಂ’ ಈ ಹಸು ! ಹಾಲಿನಲ್ಲಿ 8.4% ಕೊಬ್ಬು , ತುಪ್ಪದ ರೇಟು ಭರ್ಜರಿ..!
January 31, 2026
10:56 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು: ಸಿದ್ದರಾಮಯ್ಯ ಕರೆ
January 31, 2026
2:55 PM
by: ಮಿರರ್‌ ಡೆಸ್ಕ್
ಆಯುಷ್ಮಾನ್ ಚಿಕಿತ್ಸೆ ನಿರಾಕರಿಸುವಂತಿಲ್ಲ‌ | ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಡಿಹೆಚ್ಒ ಖಡಕ್ ಸೂಚನೆ
January 31, 2026
6:43 AM
by: ಮಿರರ್‌ ಡೆಸ್ಕ್
ಕೇಂದ್ರ ಬಜೆಟ್‌ಗೆ ಕ್ಷಣಗಣನೆ | ರಾಜ್ಯದಲ್ಲಿ ಬಜೆಟ್ ನಿರೀಕ್ಷೆ ಹೆಚ್ಚಳ; MSME ಕ್ಷೇತ್ರಕ್ಕೆ ಬೆಂಬಲ ಬೇಕು
January 31, 2026
6:40 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror