ಗಡಿಯಲ್ಲೇ ಗಡಿ ಮೀರಿ ಭ್ರಷ್ಟಾಚಾರ ! ಅಡಿಕೆ ಕಳ್ಳಸಾಗಾಟಕ್ಕೆ ಲಂಚ…!?

February 10, 2026
6:03 AM
ಮಿಜೋರಾಂನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ₹35 ಲಕ್ಷ ಲಂಚ ಪಡೆದ ಆರೋಪ. ಮೂವರು ಅಧಿಕಾರಿಗಳ ವಿರುದ್ಧ CBI ಎಫ್‌ಐಆರ್‌, ಹಲವು ರಾಜ್ಯಗಳಲ್ಲಿ ದಾಳಿ – ಭ್ರಷ್ಟಾಚಾರ ಬಯಲಿಗೆ ಬಂದಿದೆ.

ಕೇಂದ್ರ ತನಿಖಾ ದಳ(CBI) ಮಿಜೋರಾಂನಲ್ಲಿ ಕಾರ್ಯನಿರ್ವಹಿಸಿದ್ದ ಮೂರು ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ₹35 ಲಕ್ಷ ಲಂಚ ಪಡೆದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಜಪ್ತಿ ಮಾಡಿದ ಸರಕುಗಳನ್ನು ಬಿಡುಗಡೆ ಮಾಡಲು ಲಂಚ ಬೇಡಿಕೆ ಇಟ್ಟಿದ್ದರೆಂಬ ಆರೋಪ ಇವರ ಮೇಲೆ ಇದೆ.

ಆರೋಪಿಗಳು 2022–23ರ ಅವಧಿಯಲ್ಲಿ ಮಿಜೋರಾಂನ ಚಂಪೈಯಲ್ಲಿ ಕಸ್ಟಮ್ಸ್‌ ಪ್ರಿವೆಂಟಿವ್‌ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಲ್ಲಿ ಒಬ್ಬ ನಿವೃತ್ತ ಸೂಪರಿಂಟೆಂಡೆಂಟ್‌ ಹಾಗೂ ಇಬ್ಬರು ಇನ್‌ಸ್ಪೆಕ್ಟರ್‌ಗಳು ಸೇರಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಸಿಬಿಐ ಪ್ರಕಾರ, ಜಪ್ತಿ ಮಾಡಲಾಗಿದ್ದ ಸರಕುಗಳನ್ನು ಹಣ ಪಡೆದು ಬಿಡುಗಡೆ ಮಾಡಲಾಗಿದ್ದು, ನಂತರ ನಡೆದ ಪರಿಶೀಲನೆಯಲ್ಲಿ ₹1.42 ಕೋಟಿ ಮೌಲ್ಯದ ವಸ್ತುಗಳು ದಾಖಲೆ ಮತ್ತು ಗೋದಾಮುಗಳಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಭ್ರಷ್ಟಾಚಾರದ ಪ್ರಮಾಣ ಇನ್ನಷ್ಟು ಗಂಭೀರವಾಗಿರುವ ಅನುಮಾನ ವ್ಯಕ್ತವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಪ್ರಕರಣದ ತನಿಖೆ ಸಂಬಂಧ ಅಸ್ಸಾಂ, ಅರುಣಾಚಲ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಣಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದ್ದು, ಮಧ್ಯವರ್ತಿಗಳ ಪಾತ್ರ ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ.

ಭಾರತ–ಮ್ಯಾನ್ಮಾರ್‌ ಗಡಿ ಪ್ರದೇಶವಾಗಿರುವ ಮಿಜೋರಾಂನಲ್ಲಿ ಅಡಿಕೆ, ವಿದೇಶಿ ಸಿಗರೇಟು ಸೇರಿದಂತೆ ವಿವಿಧ ಸರಕುಗಳ ಅಕ್ರಮ ಸಾಗಣೆ ವರ್ಷಗಳಿಂದ ಸಮಸ್ಯೆಯಾಗಿದ್ದು, ಇಂತಹ ಭ್ರಷ್ಟಾಚಾರ ಪ್ರಕರಣಗಳು ಗಡಿ ಪ್ರದೇಶದ ಕಾನೂನು ಜಾರಿಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎಬ್ಬಿಸುತ್ತಿವೆ.

ಇದನ್ನೂ ಓದಿ..

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ….? | ಪ್ರೋತ್ಸಾಹಧನ 5 ರಿಂದ 7 ರೂ.ಗೆ ಹೆಚ್ಚಿಸುವ ಚಿಂತನೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು
ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!
March 23, 2026
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror